2ನೇ ಇನಿಂಗ್ಸ್ನಲ್ಲೂ ಆಸೀಸ್ಗೆ ಕಡಿವಾಣ; ಐತಿಹಾಸಿಕ ಗೆಲುವಿನ ಕನಸಿನಲ್ಲಿ ಬಾಂಗ್ಲಾದೇಶ
ಡಾರ್ವಿನ್: ಬರೋಬ್ಬರಿ 23 ವರ್ಷಗಳ ಬಳಿಕ ಆಸ್ಟ್ರೆಲಿಯಾ (
) ನೆಲದಲ್ಲಿ ಟೆಸ್ಟ್ ಪಂದ್ಯವೊಂದನ್ನು ಆಡುತ್ತಿರುವ ಬಾಂಗ್ಲಾದೇಶ ತಂಡ ಐತಿಹಾಸಿಕ ಗೆಲುವಿನ ನಿರೀಕ್ಷೆಯಲ್ಲಿದೆ. ಭಾರಿ ಮುನ್ನಡೆಯ ಬಳಿಕ ಆತಿಥೇಯ ಆಸ್ಟ್ರೆಲಿಯಾದ 2ನೇ ಇನಿಂಗ್ಸ್ಗೂ ಕಡಿವಾಣ ಹೇರುವ ಮೂಲಕ ಬಾಂಗ್ಲಾ ಮೊದಲ ಟೆಸ್ಟ್ (Test Cricket) ಪಂದ್ಯದಲ್ಲಿ ಗೆಲುವಿನತ್ತ ದೃಷ್ಟಿನೆಟ್ಟಿದೆ.
ಮರಾರಾ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಶನಿವಾರ 6 ವಿಕೆಟ್ಗೆ 351 ರನ್ಗಳಿಂದ 3ನೇ ದಿನದಾಟ ಆರಂಭಿಸಿದ ಬಾಂಗ್ಲಾ, ಭೋಜನ ವಿರಾಮದ ಬಳಿಕ 138 ಓವರ್ಗಳಲ್ಲಿ 426 ರನ್ಗಳಿಗೆ ಆಲೌಟ್ ಆಯಿತು. ಈ ಮೂಲಕ ಪ್ರವಾಸಿ ತಂಡ ಮೊದಲ ಇನಿಂಗ್ಸ್ನಲ್ಲಿ 228 ರನ್ ಮುನ್ನಡೆ ಸಾಧಿಸಿತು. ನಂತರ ದ್ವೀತಿಯ ಇನಿಂಗ್ಸ್ನಲ್ಲೂ 37 ರನ್ಗಳಿಗೆ ಆರಂಭಿಕರಿಬ್ಬರ ವಿಕೆಟ್ಗಳನ್ನೂ ಕಳೆದುಕೊಂಡು ಆರಂಭಿಕ ಆಘಾತ ಎದುರಿಸಿದ ಆಸೀಸ್, ದಿನದಂತ್ಯಕ್ಕೆ 53 ಓವರ್ಗಳಲ್ಲಿ 4 ವಿಕೆಟ್ಗೆ 161 ರನ್ ಗಳಿಸಿ ಸಂಕಷ್ಟದಲ್ಲಿದೆ. ಆಸೀಸ್ ಇನ್ನೂ 67 ರನ್ ಹಿನ್ನಡೆಯಲ್ಲಿದೆ. ಕ್ಯಾಮರಾನ್ ಗ್ರೀನ್ (43*) ಜತೆಗೆ ಅಲೆಕ್ಸ್ ಕ್ಯಾರಿ (19*) ಕ್ರೀಸ್ನಲ್ಲಿದ್ದಾರೆ. ಇವರಿಬ್ಬರ ನಡುವೆ ಮುರಿಯದ 5ನೇ ವಿಕೆಟ್ಗೆ 39 ರನ್ ಜತೆಯಾಟ ನಡೆದಿದೆ.
ಬಾಂಗ್ಲಾ ಇನ್ನು 6 ವಿಕೆಟ್ಗಳನ್ನು ಬೇಗನೆ ಕಬಳಿಸಿದರೆ ಆಸೀಸ್ ನೆಲದಲ್ಲಿ ಚೊಚ್ಚಲ ಟೆಸ್ಟ್ ಗೆಲುವು ಸಾಧಿಸುವ ಅವಕಾಶವಿದೆ ಮತ್ತು ಇದು ಬಾಂಗ್ಲಾಗೆ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲೇ ಅತಿದೊಡ್ಡ ಗೆಲುವು ಎನಿಸಲಿದೆ.
ಮುಂದಿನ 12 ತಿಂಗಳ ಅವಧಿಯಲ್ಲಿ ಬರೋಬ್ಬರಿ 20 ಟೆಸ್ಟ್ ಆಡಬೇಕಿರುವ ಆಸೀಸ್, ಈ ಪೈಕಿ ಮೊದಲ ಟೆಸ್ಟ್ನಲ್ಲೇ ಬಾಂಗ್ಲಾದಂಥ ತಂಡದ ಎದುರು ಸೋಲಿನ ಭೀತಿಯಲ್ಲಿದೆ. ಪ್ರಮುಖ ಮೂವರು ವೇಗಿಗಳಾದ ಕಮ್ಮಿನ್ಸ್, ಸ್ಟಾರ್ಕ್, ಹ್ಯಾಸಲ್ವುಡ್ ದೀರ್ಕಾಲದ ಬಳಿಕ ಜತೆಯಾಗಿ ಆಡುತ್ತಿರುವ ನಡುವೆಯೂ ಆಸೀಸ್ ತೀವ್ರ ಒತ್ತಡಕ್ಕೆ ಸಿಲುಕಿದೆ. 2010ರಲ್ಲಿ ಪಾಕ್ ವಿರುದ್ಧದ ಸಿಡ್ನಿ ಟೆಸ್ಟ್ನಲ್ಲಿ 206 ರನ್ ಹಿನ್ನಡೆಯ ಬಳಿಕವೂ ಆಸೀಸ್ ಗೆದ್ದಿದ್ದು, ಅತಿದೊಡ್ಡ ಹಿನ್ನಡೆಯ ಬಳಿಕ ಜಯ ಕಂಡ ದೃಷ್ಟಾಂತವಾಗಿದೆ. ಈ ಬಾರಿ ಆ ದಾಖಲೆ ಮುರಿಯುವ ಸವಾಲು ಆಸೀಸ್ ಮುಂದಿದೆ. ಪಂದ್ಯದಲ್ಲಿ ಇನ್ನೂ 2 ದಿನಗಳ ಆಟ ಬಾಕಿ ಇರುವುದರಿಂದ ಸ್ಪಷ್ಟ ಫಲಿತಾಂಶ ಖಚಿತವೆನಿಸಿದೆ.
ಆಸ್ಟ್ರೆಲಿಯಾ: 198 ಮತ್ತು 53 ಓವರ್ಗಳಲ್ಲಿ 4 ವಿಕೆಟ್ಗೆ 161 (ಹೆಡ್ 17, ಲಬುಶೇನ್ 31, ಸ್ಮಿತ್ 44, ಗ್ರೀನ್ 43*, ಕ್ಯಾರಿ 19*, ಮಹಮೂದ್ 33ಕ್ಕೆ 2, ತೈಜುಲ್ 28ಕ್ಕೆ 1, ಮೆಹಿದಿ ಹಸನ್ 20ಕ್ಕೆ 1), ಬಾಂಗ್ಲಾದೇಶ: 138 ಓವರ್ಗಳಲ್ಲಿ 426 (ಮೆಹಿದಿ ಹಸನ್ 65, ತೈಜುಲ್ 17, ಟಸ್ಕಿನ್ 14*, ಹ್ಯಾಸಲ್ವುಡ್ 89ಕ್ಕೆ 6, ಸ್ಟಾರ್ಕ್ 79ಕ್ಕೆ 2, ಕಮ್ಮಿನ್ಸ್ 75ಕ್ಕೆ 1, ಲ್ಯಾನ್ 102ಕ್ಕೆ 1).