ಸ್ಫೋಟಕ ಪ್ರದರ್ಶನ ನೀಡಿದ್ರೂ ವೈಭವ್ ಕೈಬಿಟ್ಟ ಬಿಸಿಸಿಐ ಕೊಟ್ಟ ಕಾರಣವಿದು
- ಟೀಮ್ ಇಂಡಿಯಾದ ಯುವ ಬ್ಯಾಟಿಂಗ್ ಸೆನ್ಸೇಷನ್ ವೈಭವ್ ಸೂರ್ಯವಂಶಿ
- 15 ಸದಸ್ಯರ ಅಂಡರ್-19 ತಂಡವನ್ನು ಅಧಿಕೃತವಾಗಿ ಘೋಷಿಸಿದ ಬಿಸಿಸಿಐ
- ವೈಭವ್ ಸೂರ್ಯವಂಶಿಯನ್ನು ತಂಡದಿಂದ ಕೈಬಿಡಲು ಬಿಸಿಸಿಐ ಕೊಟ್ಟ ಮುಖ್ಯ ಕಾರಣವಿದು
Vaibhav Sooryavanshi: ಟೀಮ್ ಇಂಡಿಯಾದ ಯುವ ಬ್ಯಾಟಿಂಗ್ ಸೆನ್ಸೇಷನ್ ವೈಭವ್ ಸೂರ್ಯವಂಶಿ ವಿಚಾರದಲ್ಲಿ ಇದೀಗ ಬಿಸಿಸಿಐ ಮಹತ್ವದ ನಿರ್ಧಾರವೊಂದನ್ನು ಕೈಗೊಂಡಿದೆ.
ಟೀಮ್ ಇಂಡಿಯಾ ದಿಗ್ಗಜರ ಪುತ್ರರಿಗೆ ಚಾನ್ಸ್
ಈಗಾಗಲೇ ಅಂತಾರಾಷ್ಟ್ರೀಯ ತಂಡದಲ್ಲಿ ಅವಕಾಶ ಗಿಟ್ಟಿಸಿಕೊಂಡ ಈ 15 ವರ್ಷ ಪೋರ, ಇಂಗ್ಲೆಂಡ್ ಪ್ರವಾಸದಲ್ಲಿ ಟೀಮ್ ಇಂಡಿಯಾ ಪರ ಆಡಿದ್ದು ಹೊಸ ದಾಖಲೆಗಳಿಗೂ ಸಾಕ್ಷಿಯಾಯಿತು. ಈಗ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಗಾಗಿ ಬಿಸಿಸಿಐ 15 ಸದಸ್ಯರ ಅಂಡರ್-19 ತಂಡವನ್ನು ಅಧಿಕೃತವಾಗಿ ಘೋಷಿಸಿದೆ. ವಿಶೇಷ ಎಂದರೆ, ಈ ಟೀಮ್ನಲ್ಲಿ ಟೀಮ್ ಇಂಡಿಯಾದ ಶ್ರೇಷ್ಠ ಆಟಗಾರರಾದ ವೀರೇಂದ್ರ ಸೆಹ್ವಾಗ್ ಮತ್ತು ರಾಹುಲ್ ದ್ರಾವಿಡ್ ಅವರ ಪುತ್ರರಾದ ಆರ್ಯವೀರ್ ಸೆಹ್ವಾಗ್ ಮತ್ತು ಅನ್ವೇ ದ್ರಾವಿಡ್ ಇಬ್ಬರೂ ಸ್ಥಾನ ಪಡೆದಿದ್ದಾರೆ. ಆದ್ರೆ, ವೈಭವ್ಗೆ ಮಾತ್ರ ಇಲ್ಲಿ ಅವಕಾಶ ಕೊಟ್ಟಿಲ್ಲ.
'ಬೇಬಿ ಬಾಸ್' ಕೈಬಿಟ್ಟಿದ್ದೇಕೆ?
ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಭಾರಿ ಭರವಸೆಯನ್ನು ಮೂಡಿಸಿರುವ ವೈಭವ್ ಸೂರ್ಯವಂಶಿಗೆ ಈ ತಂಡದಲ್ಲಿ ಸ್ಥಾನ ನೀಡಲು ಬಿಸಿಸಿಐ ಹಿಂದೇಟು ಹಾಕಿದೆ. ಇದಕ್ಕೆ ಒಂದು ಬಲವಾದ ಕಾರಣವೂ ಇದೆ. ಟೀಮ್ ಇಂಡಿಯಾದ ಹಿರಿಯ ಕ್ರಿಕೆಟ್‌ನಲ್ಲಿ ತನ್ನನ್ನು ತಾನು ಗುರುತಿಸಿಕೊಂಡು ವೇಗದಲ್ಲಿ ಮಿಂಚುತ್ತಿರುವ ವೈಭವ್, ಜೂನಿಯರ್ ತಂಡದಲ್ಲಿ ಸ್ಥಾನ ಪಡೆಯುವಲ್ಲಿ ವಿಫಲವಾದ ಬೆನ್ನಲ್ಲೇ ಜಾಲತಾಣಗಳಲ್ಲಿ ಕ್ರಿಕೆಟ್ ಪ್ರಿಯರ ಚರ್ಚೆ ಜೋರಾಗಿದೆ. ಅಷ್ಟಕ್ಕೂ ವೈಭವ್ರನ್ನು ಆಯ್ಕೆ ಮಾಡದಿರಲು ಬಿಸಿಸಿಐ ಪರಿಗಣಿಸಿದ ಕಾರಣವೇನು? ಎಂಬ ಪ್ರಶ್ನೆಗೆ ಹೀಗಿದೆ ನೋಡಿ ಉತ್ತರ.
ವಯಸ್ಸಿನ ಪ್ರಕಾರ ಅರ್ಹತೆ ಹೊಂದಿದ್ದರೂ ಸಹ ಆಟಗಾರರು ಅಂಡರ್-19 ವಿಶ್ವಕಪ್‌ನಲ್ಲಿ ಒಮ್ಮೆ ಮಾತ್ರ ಆಡಲು ಅವಕಾಶವಿದೆ ಎಂಬುದು ಬಿಸಿಸಿಐ ಮೂಲ ನಿಯಮ. ಇದನ್ನು ಮಂಡಳಿ 2016ರಲ್ಲೇ ಜಾರಿಗೆ ತಂದಿತು. ಸೂರ್ಯವಂಶಿ 2026ರ ಅಂಡರ್-19 ವಿಶ್ವಕಪ್‌ನಲ್ಲಿ ಆಡಿದ್ದು ಹಾಗೂ ದಾಖಲೆ ಬರೆದಿದ್ದು ಕ್ರಿಕೆಟ್ ಪ್ರೇಮಿಗಳಿಗೆ ಸೇರಿ ಬಹುತೇಕರಿಗೆ ಗೊತ್ತೇ ಇದೆ. ಹೀಗಾಗಿಯೇ, ನಿಯಮವನ್ನು ಗಮನದಲ್ಲಿರಿಸಿ ಮತ್ತೊಂದು ಆವೃತ್ತಿಯಲ್ಲಿ ಭಾಗವಹಿಸಲು ಎರಡನೇ ಅವಕಾಶ ಕೊಡುವುದು ಬೇಡ ಎಂದು ಬಿಸಿಸಿಐ ನಿರ್ಧರಿಸಿದೆ.
ಈ ನಿಯಮ ಜಾರಿಯಾದ ಮೇಲೆ ವಾಷಿಂಗ್ಟನ್ ಸುಂದರ್ ಅವರು 2018ರಲ್ಲಿ ಅಂಡರ್-19 ವಿಶ್ವಕಪ್ ಆಡಲು ಸಾಧ್ಯವಾಗಲಿಲ್ಲ. ಈ ಕಠಿಣ ರೂಲ್ ಜಾರಿಗೆ ಬರುವ ಮುನ್ನ ಸರ್ಫರಾಜ್ ಖಾನ್, ಸಂದೀಪ್ ಶರ್ಮಾ, ವಿಜಯ್ ಜೋಲ್ ಸೇರಿದಂತೆ ಒಂದಷ್ಟು ಯುವ ಆಟಗಾರರು ಅಂಡರ್-19 ವಿಶ್ವಕಪ್‌ನಲ್ಲಿ ಎರಡು ಬಾರಿ ಆಡಿದ್ದಾರೆ. ಮತ್ತೊಂದೆಡೆ, ವೈಭವ್ ಸೂರ್ಯವಂಶಿ ಇದೇ ಸೆಪ್ಟೆಂಬರ್ 13ರಿಂದ ಅಫ್ಘಾನಿಸ್ತಾನ ವಿರುದ್ಧದ ಮೂರು ಪಂದ್ಯಗಳ ಟಿ20 ಸರಣಿಯಲ್ಲಿ ಭಾಗಿಯಾಗಲಿದ್ದು, ಅದಕ್ಕಾಗಿ ಮೈದಾನದಲ್ಲಿ ಭರ್ಜರಿ ತಯಾರಿ ಕೂಡ ನಡೆಸುತ್ತಿದ್ದಾರೆ.
ಭಾರತ ಅಂಡರ್-19 ತಂಡ (ಏಕದಿನ)
ಲಕ್ಷ್ಯ ರೈ ಚಂದಾನಿ (ನಾಯಕ), ಯಶವರ್ಧನ್ ಚೌಹಾಣ್ (ಉಪನಾಯಕ), ರಜತ್ ಬಘೇಲ್, ಆರ್ಯವೀರ್ ಸೆಹ್ವಾಗ್, ವಿ.ಕೆ. ವಿನೀತ್, ಕುಶಾಗ್ರ ಓಝಾ, ಅರ್ಜುನ್ ರಜಪೂತ್, ಮನಾಲ್ ಚೌಹಾಣ್, ಅನ್ವಯ್ ದ್ರಾವಿಡ್ (ವಿಕೆಟ್ ಕೀಪರ್), ವಿ. ಯಶ್‌ವೀರ್, ರೋಹಿತ್ ಯಾದವ್, ಶವಿನ್ ವಿನೋದ್, ಮೋಹಿತ್ ಉಲ್ವಾ, ಚಿಗುರುಪಟಿ ವೆಂಕಟ್ ಮತ್ತು ಕಾವ್ಯ ಪಟೇಲ್,(ಏಜೆನ್ಸೀಸ್).