ಇಂಜುರಿ ಕಾರಣದಿಂದ ಕ್ರಿಕೆಟ್‌ನಿಂದ ದೂರವಿರುವ ಬಾಬರ್ ಅಜಂ
- ಇಂಜುರಿ ಕಾರಣದಿಂದ ಕ್ರಿಕೆಟ್‌ನಿಂದ ದೂರವಿರುವ ಬಾಬರ್ ಅಜಂ
- ಈದ್ ಪ್ರಯುಕ್ತ ಅಡುಗೆ ಮಾಡಿದ ವಿಡಿಯೋ ವೈರಲ್
- ಕ್ರಿಕೆಟ್ ಬಿಟ್ಟು ಢಾಬಾ ತೆರೆಯಿರಿ ಎಂದ ಟ್ರೋಲರ್ಸ
ಪಾಕಿಸ್ತಾನ: ಪಾಕಿಸ್ತಾನ ಕ್ರಿಕೆಟ್ ತಂಡದ ಬ್ಯಾಟರ್ ಬಾಬರ್ ಅಜಂ ಜೀವನದಲ್ಲಿ ಸದ್ಯ ಯಾವುದು ಒಳ್ಳೆಯ ಸಂಗತಿಗಳು ನಡೆಯುತ್ತಿಲ್ಲ. ಇಂಜುರಿ ಕಾರಣದಿಂದ ಬಾಂಗ್ಲಾ ವಿರುದ್ಧದ ಏಕದಿನ ಸರಣಿಯಿಂದ ಹೊರಗುಳಿದಿರುವ ಬಾಬರ್ ಈಗ ತನ್ನ ಅಡುಗೆ ವಿಡಿಯೋ (Babar Azam Cooking Video) ಮೂಲಕ ಮತ್ತೆ ಟ್ರೋಲರ್ಗಳ ದಾಳಿಗೆ ತುತ್ತಾಗಿದ್ದಾರೆ.
ಕ್ರಿಕೆಟ್‌ನಿಂದ ದೂರ ಸರಿದ ಬಾಬರ್!
ಇಂಜುರಿ ಕಾರಣದಿಂದ ಬಾಂಗ್ಲಾ ವಿರುದ್ಧದ ಸರಣಿಯಿಂದ ಹೊರಬಂದಿರುವ ಬಾಬರ್ ಪಾಕಿಸ್ತಾನಲ್ಲಿ ನಡೆಯುವ ನ್ಯಾಷನಲ್ ಟಿ20 ಕಪ್ನಲ್ಲಿ ಸಹ ಮೈದಾನಕ್ಕಿಳಿಯುವುದಿಲ್ಲ ಎಂದು ತಿಳಿದುಬಂದಿದೆ.
ಈ ಹಿಂದೆ ನಡೆದಿದ್ದ ಟಿ-20 ವಿಶ್ವಕಪ್ನಲ್ಲಿ ಸಹ ಬಾಬರ್ ಅಜಂ ನಿರಸ ಪ್ರದರ್ಶನ ನೀಡಿ ಟ್ರೋಲರ್ಗಳ ಕೆಂಗಣ್ಣಿಗೆ ಗುರಿಯಾಗಿದ್ದರು. ಭಾರತದೊಂದಿಗಿನ ನಿರ್ಣಾಯಕ ಪಂದ್ಯದಲ್ಲಿ ಬಾಬರ್ ಕೇವಲ 5 ರನ್ಗಳಿಗೆ ಔಟಾಗಿ ಪಂದ್ಯ ಸೋಲುವಲ್ಲಿ ಕಾರಣಿಭೂತರಾಗಿದ್ದರು.
ಈದ್ ಪ್ರಯುಕ್ತ ಅಡುಗೆ ಮಾಡಿದ ಬಾಬರ್
ಇಸ್ಲಾಂ ಧರ್ಮದವರ ಪವಿತ್ರ ಹಬ್ಬವಾದ ಈದ್ ಪ್ರಯುಕ್ತ ಬಾಬರ್ ಅಜಂ ಶೀರ್ ಕೂರ್ಮಾವನ್ನು ಸಿದ್ಧ ಪಡಿಸಿದ್ದು, ಇದನ್ನು ಅವರು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಪಾಕಿಸ್ತಾನಿಗಳ ಸಾಂಪ್ರದಾಯಿಕ ಸಿಹಿ ಅಡುಗೆಯಾದ ಶೀರ್ ಕೂರ್ಮಾವನ್ನು ತಯಾರಿಸಿದೆ ಜನ ತನನ್ನು ಮೆಚ್ಚಿಕೊಳ್ಳುತ್ತಾರೆ ಎನ್ನುವುದು ಬಾಬರ್ ಅವರ ಭಾವನೆಯಾಗಿರಬೇಕು.
ನೀನು ಅಡುಗೆ ಮಾಡುವುದಕ್ಕೆ ಲಾಯಕ್ಕು!
ಬಾಬರ್ ಅಡುಗೆ ಮಾಡಿರುವ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಸಖತ್ ವೈರಲ್ ಆಗುತ್ತಿದೆ, ಆದರೆ ಅಭಿಮಾನಿಗಳು ಬಾಬರ್ ಅವರ ಈ ಪ್ರಯತ್ನವನ್ನು ಶ್ಲಾಘಿಸುವ ಬದಲು ಟ್ರೋಲ್ ಮಾಡಲು ಇಳಿದಿದ್ದಾರೆ.
ಹೇಗೂ ನಿನ್ನ ಜೀವನಲ್ಲಿ ಕ್ರಿಕೆಟ್ ಮುಗಿದ ಅಧ್ಯಾಯವಾಗಿದೆ, ನೀನು ಒಂದು ಢಾಭಾ ತೆರೆಯುವುದು ಒಳ್ಳೆಯದೆಂದು ಒಬ್ಬರು ಕಮೆಂಟ್ ಮಾಡಿದರೆ, ಬಾಬರ್ ಇನ್ನೂ ಕೆಲವೇ ದಿನಗಳಲ್ಲಿ ಈ ಅಡುಗೆ ಕ್ಷೇತ್ರವನ್ನು ಹಾಳುಗೆಡವಲಿದ್ದಾನೆ ಎಂದು ಇನ್ನೊಬ್ಬರು ಬರೆದಿದ್ದಾರೆ. ಇನ್ನೂ ಕೆಲವರು ನೀನು ಕ್ರಿಕೆಟ್‌ನಿಂದ ನಿವೃತ್ತಿ ಪಡೆದು ಅಡುಗೆ ಮನೆ ಸೇರುವುದೇ ಉತ್ತಮ ಎಂದು ಮಾರ್ಮಿಕವಾಗಿ ಹೇಳಿದ್ದಾರೆ,(ಏಜನ್ಸೀಸ್).