ಟಿ20 ವಿಶ್ವಕಪ್​ ಟೂರ್ನಿಯ ನಡುವೆ ಮನೆ ಮೋಹ... ಟೀಮ್​ ಇಂಡಿಯಾ ಆಟಗಾರರ ವಿರುದ್ಧ ಆಕ್ರೋಶ, ಕಾದಿದೆಯಾ ಆಘಾತ? Team India  
ಕ್ರಿಕೆಟ್

ಟಿ20 ವಿಶ್ವಕಪ್​ ಟೂರ್ನಿಯ ನಡುವೆ ಮನೆ ಮೋಹ... ಟೀಮ್​ ಇಂಡಿಯಾ ಆಟಗಾರರ ವಿರುದ್ಧ ಆಕ್ರೋಶ, ಕಾದಿದೆಯಾ ಆಘಾತ? Team India

ಪ್ರಮುಖ ಮುಖ್ಯಾಂಶಗಳು

  • ಪ್ರಸ್ತುತ ನಡೆಯುತ್ತಿರುವ ಪ್ರತಿಷ್ಠಿತ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಸೆಮಿಫೈನಲ್ ಪ್ರವೇಶಿಸಿರುವ ಭಾರತ
  • ವೆಸ್ಟ್ ಇಂಡೀಸ್ ತಂಡವನ್ನು ಸೋಲಿಸಿ ಸೆಮಿಫೈನಲ್​ಗೆ ಲಗ್ಗೆ ಇಟ್ಟ ಸೂರ್ಯಕುಮಾರ್​ ಯಾದವ್​ ಪಡೆ
  • ಈಡನ್ ಗಾರ್ಡನ್ಸ್​ನಿಂದ ನೇರವಾಗಿ ಮುಂಬೈಗೆ ಬಂದಿಳಿದಿರುವ ಟೀಮ್​ ಇಂಡಿಯಾ
  • ಕೆಲ ಆಟಗಾರರು ಬಿಸಿಸಿಐ ನಿಯಮಗಳನ್ನು ಉಲ್ಲಂಘಿಸಿ ತಮ್ಮ ತಮ್ಮ ಮನೆಗೆ ತೆರಳಿದ್ದಾರೆ.
Team India : ಪ್ರಸ್ತುತ ನಡೆಯುತ್ತಿರುವ ಪ್ರತಿಷ್ಠಿತ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಆತಿಥೇಯ ಭಾರತ ಸೆಮಿಫೈನಲ್ ಪ್ರವೇಶಿಸಿರುವುದು ನಿಮಗೆಲ್ಲರಿಗೂ ತಿಳಿದೇ ಇದೆ. ವೆಸ್ಟ್ ಇಂಡೀಸ್ ತಂಡವನ್ನು ಸೋಲಿಸಿ ಭಾರತ ಸೆಮಿಫೈನಲ್​ಗೆ ಲಗ್ಗೆ ಇಟ್ಟಿದೆ. ಈ ಹಿನ್ನೆಲೆಯಲ್ಲಿ ಮಾರ್ಚ್ 5 ರಂದು ಇಂಗ್ಲೆಂಡ್ ಮತ್ತು ಟೀಮ್ ಇಂಡಿಯಾ ನಡುವೆ ಎರಡನೇ ಸೆಮಿಫೈನಲ್ ನಡೆಯಲಿದೆ. ಈ ಪಂದ್ಯ ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯಲಿದ್ದು, ಭಾರತ ತಂಡ ಈಡನ್ ಗಾರ್ಡನ್ಸ್​ನಿಂದ ನೇರವಾಗಿ ಮುಂಬೈಗೆ ಬಂದಿದ್ದು, ಅಭ್ಯಾಸದಲ್ಲಿ ಬಿಜಿಯಾಗಿದೆ. ಇದರ ನಡುವೆ ಟೀಮ್ ಇಂಡಿಯಾದ ಕೆಲ ಆಟಗಾರರು ಒಂದು ದೊಡ್ಡ ತಪ್ಪು ಮಾಡಿದ್ದಾರೆ. ಬಿಸಿಸಿಐ ನಿಯಮಗಳನ್ನು ಉಲ್ಲಂಘಿಸಿ, ತಮ್ಮ ತಮ್ಮ ಮನೆಗೆ ತೆರಳಿದ್ದಾರೆ.
ಹೌದು, ಕೆಲ ಆಟಗಾರರು ತಮ್ಮ ತಂಡವನ್ನು ತೊರೆದು ತಮ್ಮ ಪತ್ನಿಯರೊಂದಿಗೆ ಸ್ವಂತ ಕಾರುಗಳಲ್ಲಿ ಮನೆಗೆ ಹೋಗಿದ್ದಾರೆ. ಈ ಪಟ್ಟಿಯಲ್ಲಿ ಟೀಮ್​ ಇಂಡಿಯಾ ನಾಯಕ ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ ಮತ್ತು ಶಿವಂ ದುಬೆ ಸೇರಿದ್ದಾರೆ. ಈ ಮೂವರು ಆಟಗಾರರ ತವರು ಮುಂಬೈ ಅನ್ನೋದು ಎಲ್ಲರಿಗೂ ತಿಳಿದಿದೆ. ಹೀಗಾಗಿ, ಮನೆಗೆ ಹೋಗಿ ಸ್ವಲ್ಪ ಕಾಲ ವಿಶ್ರಾಂತಿ ಪಡೆಯಲು ನಿರ್ಧರಿಸಿದರು. ಸೋಮವಾರ ರಾತ್ರಿ ಮುಂಬೈ ವಿಮಾನ ನಿಲ್ದಾಣದಿಂದ ನೇರವಾಗಿ ಮನೆಗೆ ತೆರಳಿದ್ದಾರೆ.
ಅಂದಹಾಗೆ, ಬಿಸಿಸಿಐ ಸೂಚನೆಯಂತೆ ಭಾರತೀಯ ತಂಡದ ಉಳಿದ ಆಟಗಾರರು ಬಸ್‌ನಲ್ಲಿ ಪ್ರಯಾಣಿಸಿ ಹೋಟೆಲ್‌ನಲ್ಲಿ ತಂಗಿದ್ದಾರೆ. ಆದರೆ, ಹಾರ್ದಿಕ್​, ಸೂರ್ಯ ಮತ್ತು ದುಬೆ ತಮ್ಮ ಸ್ವಂತ ಕಾರುಗಳಲ್ಲಿ ಮನೆಗೆ ತೆರಳುತ್ತಿರುವುದಕ್ಕೆ ಸಂಬಂಧಿಸಿದ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿವೆ. ಇದರ ಬೆನ್ನಲ್ಲೇ ಬಿಸಿಸಿಐ ನಿಯಮಗಳ ಚರ್ಚೆಯಾಗುತ್ತಿದೆ. ಟೂರ್ನಿಯ ನಡುವೆ ಸ್ವಂತ ಮನೆಗಳಿಗೆ ಬರುವುದು ಪಂದ್ಯದ ಮೇಲೆ ಪರಿಣಾಮ ಬೀರುವುದಿಲ್ಲವೇ ಅನ್ನೋ ಪ್ರಶ್ನೆಗಳು ಮೂಡಿಬರುತ್ತಿವೆ. ಹೀಗಾಗಿ, ಬಿಸಿಸಿಐ ಕ್ರಮ ಕೈಗೊಳ್ಳಲು ಮುಂದಾಗಿದೆ ಎಂದು ಹೇಳಲಾಗುತ್ತಿದೆ.

ಬಿಸಿಸಿಐ ನಿಯಮಗಳೇನು?

2024ರ ಕೊನೆಯಲ್ಲಿ ಆಸ್ಟ್ರೇಲಿಯಾ ಮತ್ತು ಟೀಮ್ ಇಂಡಿಯಾ ನಡುವೆ ಬಾರ್ಡರ್ ಗವಾಸ್ಕರ್ ಟ್ರೋಫಿ ನಡೆದಿತ್ತು. ಆಗ ಟೀಮ್ ಇಂಡಿಯಾ ಹೀನಾಯವಾಗಿ ಸೋಲುಂಡಿತು. ಈ ಸಂದರ್ಭದಲ್ಲಿ, ಬಿಸಿಸಿಐ, ಟೀಮ್ ಇಂಡಿಯಾ ಆಟಗಾರರಿಗೆ ಕಠಿಣ ನಿಯಮಗಳನ್ನು ವಿಧಿಸಿತು. ಪಂದ್ಯಗಳ ಸಮಯದಲ್ಲಿ ಪತ್ನಿಯರು ಮತ್ತು ಗೆಳತಿಯರು ಬರಬಾರದು ಎಂದು ಷರತ್ತು ವಿಧಿಸಿತ್ತು. ಆಟಗಾರರು ತಂಡಕ್ಕಾಗಿ ವ್ಯವಸ್ಥೆ ಮಾಡಿದ ಬಸ್‌ನಲ್ಲಿ ಮಾತ್ರ ಪ್ರಯಾಣಿಸಬೇಕು ಎಂಬ ನಿಯಮವನ್ನೂ ಮಾಡಿದೆ.
ತಮ್ಮ ಸ್ವಂತ ಅಥವಾ ಖಾಸಗಿ ವಾಹನಗಳನ್ನು ಬಳಸಿಕೊಂಡು ಹೊರಗೆ ಹೋಗಬಾರದು ಎಂದು ಬಿಸಿಸಿಐ ಹೇಳಿದೆ. ಅಲ್ಲದೆ, ಆಟಗಾರರು ಬಿಸಿಸಿಐ ನಿಗದಿಪಡಿಸಿದ ಹೋಟೆಲ್‌ನಲ್ಲಿ ಮಾತ್ರ ಉಳಿಯಬೇಕಿದೆ. ಮನೆ ಹತ್ತಿರದಲ್ಲಿದೆ ಎಂಬ ಕಾರಣಕ್ಕೆ ಹೊರಗೆ ಹೋಗಬಾರದು. ಈ ರೀತಿ ಮಾಡಿದರೆ, ಬಿಸಿಸಿಐ ಪಂದ್ಯ ಶುಲ್ಕವನ್ನು ಕಡಿತಗೊಳಿಸುವ ಮೂಲಕ ಮತ್ತು ಒಂದು ಅಥವಾ ಎರಡು ಪಂದ್ಯಗಳನ್ನು ಆಡದಂತೆ ಕ್ರಮ ಕೈಗೊಳ್ಳುತ್ತದೆ. ಈಗ ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ ಮತ್ತು ಶಿವಂ ದುಬೆ ವಿರುದ್ಧ ಏನು ಕ್ರಮ ಕೈಗೊಳ್ಳುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ, (ಏಜೆನ್ಸೀಸ್​).