ಟಿ20 ವಿಶ್ವಕಪ್: ಸಮಾಧಾನಕರ ಜಯದೊಂದಿಗೆ ಆಸ್ಟ್ರೇಲಿಯಾ ನಿರ್ಗಮನ 
ಕ್ರಿಕೆಟ್

ಟಿ20 ವಿಶ್ವಕಪ್: ಸಮಾಧಾನಕರ ಜಯದೊಂದಿಗೆ ಆಸ್ಟ್ರೇಲಿಯಾ ನಿರ್ಗಮನ

ಪಲ್ಲೆಕಿಲೆ: ಟಿ20 ವಿಶ್ವಕಪ್​ನಲ್ಲಿ (T20 World Cup) ಲೀಗ್​ ಹಂತದಲ್ಲೇ ಅಭಿಯಾನ ಮುಗಿಸಿರುವ ಮಾಜಿ ಚಾಂಪಿಯನ್​ ಆಸ್ಟ್ರೆಲಿಯಾ ತಂಡ ಸಮಾಧಾನಕರ ಜಯದೊಂದಿಗೆ ನಿರ್ಗಮಿಸಿದೆ. ಸ್ಪಿನ್ನರ್ (Adam Zampa)​ ಆಡಂ ಜಂಪಾ (21ಕ್ಕೆ 4) ಮಾರಕ ದಾಳಿ ನೆರವಿನಿಂದ ಆಸೀಸ್​ ತಂಡ ತನ್ನ 4ನೇ ಹಾಗೂ ಅಂತಿಮ ಲೀಗ್​ ಪಂದ್ಯದಲ್ಲಿ ಓಮನ್​ ಎದುರು 9 ವಿಕೆಟ್​ಗಳಿಂದ ಜಯಿಸಿತು. ಇದರೊಂದಿಗೆ ಬಿ ಗುಂಪಿನಲ್ಲಿ 3ನೇ ಸ್ಥಾನಕ್ಕೆ ತೃಪ್ತಿಪಟ್ಟಿತು.
ಶುಕ್ರವಾರ ನಡೆದ ಟೂರ್ನಿಯ ಕಡೇ ಲೀಗ್​ ಪಂದ್ಯದಲ್ಲಿ ಟಾಸ್​ ಸೋತು ಬ್ಯಾಟಿಂಗ್​ಗೆ ಇಳಿದ ಓಮನ್​ 16.2 ಓವರ್​ಗಳಲ್ಲಿ 104 ರನ್​ಗಳಿಗೆ ಆಲೌಟ್​ ಆಯಿತು. ಪ್ರತಿಯಾಗಿ ನಾಯಕ ಮಿಚೆಲ್​ ಮಾರ್ಷ್​ (64*ರನ್​, 33 ಎಸೆತ, 7 ಬೌಂಡರಿ, 4 ಸಿಕ್ಸರ್​) ಮತ್ತು ಟ್ರಾವಿಸ್​ ಹೆಡ್​ (32) ಮೊದಲ ವಿಕೆಟ್​ಗೆ 49 ಎಸೆತಗಳಲ್ಲಿ 93 ರನ್​ ಸೇರಿಸಿ ಭದ್ರ ಬುನಾದಿ ಹಾಕಿದರು. ಅಂತಿಮವಾಗಿ ಆಸೀಸ್​ 9.4 ಓವರ್​ಗಳಲ್ಲೇ 1 ವಿಕೆಟ್​ಗೆ 108 ರನ್​ ಗಳಿಸಿ ಜಯಭೇರಿ ಬಾರಿಸಿತು.

ಓಮನ್​: 16.2 ಓವರ್​ಗಳಲ್ಲಿ 104 (ಜತಿಂದರ್​ 17, ಹಮ್ಮದ್​ 16, ವಾಸಿಂ ಅಲಿ 32, ಜಂಪಾ 21ಕ್ಕೆ 4, ಮ್ಯಾಕ್ಸ್​ವೆಲ್​ 13ಕ್ಕೆ 2, ಬಾರ್ಟ್ಲೆಟ್​ 27ಕ್ಕೆ 2, ಸ್ಟೋಯಿನಿಸ್​ 16ಕ್ಕೆ 1, ಎಲ್ಲಿಸ್​ 14ಕ್ಕೆ 1).
ಆಸ್ಟ್ರೆಲಿಯಾ: 9.4 ಓವರ್​ಗಳಲ್ಲಿ 1 ವಿಕೆಟ್​ಗೆ 108 (ಮಾರ್ಷ್​ 64*, ಹೆಡ್​ 32, ಇಂಗ್ಲಿಸ್​ 12*, ಶಕೀಲ್​ 29ಕ್ಕೆ 1).