ಆಸೀಸ್ ನೆಲದಲ್ಲಿ ಮೊದಲ ಬಾರಿ ಟೆಸ್ಟ್ ಗೆದ್ದು ಇತಿಹಾಸ ಬರೆದ ಬಾಂಗ್ಲಾದೇಶ!
) ತಂಡ ವಿಶ್ವ ನಂ. 1 ಟೆಸ್ಟ್ ದೇಶವಾಗಿರುವ ಆಸ್ಟ್ರೆಲಿಯಾವನ್ನು ಅದರದೇ ನೆಲದಲ್ಲಿ ಮಣಿಸುವ ಮೂಲಕ ಹೊಸ ಇತಿಹಾಸ ಬರೆದಿದೆ. ಆಲ್ರೌಂಡರ್ ಕ್ಯಾಮರಾನ್ ಗ್ರೀನ್ (104 ರನ್, 201 ಎಸೆತ, 4 ಬೌಂಡರಿ, 1 ಸಿಕ್ಸರ್) ಶತಕದ ಪ್ರತಿರೋಧದ ನಡುವೆಯೂ ಬಾಂಗ್ಲಾ ತಂಡ ಮೊದಲ ಟೆಸ್ಟ್ ಪಂದ್ಯದಲ್ಲಿ ಆತಿಥೇಯ ಆಸ್ಟ್ರೆಲಿಯಾವನ್ನು ಮೂರೂವರೆ ದಿನಗಳಲ್ಲೇ 9 ವಿಕೆಟ್ಗಳಿಂದ ಮಣಿಸಿತು. 23 ವರ್ಷಗಳ ಬಳಿಕ ಆಸೀಸ್ ನೆಲದಲ್ಲಿ ಟೆಸ್ಟ್ ಪಂದ್ಯವೊಂದನ್ನು ಆಡಿದ ಬಾಂಗ್ಲಾ ಅಚ್ಚರಿಯ ಲಿತಾಂಶ ದಾಖಲಿಸಿತು. ಆಸೀಸ್ ವಿರುದ್ಧದ 7 ಟೆಸ್ಟ್ಗಳಲ್ಲಿ ಬಾಂಗ್ಲಾಗೆ ಇದು 2ನೇ ಗೆಲುವಾಗಿದೆ. 2017ರಲ್ಲಿ ತವರಿನ ಮೀರ್ಪುರ ಟೆಸ್ಟ್ನಲ್ಲಿ ಬಾಂಗ್ಲಾ, ಮೊದಲ ಬಾರಿಗೆ ಆಸ್ಟ್ರೆಲಿಯಾವನ್ನು ಸೋಲಿಸಿತ್ತು. ಆಸೀಸ್ ನೆಲದಲ್ಲಿ ಆಡಿದ ತನ್ನ 3ನೇ ಟೆಸ್ಟ್ನಲ್ಲೇ ಬಾಂಗ್ಲಾ ಮೊದಲ ಗೆಲುವು ಒಲಿಸಿಕೊಂಡಿದೆ.
ಮರಾರ ಸ್ಟೇಡಿಯಂನಲ್ಲಿ ಭಾನುವಾರ 4 ವಿಕೆಟ್ಗೆ 161 ರನ್ಗಳಿಂದ 4ನೇ ದಿನದಾಟ ಆರಂಭಿಸಿದ ಆಸೀಸ್, ಗ್ರೀನ್ ಶತಕದ ನಡುವೆಯೂ ಸ್ಪಿನ್ನರ್ ಮೆಹಿದಿ ಹಸನ್ ಮಿರಾಜ್ (66ಕ್ಕೆ 5) ದಾಳಿಗೆ ಕುಸಿದು ಭೋಜನ ವಿರಾಮದ ಬಳಿಕ 95.1 ಓವರ್ಗಳಲ್ಲಿ 284 ರನ್ಗಳಿಗೆ ಆಲೌಟ್ ಆಯಿತು. ಇದರಿಂದ ಗೆಲುವಿಗೆ ಕೇವಲ 57 ರನ್ ಗುರಿ ಪಡೆದ ಬಾಂಗ್ಲಾ, 14.2 ಓವರ್ಗಳಲ್ಲಿ 1 ವಿಕೆಟ್ ನಷ್ಟದಲ್ಲಿ ಗೆಲುವಿನ ದಡ ಸೇರಿತು. ಆರಂಭಿಕ ಶದ್ಮನ್ ಇಸ್ಲಾಂ (25*) ಮತ್ತು ಮಾಮಿನುಲ್ ಹಕ್ (30*) ಮುರಿಯದ 2ನೇ ವಿಕೆಟ್ಗೆ 53 ರನ್ ಜತೆಯಾಟವಾಡಿ ಗೆಲುವಿನ ದಡ ಸೇರಿಸಿದರು.
ಆಸೀಸ್ (ಶೇ.77.78) ಸೋಲಿನ ನಡುವೆಯೂ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ 4ನೇ ಆವೃತ್ತಿಯ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಕಾಯ್ದುಕೊಂಡರೂ, ವಿಶ್ವ ನಂ. 9 ತಂಡದ ವಿರುದ್ಧ ತವರಿನಲ್ಲೇ ಮುಗ್ಗರಿಸಿದ ಮುಖಭಂಗ ಎದುರಿಸಿತು. ಆಸ್ಟ್ರೆಲಿಯಾದ 149 ವರ್ಷಗಳ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಇದು ಅತ್ಯಂತ ಆಘಾತಕಾರಿ ಸೋಲು ಎನಿಸಿದೆ.
ಎರಡನೇ ಹಾಗೂ ಅಂತಿಮ ಟೆಸ್ಟ್ ಆ.22ರಿಂದ ಮೆಕಾಯ್ನಲ್ಲಿ ನಡೆಯಲಿದ್ದು, ಆಸೀಸ್ಗೆ ಸರಣಿ ಸಮಬಲ ಸಾಧಿಸುವ ಅವಕಾಶವಷ್ಟೇ ಇದೆ.
ಆಸ್ಟ್ರೆಲಿಯಾ: 198 ಮತ್ತು 95.1 ಓವರ್ಗಳಲ್ಲಿ 284 (ಗ್ರೀನ್ 104, ಕ್ಯಾರಿ 30, ವೆಬ್ಸ್ಟರ್ 5, ಕಮ್ಮಿನ್ಸ್ 8, ಸ್ಟಾರ್ಕ್ 18, ಲ್ಯಾನ್ 15, ಮಹಮೂದ್ 56ಕ್ಕೆ 3, ಮೆಹಿದಿ ಹಸನ್ ಮಿರಾಜ್ 66ಕ್ಕೆ 5, ಟಸ್ಕಿನ್ 66ಕ್ಕೆ 1, ತೈಜುಲ್ 51ಕ್ಕೆ 1), ಬಾಂಗ್ಲಾದೇಶ: 426 ಮತ್ತು 1 ವಿಕೆಟ್ಗೆ 57 (ಶದ್ಮನ್ 25*, ಮಾಮಿನುಲ್ 30*, ಹ್ಯಾಸಲ್ವುಡ್ 5ಕ್ಕೆ 1). ಪಂದ್ಯಶ್ರೇಷ್ಠ: ಹಸನ್ ಮಹಮೂದ್ (111ಕ್ಕೆ 9).
*ಯಾವುದೇ ಕ್ರಿಕೆಟ್ ಪ್ರಕಾರದಲ್ಲಿ ಬಾಂಗ್ಲಾದೇಶ ಕಂಡ ಅತಿದೊಡ್ಡ ಗೆಲುವು ಇದಾಗಿದೆ. ನಾವು ಭವಿಷ್ಯದಲ್ಲೂ ಇನ್ನಷ್ಟು ವಿಶೇಷ ಸಾಧನೆ ಮಾಡಲಿದ್ದೇವೆ.
| ನಜ್ಮುಲ್ ಹೊಸೈನ್ ಶಾಂಟೊ, ಬಾಂಗ್ಲಾ ನಾಯಕ
*3: ಆಸೀಸ್ ನೆಲದಲ್ಲಿ ಆಡಿದ 3ನೇ ಟೆಸ್ಟ್ನಲ್ಲೇ ಮೊದಲ ಗೆಲುವು ಒಲಿಸಿಕೊಂಡ 2ನೇ ತಂಡ ಬಾಂಗ್ಲಾದೇಶ. ದ. ಆಫ್ರಿಕಾ ಕೂಡ 3ನೇ ಟೆಸ್ಟ್ನಲ್ಲೇ ಗೆದ್ದಿತ್ತು. ಇಂಗ್ಲೆಂಡ್ 2ನೇ ಟೆಸ್ಟ್ನಲ್ಲೇ ಗೆದ್ದಿರುವುದು ದಾಖಲೆ. ಭಾರತ ತಂಡ ಆಸೀಸ್ನಲ್ಲಿ ಮೊದಲ ಟೆಸ್ಟ್ ಗೆಲುವಿಗಾಗಿ 12ನೇ ಪಂದ್ಯದವರೆಗೆ ಕಾದಿತ್ತು. ಶ್ರೀಲಂಕಾ ತಂಡ ಆಸೀಸ್ನಲ್ಲಿ ಇದುವರೆಗೆ 15 ಟೆಸ್ಟ್ ಆಡಿದ್ದರೂ, ಒಮ್ಮೆಯೂ ಗೆದ್ದಿಲ್ಲ.
*7: ಆಸೀಸ್ಗೆ ತವರಿನ ಟೆಸ್ಟ್ನಲ್ಲೇ ಸೋಲುಣಿಸಿದ 7ನೇ ತಂಡ ಬಾಂಗ್ಲಾದೇಶ.