Ashes | ಆಶಸ್ ಮೊದಲ ಟೆಸ್ಟ್​ನಲ್ಲಿ ಟ್ರಾವಿಸ್ ಹೆಡ್ ಶತಕ ಸಿಡಿಸಿದ ಕ್ಷಣ  
ಕ್ರಿಕೆಟ್

ಆಶಸ್; ಹೆಡ್, ಸ್ಟಾರ್ಕ್ ದಾಳಿಗೆ ನಲುಗಿದ ಇಂಗ್ಲೆಂಡ್: ಮೊದಲ ಟೆಸ್ಟ್ ಗೆದ್ದು ಬೀಗಿದ ಕಾಂಗರೂಗಳು | Ashes

ಪರ್ತ್: 2025-26 ನೇಯ ಸಾಲಿನ ಆಶಸ್(Ashes) ಸರಣಿಯ ಮೊದಲ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾವು ಇಂಗ್ಲೆಂಡ್​ನ್ನು ಎಂಟು ವಿಕೆಟ್‌ಗಳಿಂದ ಬಗ್ಗುಬಡಿದಿದೆ. ಅಲ್ಲದೆ, ಅಸಿಸ್​ ಪರವಾಗಿ ಟ್ರಾವಿಸ್ ಹೆಡ್ ಸ್ಪೋಟಕ 123 ರನ್‌ಗಳ ಪಂದ್ಯ ಗೆಲ್ಲಲು ಕಾರಣವಾಯಿತು.
ಇಲ್ಲಿನ ಪರ್ತ್‌ನ ಆಪ್ಟಸ್ ಕ್ರೀಡಾಂಗಣದಲ್ಲಿ ನಡೆದ ಮೊದಲ ಟೆಸ್ಟ್​ ಪಂದ್ಯವು ಕೇವಲ ಎರಡು ದಿನಗಳಲ್ಲಿ ಕೊನೆಗೊಂಡಿದೆ. ಅಲ್ಲದೆ, ಟ್ರಾವಿಸ್ ಹೆಡ್ ಕೇವಲ 69 ಎಸೆತಗಳಲ್ಲಿ ಶತಕವನ್ನು ಭಾರಿಸಿದ್ದಾರೆ. ಇದು ಟೆಸ್ಟ್ ಕ್ರಿಕೆಟ್‌ನಲ್ಲಿ ಆಸ್ಟ್ರೇಲಿಯಾ ಪರ ನಾಲ್ಕನೇ ವೇಗದ ಶತಕವಾಗಿದೆ. 
ನಾಲ್ಕನೇ ಇನ್ನಿಂಗ್ಸ್‌ನಲ್ಲಿ ಬ್ಯಾಟಿಂಗ್​ ಮಾಡಲು ಬಂದ ಆಸ್ಟ್ರೇಲಿಯಾಕ್ಕೆ 205 ರನ್‌ಗಳ ಗುರಿಯನ್ನು ಆಂಗ್ಲರು ನೀಡಿದ್ದರು. ಇದಕ್ಕೆ ಉತ್ತರವಾಗಿ, ಟ್ರಾವಿಸ್ ಹೆಡ್ ಕೇವಲ 83 ಎಸೆತಗಳಲ್ಲಿ 16 ಬೌಂಡರಿ ಮತ್ತು ನಾಲ್ಕು ಸಿಕ್ಸರ್‌ಗಳೊಂದಿಗೆ ಅಬ್ಬರದ 123 ರನ್ ಗಳಿಸಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಇನ್ನೋಬ್ಬ ಆರಂಭಿಕ ಆಟಗಾರ ಜ್ಯಾಕ್ ವೆದರಾಲ್ಡ್ 23 ರನ್ ಗಳಿಸಿದರು. ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್​ ಬಂದ ಮಾರ್ನಸ್ ಲ್ಯಾಬುಶೇನ್ 51 ರನ್‌ ಗಳಿಸಿದರು. 

ಗೆದ್ದ ಪಂದ್ಯವನ್ನು ಸೋತ ಇಂಗ್ಲೆಂಡ್

ಮೊದಲ ಇನ್ನಿಂಗ್ಸ್‌ನಲ್ಲಿ ಇಂಗ್ಲೆಂಡ್ 172 ರನ್ ಗಳಿಸಿತು. ಆದರೆ ಇಂಗ್ಲಿಷ್ ಬೌಲರ್‌ಗಳು ಆಕ್ರಮಣಕಾರಿ ಬೌಲಿಂಗ್​ ದಾಳಿಗೆ ನಲುಗಿದ ಕಾಂಗರೂಗಳು ಮೊದಲ ಇನ್ನಿಂಗ್ಸ್‌ನಲ್ಲಿ 132 ರನ್‌ಗಳಿಗೆ  ಅಲೌಟ್​ಆಯಿತು. ಪ್ರಥಮ ಇನ್ನಿಂಗ್ಸ್​ನಲ್ಲಿ ಆಂಗ್ಲರು 40 ರನ್‌ಗಳ ಮುನ್ನಡೆ ಪಡೆದರು. ಎರೆಡನೇ ಇನ್ನಿಂಗ್ಸ್​ ಬ್ಯಾಟ್​ ಮಾಡಲು ಬಂದ ಇಂಗ್ಲೆಂಡ್ ಕೇವಲ 164 ರನ್​ ಗಳಿಸಿ ಸರ್ವಪತನ ಕಂಡಿತು. ನಾಲ್ಕನೇ ಇನ್ನಿಂಗ್ಸ್‌ನಲ್ಲಿ ಆಸ್ಟ್ರೇಲಿಯಾಕ್ಕೆ 205 ರನ್‌ಗಳ ಗುರಿಯನ್ನು ನೀಡಿತು. 
ಬ್ಯಾಟಿಂಗ್‌ಗೆ ಕಷ್ಟಕರವೆಂದು ತೋರುತ್ತಿದ್ದ ಪಿಚ್‌ನಲ್ಲಿ, ಆಸ್ಟ್ರೇಲಿಯಾ ನಾಲ್ಕನೇ ಇನ್ನಿಂಗ್ಸ್‌ನಲ್ಲಿ ಆಕ್ರಮಣಕಾರಿ ಆಟದ ತಂತ್ರವನ್ನು ಬಳಸಿತು. ಇದರ ಪರಿಣಾಮಕಾರಿ ಟ್ರಾವಿಸ್ ಹೆಡ್ ಇಂಗ್ಲಿಷ್ ಬೌಲರ್‌ಗಳನ್ನು ಹಣ್ಣುಗಾಯಿ ನೀರುಗಾಯಿ ಮಾಡಿದರು. ಇದರೊಂದಿಗೆ, ಆಸ್ಟ್ರೇಲಿಯಾ ಆಶಸ್ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.

10 ವಿಕೆಟ್‌ ಮಿಚೆಲ್ ಸ್ಟಾರ್ಕ್‌ 

ಈ ಪಂದ್ಯದಲ್ಲಿ ಮಿಚೆಲ್ ಸ್ಟಾರ್ಕ್ ಒಟ್ಟು 10 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಮೊದಲ ಇನ್ನಿಂಗ್ಸ್‌ನಲ್ಲಿ ಏಳು ಮತ್ತು ಎರಡನೇ ಇನ್ನಿಂಗ್ಸ್‌ನಲ್ಲಿ ಮೂರು ವಿಕೆಟ್​ ಪಡೆದರು,(ಏಜೆನ್ಸೀಸ್).