ಬೆಡ್ ಹಾಸಿಕೊಂಡರು ಕ್ಯಾಚ್ ಕೈ ಚೆಲ್ಲಿದ ಬಾಬರ್
- ಜಾಹೀರಾತು ಶೂಟಿಂಗ್ ವೇಳೆ ಕ್ಯಾಚ್ ಬಿಟ್ಟ ಬಾಬರ್ ಅಜಂ
- ಬೆಡ್ ಹಾಸಿಕೊಂಡರು ಕ್ಯಾಚ್ ಕೈ ಚೆಲ್ಲಿದ ಬಾಬರ್
- ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್
ಇಸ್ಲಾಮಾಬಾದ್: ಈ ಪಾಕಿಸ್ತಾನದ ಕ್ರಿಕೆಟರ್ಗಳು ಮೈದಾನದಲ್ಲಿ ಬೌಂಡರಿ ಬಾರಿಸಿ, ವಿಕೆಟ್ ಪಡೆಯುದಕ್ಕಿಂತ ಸೋಶಿಯಲ್ ಮೀಡಿಯಾಗಳಲ್ಲಿ ಟ್ರೋಲ್ ಆಗುವುದಕ್ಕೆ ಖ್ಯಾತನಾಮರು ಎಂದರೆ ತಪ್ಪಾಗದು. ಹೋಗಿ ಮೈದಾನದಲ್ಲಿ ನಿಮ್ಮ ಆಟ ತೋರಿಸಿ ಎಂದರೆ ಅಲ್ಲಿಯೂ ಸರಿಯಾಗಿ ಆಡದೆ ಪಂದ್ಯವನ್ನು ಎಷ್ಟು ಹೀನಾಯವಾಗಿ ಸೋಲಬಹುದು ಎನ್ನುವುದನ್ನು ಇವರಿಂದ ಕಲಿಯಬಹುದಾಗಿದೆ.
ಮನೆಯಿಂದ ಮೈದಾನಕ್ಕೆ ಬಂದ ಬಾಬ್ಜಿ!
ಸಸ್ತಾ ವಿರಾಟ್ ಕೊಹ್ಲಿ ಅಥವಾ ಬಾಬ್ಜಿ ದಿ ಕಿಂಗ್ ಎಂಬೆಲ್ಲಾ ಬಿರುದಗಳನ್ನು ಧರಿಸಿರುವ ಈ ಬಾಬರ್ ಅಜಂ (Babar Azam) ನಿಗೆ ಬ್ಯಾಟ್ನಿಂದ ರನ್ ಹೊಡೆಯುದರೆಂದರೆ ಅಲರ್ಜಿಯಾಗಿದೆ. ಇತ್ತೀಚೆಗೆ ನಡೆದ ಟಿ-20 ವಿಶ್ವಕಪ್ನಲ್ಲಿ ಪಾಕಿಸ್ತಾನ ತಂಡವನ್ನು ಯಶಸ್ವಿಯಾಗಿ ಸೋಲಿಸಿದ ಕೀರ್ತಿ ಈ ಮಹಾಶಯನಿಗೆ ಸಲ್ಲುತ್ತದೆ.
ಈ ಪುಣ್ಯಕಾರ್ಯವನ್ನು ಮಾಡಿದ ನಂತರ ಇವನನ್ನು ಪಾಕಿಸ್ತಾನ ಕ್ರಿಕೆಟ್ ಮಂಡಳಿ ಶ್ರೀಲಂಕಾ ನಡುವಿನ ಏಕದಿನ ಟೂರ್ನಿಯಿಂದ ಗೇಟ್ ಪಾಸ್ ಕೊಟ್ಟು ಮನೆಗೆ ಕಳುಹಿಸಿದೆ. ಈಗ ಈ ಬಾಬ್ಜಿ ಪಾಕಿಸ್ತಾನ್ ಸೂಪರ್ ಲೀಗ್ನಲ್ಲಿ ಲಾಹೋರ್ ಪರವಾಗಿ ಆಡುತ್ತಿದ್ದು, ಜಾಹಿರಾತೊಂದರ ಶೂಟಿಂಗ್ ವೇಳೆ ನಡೆದಿರುವ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.
ವಿಡಿಯೋನಲ್ಲೇನಿದೆ?
ಈದೀಗ ವೈರಲ್ ಆಗುತ್ತಿರುವ ವಿಡಿಯೋನಲ್ಲಿ ಬಾಬರ್ ಅಜಂ, ಕ್ರೀಡಾಂಗಣದಲ್ಲಿ ಬೆಡ್ವೊಂದನ್ನು ಹಾಸಿಕೊಂಡಿದ್ದು, ಮುಂದಿನಿಂದ ಒಬ್ಬರು ಕ್ಯಾಚ್ ಹಿಡಿಯವಂತೆ ಹೇಳಿ ಬಾಲ್ನ್ನು ಎಸೆದಿದ್ದಾರೆ. ಆದರೆ ಈ ಬಾಬ್ಜಿ ಈ ಸುಲಭದ ಕ್ಯಾಚ್ನ್ನು ಬಿಟ್ಟಿರುವುದು ಈಗ ಮೀಮರ್ಗಳ ಬಾಯಿಗೆ ತುತ್ತಾಗಿದೆ.
ಈ ವಿಡಿಯೋ ಈಗಾಗಲೇ ಲಕ್ಷಾಂತರ ವೀಕ್ಷಣೆಯನ್ನು ಕಂಡಿದ್ದು, ನೆಟ್ಟಿಗರು ವಿಧ-ವಿಧವಾಗಿ ಕಮೆಂಟ್ ಮಾಡುತ್ತಿದ್ದಾರೆ.
ಬೆಡ್ ಹಾಸಿಕೊಂಡು ಕ್ಯಾಚ್ ಹಿಡಿಯಲು ಬರದಿದ್ದರೆ ಹೋಗಿ ಮನೆಯಲ್ಲಿ ಮಲಕೊ ಎಂದು ಒಬ್ಬರು ಹೇಳಿದ್ದಾರೆ. ಇಷ್ಟು ಸುಲಭದ ಕ್ಯಾಚ್ ಹಿಡಿಯಲು ಆಗದಿದ್ದರೆ ಕ್ರಿಕೆಟ್ಗೆ ವಿಧಾಯ ಹೇಳು ಎಂದು ಇನ್ನೊಬ್ಬರು ಹೇಳಿದ್ದಾರೆ. ಇವನಂತ ಆಟಗಾರರಿಂದಲೇ ತಮ್ಮ ತಂಡ ಒಂದು ಟೂರ್ನಿಯನ್ನು ಗೆಲ್ಲುತ್ತಿಲ್ಲ ಎಂದು ಪಾಕ್ ತಂಡದ ಅಭಿಮಾನಿ ಆಕ್ರೋಶ ಹೊರಹಾಕಿದ್ದಾನೆ,(ಏಜನ್ಸೀಸ್).