ಭಾರತ ವಿರುದ್ಧದ ಏಕದಿನ, ಟಿ20 ಸರಣಿಗೆ ದ.ಆಫ್ರಿಕಾ ತಂಡ ಪ್ರಕಟ
ಜೋಹನ್ಸ್‌ಬರ್ಗ್: ಭಾರತ ವಿರುದ್ಧದ ಎರಡನೇ ಟೆಸ್ಟ್‌ನಿಂದ ಹೊರಬಿದ್ದಿರುವ ದಕ್ಷಿಣ ಆಫ್ರಿಕಾ ತಂಡದ ವೇಗಿ ಕಗಿಸೊ ರಬಾಡ ಸೀಮಿತ ಓವರ್‌ಗಳ ಸರಣಿಗೂ ಅಲಭ್ಯರಾಗಿದ್ದಾರೆ. ಆತಿಥೇಯ ಭಾರತ ವಿರುದ್ಧದ ಏಕದಿನ ಹಾಗೂ ಐದು ಟಿ20 ಪಂದ್ಯಗಳ ಸರಣಿಗೆ ಹರಿಣಗಳ ತಂಡ ಪ್ರಕಟಿಸಲಾಗಿದ್ದು, ಟೆಂಬಾ ಬವುಮಾ, ಏಡೆನ್ ಮಾರ್ಕ್ರಮ್ ಕ್ರಮವಾಗಿ ಏಕದಿನ ಮತ್ತು ಟಿ20 ತಂಡಗಳನ್ನು ಮುನ್ನಡೆಸಲಿದ್ದಾರೆ.
ನಿವೃತ್ತಿ ಹಿಂಪಡೆದಿರುವ ವಿಕೆಟ್ ಕೀಪರ್-ಬ್ಯಾಟರ್ ಕ್ವಿಂಟನ್ ಡಿಕಾಕ್ (ಏಕದಿನ-ಟಿ20), ಟಿ20 ವಿಶ್ವಕಪ್‌ನಲ್ಲಿ ಕೊನೆಯದಾಗಿ ಆಡಿರುವ ವೇಗಿ ಆನ್ರಿಚ್ ನೋರ್ಕಿಯಾ (ಟಿ20) ಸ್ಥಾನ ಸಂಪಾದಿಸಿದ್ದಾರೆ. ನವೆಂಬರ್ 30ರಿಂದ ಡಿಸೆಂಬರ್ 6ರವರೆಗೆ ಏಕದಿನ ಸರಣಿ ನಡೆದರೆ, ಡಿಸೆಂಬರ್ 9ರಿಂದ ಟಿ20 ಸರಣಿ ಆರಂಭವಾಗಲಿದೆ.
ದ.ಆಫ್ರಿಕಾ ತಂಡ (ಏಕದಿನ-ಟಿ20): ಏಡೆನ್ ಮಾರ್ಕ್ರಮ್, ಡಿವಾಲ್ಡ್ ಬ್ರೆವಿಸ್, ಕ್ವಿಂಟನ್ ಡಿಕಾಕ್, ಟೋನಿ ಡಿ ಜಾರ್ಜಿ, ಮಾರ್ಕೋ ಜಾನ್ಸೆನ್, ಲುಂಗಿ ಎನ್‌ಗಿಡಿ, ಕೇಶವ್ ಮಹಾರಾಜ್, ಒಟ್ನಿಲ್ ಬಾರ್ಟ್‌ಮನ್. ಏಕದಿನಕ್ಕೆ ಮಾತ್ರ: ಟೆಂಬಾ ಬವುಮಾ, ಮ್ಯಾಥ್ಯೂ ಬ್ರಿಟ್ಜ್‌ಕೆ, ನಾಂಡ್ರೆ ಬರ್ಗರ್, ರುಬಿನ್ ಹರ್ಮನನ್, ರ‌್ಯಾನ್ ರಿಕೆಲ್‌ಟನ್, ಪ್ರೆನಿಲನ್ ಸುಬ್ರೆಯನ್. ಟಿ20ಗೆ ಮಾತ್ರ: ಕಾರ್ಬಿನ್ ಬಾಷ್, ರೀಜಾ ಹೆಂಡ್ರಿಕ್ಸ್, ಜಾರ್ಜ್ ಲಿಂಡೆ, ಕ್ವೆನಾ ಮಾಕ, ಡೇವಿಡ್ ಮಿಲ್ಲರ್, ಅನ್ರಿಚ್ ನೋರ್ಕಿಯಾ, ಟ್ರಿಸ್ಟಾನ್ ಸ್ಟಬ್ಸ್.