ಏಷ್ಯಾಕಪ್: ಭಾರತ ಎದುರು ಟಾಸ್ ಗೆದ್ದ ಪಾಕ್ ಬ್ಯಾಟಿಂಗ್ ಆಯ್ಕೆ!, ಹರ್ಮಾನ್‌ ಪಡೆಗೆ ಹ್ಯಾಟ್ರಿಕ್ ಜಯದ ತವಕ  
ಕ್ರಿಕೆಟ್

ಏಷ್ಯಾಕಪ್: ಭಾರತ ಎದುರು ಟಾಸ್ ಗೆದ್ದ ಪಾಕ್ ಬ್ಯಾಟಿಂಗ್ ಆಯ್ಕೆ!, ಹರ್ಮಾನ್‌ ಪಡೆಗೆ ಹ್ಯಾಟ್ರಿಕ್ ಜಯದ ತವಕ

ದುಬೈ: ಈಗಾಗಲೇ ಸೆಮಿಫೈನಲ್ ಸ್ಥಾನ ಖಾತ್ರಿಪಡಿಸಿಕೊಂಡಿರುವ ಏಳು ಬಾರಿಯ ಚಾಂಪಿಯನ್ ಭಾರತ ತಂಡ ಎಸಿಸಿ ಮಹಿಳೆಯರ ಟಿ20 ಏಷ್ಯಾಕಪ್ ಟೂರ್ನಿಯ ಗುಂಪಿನ ಮೂರನೇ ಹಾಗೂ ಅಂತಿಮ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ ಕಣಕ್ಕಿಳಿಯಲಿದೆ. ದುಬೈ ಇಂಟರ್‌ನ್ಯಾಷನಲ್ ಕ್ರೀಡಾಂಗಣದಲ್ಲಿ ನಡೆ ಪಂದ್ಯದಲ್ಲಿ ಟಾಸ್ ಗೆದ್ದ ಪಾಕಿಸ್ತಾನ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ.
ಐಸಿಸಿ ಟಿ20 ವಿಶ್ವಕಪ್‌ನ ಕಳೆದ ಎರಡು ಆವೃತ್ತಿಗಳಲ್ಲಿ ಭಾರತ ತಂಡ ಗುಂಪು ಹಂತದಲ್ಲೇ ನಿರ್ಗಮಿಸಿದರೂ, ಏಷ್ಯಾಕಪ್ ಟೂರ್ನಿಯಲ್ಲಿ ಪ್ರಾಬಲ್ಯ ಸಾಧಿಸಿದೆ. ಗುಂಪಿನ ಅಗ್ರಸ್ಥಾನಿಯಾಗಿ ಸೆಮಿಫೈನಲ್ ಪ್ರವೇಶಿಸುವ ಹಾಲಿ ಚಾಂಪಿಯನ್ ಭಾರತ ತಂಡದ್ದಾಗಿದೆ. ಎ ಗುಂಪಿನ ಎರಡನೇ ಸ್ಥಾನಿಯಾಗಿರುವ ಪಾಕಿಸ್ತಾನ ತನ್ನ ಕೊನೇ ಪಂದ್ಯಕ್ಕೆ ಮುನ್ನ ಸೆಮೀಸ್‌ಗೆ ಅರ್ಹತೆ ಪಡೆಯುವ ಗುರಿ ಹೊಂದಿದೆ.
ಹಾಂಕಾಂಗ್ ಎದುರು ಶತಕ ಸಿಡಿಸಿ ಹಲವು ದಾಖಲೆ ರಚಿಸಿರುವ ಸ್ಮತಿ ಮಂದನಾ ಜತೆಗೆ ಶೆಾಲಿ ವರ್ಮ ಉತ್ತಮ ಲಯದಲ್ಲಿದ್ದಾರೆ. ಬ್ಯಾಟರ್‌ಗಳಿಗೆ ಸವಾಲೊಡ್ಡಲಿರುವ ದುಬೈ ಪಿಚ್‌ನಲ್ಲಿ ಇವರಿಬ್ಬರ ಆಟವೇ ಭಾರತದ ಗೆಲುವಿಗೆ ಪ್ರಮುಖ ಕಾರಣ ಎನಿಸಿದೆ. ಆದರೆ, ಮಧ್ಯಕ್ರಮಾಂಕದಲ್ಲಿ ಪ್ರತೀಕಾ ರಾವಲ್, ರಿಚಾ , ಹರ್ಮಾನ್‌ಪ್ರೀತ್ ಕೌರ್ ಹೆಚ್ಚಿನ ರನ್ ಕೊಡುಗೆ ನೀಡಬೇಕಿದೆ. ಟಿ20 ಮಾದರಿಗೆ ಹೊಂದಿಕೊಳ್ಳಲು ಪ್ರತೀಕಾ ರಾವಲ್ ಪರದಾಡುತ್ತಿದ್ದಾರೆ. ನಂದಿನಿ ಶರ್ಮ, ಕ್ರಾಂತಿ ಗೌಡ್ ಹೊಸ ಚೆಂಡಿನಲ್ಲಿ ಉತ್ತಮ ಬೌಲಿಂಗ್ ನಡೆಸುತ್ತಿರವುದು ಭಾರತಕ್ಕೆ ಪ್ಲಸ್ ಪಾಯಿಂಟ್. ಅಂತಾರಾಷ್ಟ್ರೀಯ ಟಿ20ಯಲ್ಲಿ ಭಾರತ ಹಾಗೂ ಪಾಕಿಸ್ತಾನ ಇದುವರೆಗೆ 17 ಬಾರಿ ಮುಖಾಮುಖಿಯಾಗಿದ್ದು, ಭಾರತ 14-3 ಗೆಲುವು- ಸೋಲಿನ ದಾಖಲೆ ಹೊಂದಿದೆ. ಹರ್ಮಾನ್‌ಪ್ರೀತ್ ಪಡೆ ‘ನೋ ಹ್ಯಾಂಡ್‌ಶೇಕ್’ ಪಾಲಿಸಿ ಮುಂದುವರಿಸುವ ಸಾಧ್ಯತೆಗಳಿದ್ದು, ಟಿ20 ವಿಶ್ವಕಪ್‌ನಲ್ಲೂ ಉಭಯ ತಂಡದ ಆಟಗಾರ್ತಿಯರು ಹಸ್ತಲಾಘವ ಮಾಡಿರಲಿಲ್ಲ.
ಪಾಕಿಸ್ತಾನ ಬ್ಯಾಟಿಂಗ್ ವಿಭಾಗದಲ್ಲಿ ಸುಧಾರಣೆ ಕಂಡರಷ್ಟೇ ಭಾರತಕ್ಕೆ ಪೈಪೋಟಿ ನೀಡಬಹುದಾಗಿದೆ. ಥಾಯ್ಲೆಂಡ್ ಎದುರು ಪವರ್ ಪ್ಲೇನಲ್ಲಿ 3 ವಿಕೆಟ್ ಕಳೆದುಕೊಂಡಿದ್ದ ಪಾಕ್ 119 ರನ್‌ಗಳ ಸಾಧಾರಣ ಮೊತ್ತ ಪೇರಿಸಿತ್ತು. ಆರಂಭಿಕ ಬ್ಯಾಟರ್ ಮುನೀಬಾ ಅಲಿ ಹಾಗೂ ನಾಯಕಿ ಾತಿಮಾ ಸನಾ ಅವರ ಮೇಲೆ ಹೆಚ್ಚು ಅವಲಂಬಿತವಾಗಿದೆ.
ಏಷ್ಯಾಕಪ್‌ನಲ್ಲಿ
ಮುಖಾಮುಖಿ: 7
ಭಾರತ: 6
ಪಾಕ್: 1
ಆರಂಭ: ರಾತ್ರಿ 8.00
ನೇರಪ್ರಸಾರ: ಸೋನಿ ಸ್ಪೋರ್ಟ್ಸ್, ಸೋನಿ ಲಿವ್.