ಮುಕುಲ್ ಚೌಧರಿ (ಎಡ), ಅರ್ಜುನ್ ತೆಂಡೂಲ್ಕರ್ (ಬಲ)
- ಕೆಕೆಆರ್ ವಿರುದ್ಧದ ಪಂದ್ಯದಲ್ಲಿ ಮುಕುಲ್ ಚೌಧರಿ ಅಮೋಘ ಬ್ಯಾಟಿಂಗ್
- ಸೋಲು ಖಚಿತ ಎಂದು ಕುಳಿತಿದ್ದ ತಂಡಕ್ಕೆ ಮುಕುಲ್ ಗೆಲುವಿನ ಭರವಸೆ
- ಅಂದು ಸಚಿನ್ ತೆಂಡೂಲ್ಕರ್ ಹೇಳಿದ್ದ ಮಾತುಗಳು ಕಡೆಗೂ ನಿಜವಾಯಿತು
ಕೋಲ್ಕತ: ನಿನ್ನೆ (ಏ.10) ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆದ ಲಖನೌ ಸೂಪರ್ ಜೈಂಟ್ಸ್ ಮತ್ತು ಕೋಲ್ಕತ ನೈಟ್ ರೈಡರ್ಸ್ ನಡುವಿನ ಐಪಿಎಲ್ 19ನೇ ಆವೃತ್ತಿಯ ಪಂದ್ಯದಲ್ಲಿ ರಿಷಭ್ ಪಂತ್ ಪಡೆ ರೋಚಕ ಜಯ ಸಾಧಿಸಿತು. ಕೆಕೆಆರ್ ಗೆಲುವಿನ ಲೆಕ್ಕಾಚಾರವನ್ನು ತಲೆಕೆಳಗಾಗಿಸಿದ ಮುಕುಲ್ ಚೌಧರಿ ಅವರ ಸ್ಫೋಟಕ ಆಟಕ್ಕೆ ಅನೇಕ ಕ್ರಿಕೆಟ್ ಪ್ರೇಮಿಗಳು ಫಿದಾ ಆದರು.
ಎಲ್‌ಎಸ್‌ಜಿ ತಂಡದ ಪರ ವಿಕೆಟ್ ಕೀಪರ್ ಹಾಗೂ ಬ್ಯಾಟರ್ ಆಗಿ ಕಣಕ್ಕಿಳಿದ ಮುಕುಲ್ ಚೌಧರಿ, ಕೆಕೆಆರ್ ನೀಡಿದ್ದ 182 ರನ್‌ಗಳ ಗುರಿಯನ್ನು ನಮ್ಮಿಂದ ತಲುಪಲು ಆಗೋದಿಲ್ಲ ಎಂದು ಚಿಂತೆಗೀಡಾಗಿದ್ದ ತಂಡಕ್ಕೆ ಆಸರೆಯ ಭರವಸೆಯನ್ನು ನೀಡಿದ್ದು ಮೈದಾನದಲ್ಲಿದ್ದ ಕ್ರಿಕೆಟ್ ಪ್ರಿಯರನ್ನು ರೋಮಾಂಚಕಗೊಳಿಸಿತು. ಕೊನೆಯ 4 ಓವರ್ಗಳಲ್ಲಿ ಎಲ್ಎಸ್ಜಿಗೆ 54 ರನ್‌ಗಳ ಅಗತ್ಯವಿತ್ತು. ಈ ಸಮಯದಲ್ಲಿ ಕ್ರೀಸ್ಗೆ ಅಂಟಿ ನಿಂತ ಮುಕಲ್, ಕೇವಲ 27 ಎಸೆತಗಳಲ್ಲಿ ಅಜೇಯ 54 ರನ್ ಬಾರಿಸುವ ಮೂಲಕ ತಂಡಕ್ಕೆ ರೋಚಕ ಗೆಲುವು ತಂದುಕೊಟ್ಟರು.
ಎಲ್‌ಎಸ್‌ಜಿ ತಂಡದ ಸಹ ಆಟಗಾರ ಅರ್ಜುನ್ ತೆಂಡೂಲ್ಕರ್, ಐಪಿಎಲ್ ಶುರುವಿಗೂ ಮುನ್ನವೇ ಮುಕುಲ್ ಸ್ಫೋಟಕ ಆಟದ ಬಗ್ಗೆ ಮಾತನಾಡಿದ್ದರು. ಆತನಿಗೆ ಸಿಕ್ಸರ್, ಪವರ್ಹಿಟ್ಟಿಂಗ್ ಸಾಮರ್ಥ್ಯವಿದೆ. ಎದುರಾಳಿ ತಂಡದವರು ಚೌಧರಿ ಕಣಕ್ಕಿಳಿದಾಗ ಎಚ್ಚರಿಕೆಯಿಂದ ಆಡಿಸಿದರೆ ಉತ್ತಮ. ಕಾರಣ, ಪ್ರ್ಯಾಕ್ಟೀಸ್ ಸಮಯದಲ್ಲಿ ನಾನು ಅವರ 360 ಡಿಗ್ರಿ ಹಿಟ್ಟಿಂಗ್ ಸಾಮರ್ಥ್ಯವನ್ನು ನೋಡಿ ಆಶ್ಚರ್ಯಚಕಿತನಾಗಿದ್ದೆ ಎಂದು ಶುಭಂಕರ್ ಮಿಶ್ರಾ ಅವರೊಂದಿಗಿನ ಪಾಡ್ಕಾಸ್ಟ್ ಸಂದರ್ಶನದಲ್ಲಿ ಹೇಳಿದ್ದರು.
ಅರ್ಜುನ್ ತೆಂಡೂಲ್ಕರ್ ಆಡಿದ ಮಾತುಗಳು ನಿನ್ನೆಯ ಪಂದ್ಯದಲ್ಲಿ ಕಡೆಗೂ ನಿಜವಾಗಿದ್ದು, ಇದೀಗ ಕ್ರಿಕೆಟ್ ಪ್ರಿಯರ ಚರ್ಚೆಗೆ ಕಾರಣವಾಗಿದೆ. ನಿಜಕ್ಕೂ ಅರ್ಜುನ್ ಹೇಳಿದಂತೆ ಕೆಕೆಆರ್ ವಿರುದ್ಧದ ಮ್ಯಾಚ್ನಲ್ಲಿ ಅವರು 360 ಡಿಗ್ರಿಯಲ್ಲಿ ಸಿಕ್ಸರ್ಗಳನ್ನು ಬಾರಿಸಿದರು. ಇದು ಮೈದಾನದಲ್ಲಿ ಕುಳಿತಿದ್ದ ಕ್ರಿಕೆಟ್ ಅಭಿಮಾನಿಗಳನ್ನು ಹುಚ್ಚೆದ್ದು ಕುಣಿಯುವಂತೆ ಮಾಡಿತು,(ಏಜೆನ್ಸೀಸ್).