Harbhajan Singh on Trolls
ಐಪಿಎಲ್: ಪ್ರಪಂಚದಲ್ಲಿ ನಡೆಯುವ ವಿದ್ಯಮಾನಗಳನ್ನು ಬಹಳ ವೇಗದಲ್ಲಿ ತಲುಪಿಸಲು ಮತ್ತು ಅದರ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ವ್ಯಕ್ತ ಪಡಿಸುವ ವೇದಿಕೆಗಳಾಗಿ ಈ ಸಾಮಾಜಿಕ ಜಾಲತಾಣಗಳನ್ನು ತಯಾರಿಸಲಾಗಿತ್ತು.
ಅದರೆ ಕಾಲಕಳೆದಂತೆ ಈ ಸೋಶಿಯಲ್ ಮೀಡಿಯಾ ಎನ್ನುವುದು ಕೇವಲ ಟ್ರೋಲಿಂಗ್ (Harbhajan Singh on Trolls), ರೋಸ್ಟಿಂಗ್ಗೆ ಬಳಕೆಯಾಗುತ್ತಿರುವುದು ಚಿಂತನೀಯ ಸಂಗತಿಯಾಗಿದೆ. ನಿನ್ನೆ (ಮಾರ್ಚ್ 28) ಯಿಂದ ಆರಂಭವಾಗಿರುವ ಐಪಿಎಲ್ನ ಮೊದಲ ಪಂದ್ಯದಿಂದಲೇ ಈ ಟ್ರೋಲರ್ಗಳ ಹಾವಳಿ ಶರುವಾಗಿದೆ.
ಭಜ್ಜಿಗೆ ಟ್ರೋಲರ್ಸ್ ಹಾವಳಿ!
ನಿನ್ನೆ ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಆರ್ಸಿಬಿ ಮತ್ತು ಎಸ್ಆರ್ಹೆಚ್ ನಡುವಿನ ಪಂದ್ಯದಲ್ಲಿ ಟಾಸ್ ಕಮೆಂಟೇಟರ್ಆಗಿ ವೆಸ್ಟ್ ಇಂಡೀಸ್ನ ಇಯಾನ್ ಬಿಷಪ್ ಹಾಜರಿದ್ದರು.
ಈ ಇಯಾನ್ ಬಿಷಪ್ ಅವರ ಫೋಟೊವನ್ನು ಬಳಸಿಕೊಂಡ ಟ್ರೋಲರ್ ಒಬ್ಬ, ಈ ವೆಸ್ಟ್ ಇಂಡೀಸ್ನ ಆಟಗಾರನಿಗೆ ಗೊತ್ತಿರುವಷ್ಟು ಕ್ರಿಕೆಟ್ ನಾಲೆಡ್ಜ್ ನಮ್ಮ ದೇಶದ ಕಮೆಂಟೇಟರ್ಗಳಾದ ವಿರೇಂದ್ರ ಸೆಹ್ವಾಗ್, ನವಜೋತ್ ಸಿಧು ಮತ್ತು ಹರ್ಭಜನ್ ಸಿಂಗ್ಗೆ ಗೊತ್ತಿಲ್ಲ ಎಂದು ಟ್ರೋಲ್ ಮಾಡಿದ್ದಾನೆ.
ಇದೇ ಟ್ರೋಲರ್ ಇನ್ನೊಂದು ಫೋಸ್ಟ್ನಲ್ಲಿ, ಆರ್ ಅಶ್ವಿನ್ ಹಿಂದಿ ಭಾಷೆಯ ಕಮೆಂಟರಿಗೆ ಪಾದಾರ್ಪಣೆ ಮಾಡಿರುವ ವಿಷಯವನ್ನು ಎತ್ತಿಕೊಂಡು, ಹರ್ಭಜನ್ ನೀನು ಕಮೆಂಟರಿ ಬಗ್ಗೆ ಹೆಚ್ಚಿನ ಗಮನ ಕೊಡು ಇಲ್ಲದಿದ್ದರೆ ಅಶ್ವಿನ್ ನಿನ್ನ ಸ್ಥಾನವನ್ನು ಮತ್ತೊಮ್ಮೆ ಕಸಿದುಕೊಳ್ಳುತ್ತಾನೆಂದು ಅಪಹಾಸ್ಯ ಮಾಡಿದ್ದಾನೆ.
ಟ್ರೋಲರ್ಸ್ ಮೇಲೆ ಹರ್ಭಜನ್ ಗರಂ!
ಈ ಟ್ರೋಲ್ಗಳಿಂದ ಕೋಪಗೊಂಡ ಭಜ್ಜಿ, ಆನೆ ನಡೆಯಬೇಕಾದರೆ ನಾಯಿಗಳು ಬೊಗಳುತ್ತವೆ, ಇದಕ್ಕೆಲ್ಲಾ ನಾವು ಗಮನ ಕೊಡಬಾರದು ಎಂದು ತಿರುತೇಟು ನೀಡಿದ್ದಾರೆ. ಇನ್ನು ಅಶ್ವಿನ್ ಹೆಸರನ್ನು ಬಳಸಿ ಮಾಡಿದ ಟ್ರೋಲ್ಗೆ ಹರ್ಭಜನ್, ನಾಯಿಗೆ ತುಪ್ಪವನ್ನು ಜೀರ್ಣಿಸಿಕೊಳ್ಳಲು ಆಗುವುದಿಲ್ಲ, ಹಾಗೆಯೇ ನಿನ್ನಂತವನಿಗೆ ಬೇರೆಯವರ ಯಶಸ್ಸನ್ನು ನೋಡಲಾಗುವುದಿಲ್ಲ ಎಂದು ಉತ್ತರಿಸಿದ್ದಾರೆ.
ಹೊಟ್ಟೆ ಕಿಚ್ಚಿನ ಬಗ್ಗೆ ಮುಕ್ತವಾಗಿ ಮಾತನಾಡಿದ್ದ ಭಜ್ಜಿ-ಆ್ಯಶ್!
ಹರ್ಭಜನ್ ಸಿಂಗ್ ಮತ್ತು ಆರ್.ಅಶ್ವಿನ್ ನಡುವೆ ಸಣ್ಣ ಮಟ್ಟದ ತಿಕ್ಕಾಟವಿದೆ ಎಂದು ಕ್ರಿಕೆಟ್ ಜಗತ್ತಿನಲ್ಲಿ ಸುದ್ದಿ ಇರುವುದು ಸುಳ್ಳಲ್ಲ.
ಭಾರತ ತಂಡದಿಂದ ಹರ್ಭಜನ್ ಸಿಂಗ್ ಹೊರಹೋಗಲು ಆರ್.ಅಶ್ವಿನ್ ಅವರ ಆಗಮನವೇ ಕಾರಣ ಎಂದು ಕೆಲವರು ಹೇಳುವುದುಂಟು. ಈ ವಿಚಾರವಾಗಿ ಅಶ್ವಿನ್ ಅವರ ಯೂಟ್ಯೂಬ್ ಚಾನೆಲ್ನಲ್ಲಿ ಭಜ್ಜಿ ಮನಬಿಚ್ಚಿ ಮಾತನಾಡಿದ್ದರು.
ಮಾತಿನ ನಡುವೆ ಅಶ್ವಿನ್, ಭಜ್ಜಿ ನಿಮಗೆ ನನ್ನ ಮೇಲೆ ಹೊಟ್ಟೆ ಕಿಚ್ಚಿದೆ ಎಂದು ಬಹಳ ಜನ ಹೇಳುತ್ತಾರೆ. ಇದರ ಬಗ್ಗೆ ನಿಮ್ಮ ಹೇಳಿಕೆ ಏನು ಎಂದು ಕೇಳಿದಾಗ ಹರ್ಭಜನ್, ನಾನು ಆ ರೀತಿಯ ವ್ಯಕ್ತಿ ಎಂದು ನಿನಗೆ ಅನಿಸುತ್ತಾ? ಎಂದು ಅಶ್ವಿನ್ಗೆ ಮರುಪ್ರಶ್ನೆ ಮಾಡಿದ್ದರು.
ಆಗ ಅಶ್ವಿನ್, ನೋಡಿ ಹರ್ಭಜನ್, ನಿಮಗೆ ನನ್ನ ಬಗ್ಗೆ ಒಂದು ಕಾಲದಲ್ಲಿ ಬೇಸರವಿದ್ದರೂ ಅದನ್ನು ನಾನು ಪಾಸಿಟಿವ್ ಆಗಿಯೇ ತೆಗೆದುಕೊಳ್ಳುತ್ತೆನೆ, ಏಕೆಂದರೆ ನಾವೆಲ್ಲಾ ಮನುಷ್ಯರು. ಆದ್ದರಿಂದ ನಮಲ್ಲಿ ಭಾವನೆಗಳು ಸಹಜವಾಗಿ ಬದಲಾಗುತ್ತವೆ ಎಂದು ಅವರು ಹೇಳಿದ್ದರು,(ಏಜನ್ಸೀಸ್).