ಜಿಯೋ ಸಿಮ್​ ಮುರಿದು ಹಾಕಿ ಕಾವ್ಯ ಮಾರನ್​ ವಿರುದ್ಧ ರೊಚ್ಚಿಗೆದ್ದ ಅನನ್ಯ: ವೈರಲ್​ ಸುದ್ದಿಯ ಅಸಲಿಯತ್ತು ಬಯಲು! Kavya Maran  
ಕ್ರಿಕೆಟ್

ಜಿಯೋ ಸಿಮ್​ ಮುರಿದು ಹಾಕಿ ಕಾವ್ಯ ಮಾರನ್​ ವಿರುದ್ಧ ರೊಚ್ಚಿಗೆದ್ದ ಅನನ್ಯ: ವೈರಲ್​ ಸುದ್ದಿಯ ಅಸಲಿಯತ್ತು ಬಯಲು! Kavya Maran

ಪ್ರಮುಖ ಮುಖ್ಯಾಂಶಗಳು

  • ಹಂಡ್ರೆಡ್ ಲೀಗ್ ಹರಾಜಿನ ಭಾಗವಾಗಿ ಸನ್‌ರೈಸರ್ಸ್ ಲೀಡ್ಸ್ ಓನರ್​ ಕಾವ್ಯ ಮಾರನ್ ವಿವಾದಾತ್ಮಕ ಹೆಜ್ಜೆ ಇಟ್ಟಿರುವುದು
  • ಪಾಕ್​ ಆಟಗಾರ ಅಬ್ರಾರ್ ಅಹ್ಮದ್ ಅವರನ್ನು ಹರಾಜಿನಲ್ಲಿ ತಮ್ಮ ತಂಡಕ್ಕೆ ಖರೀದಿಸಿರುವ ಕಾವ್ಯ ಮಾರನ್​
  • ನೀವು ಭಾರತದಲ್ಲಿ ಹಣ ಸಂಪಾದಿಸಿ ಅದನ್ನು ಪಾಕಿಸ್ತಾನಿಗಳಿಗೆ ನೀಡುತ್ತೀರಾ ಎಂದು ಕಿಡಿಕಾರಿದ ಭಾರತೀಯರು
Kavya Maran : ಸನ್‌ರೈಸರ್ಸ್ ಲೀಡ್ಸ್ ತಂಡದ ಮಾಲಕಿ ಕಾವ್ಯ ಮಾರನ್,​ ಹಂಡ್ರೆಡ್ ಲೀಗ್ ಹರಾಜಿನ ಭಾಗವಾಗಿ ವಿವಾದಾತ್ಮಕ ಹೆಜ್ಜೆ ಇಟ್ಟಿರುವುದು ಎಲ್ಲರಿಗೂ ಗೊತ್ತೇ ಇದೆ. ಭಾರತದ ಶತ್ರು ಪಾಕಿಸ್ತಾನ ಅನ್ನೋದನ್ನ ವಿಶೇಷವಾಗಿ ಹೇಳಬೇಕಿಲ್ಲ. ಈ ಪಾಕ್​, ನಮ್ಮ ರಾಷ್ಟ್ರದ ಮೇಲೆ ಸದಾ ವಿಷಕಾರುತ್ತಲೇ ಇರುತ್ತದೆ. ಅಲ್ಲಿನ ಪ್ರಮುಖ ವ್ಯಕ್ತಿಗಳು ಕೂಡ ಭಾರತದ ವಿರುದ್ಧ ನಾಲಿಗೆ ಹರಿಬಿಡುತ್ತಲೇ ಇರುತ್ತಾರೆ. ಪರಿಸ್ಥಿತಿ ಹೀಗಿರುವಾಗ ಪಾಕ್​ ಆಟಗಾರ ಅಬ್ರಾರ್ ಅಹ್ಮದ್ ಅವರನ್ನು ಹರಾಜಿನಲ್ಲಿ ತಮ್ಮ ತಂಡಕ್ಕೆ ಖರೀದಿಸಿರುವ ಕಾವ್ಯ ಮಾರನ್​ ನಡೆ, ಭಾರತೀಯರ ಆಕ್ರೋಶಕ್ಕೆ ಗುರಿಯಾಗಿದೆ.
ಯಾವಾಗ ಅಬ್ರಾರ್ ಅಹ್ಮದ್ ಅವರನ್ನು ಕಾವ್ಯ ಮಾರನ್​ ಖರೀದಿ ಮಾಡಿದರೋ ಆ ಕ್ಷಣದಿಂದ ಕಾವ್ಯ ಅವರು ಟ್ರೋಲಿಗರ ಗುರಿಯಾಗಿದ್ದಾರೆ. ಕಾವ್ಯ ವಿರುದ್ಧದ ಅನೇಕ ಪೋಸ್ಟ್‌ಗಳು ಜಾಲತಾಣದಲ್ಲಿ ಹರಿಬರುತ್ತಿದೆ. ಕಾವ್ಯರಿಗೆ ದೇಶದ್ರೋಹಿ ಎಂಬ ಹಣೆಪಟ್ಟಿ ಕಟ್ಟಲಾಗುತ್ತಿದೆ. ನೀವು ಭಾರತದಲ್ಲಿ ಹಣ ಸಂಪಾದಿಸಿ ಅದನ್ನು ಪಾಕಿಸ್ತಾನಿಗಳಿಗೆ ನೀಡುತ್ತೀರಾ? ಎಂದು ಪ್ರಶ್ನಿಸುವ ಮೂಲಕ ಕಾವ್ಯರನ್ನು ನೆಟ್ಟಿಗರು ತರಾಟೆಗೆ ತೆಗೆದುಕೊಂಡಿದ್ದಾರೆ. ಇದರ ನಡುವೆ, ಬಾಲಿವುಡ್ ನಾಯಕಿ ಅನನ್ಯಾ ಪಾಂಡೆ ಕೂಡ ಈ ವಿವಾದಕ್ಕೆ ಪ್ರತಿಕ್ರಿಯಿಸಿದ್ದಾರೆ ಎನ್ನಲಾದ ಪೋಸ್ಟ್​ ಒಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಬಾಲಿವುಡ್ ನಾಯಕಿ ಅನನ್ಯಾ ಪಾಂಡೆ ತಮ್ಮ ಜಿಯೋ ಸಿಮ್ ಅನ್ನು ಮುರಿದು ಪರೋಕ್ಷವಾಗಿ ಕಾವ್ಯಾ ಅವರನ್ನು ಟೀಕಿಸುವಂತಹ ಪೋಸ್ಟ್ ಮಾಡಿದ್ದಾರೆ ಎಂಬ ಸುದ್ದಿ ವೈರಲ್ ಆಗಿದೆ. ಅಂದಹಾಗೆ, ಸನ್‌ರೈಸರ್ಸ್ ಹೈದರಾಬಾದ್ (SRH) ತಂಡದ ಪ್ರಾಯೋಜಕರೂ ಜಿಯೋ. ಈ ಹಿನ್ನೆಲೆಯಲ್ಲಿ ಬಾಲಿವುಡ್ ನಾಯಕಿ ಅನನ್ಯಾ ಪಾಂಡೆ ತಮ್ಮ ಜಿಯೋ ಸಿಮ್ ಅನ್ನು ರದ್ದುಗೊಳಿಸುವ ಮೂಲಕ ಪ್ರತಿಭಟನೆ ವ್ಯಕ್ತಪಡಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಇದಕ್ಕೆ ಸಂಬಂಧಿಸಿದ ಪೋಸ್ಟ್​ ವೈರಲ್​ ಆಗಿದ್ದು, ಇದೀಗ ಬಿಸಿ ಚರ್ಚೆಯ ವಿಷಯವಾಗಿದೆ.
ಬಾಲಿವುಡ್ ನಾಯಕಿ ಅನನ್ಯಾ ಪಾಂಡೆ ಅವರಿಗೆ ಮೊದಲಿನಿಂದಲೂ ದೇಶಭಕ್ತಿ ಇದೆ. ಅವರು ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ ಪ್ರತಿಯೊಂದು ವಿಚಾರಕ್ಕೂ ಪ್ರತಿಕ್ರಿಯಿಸುತ್ತಾರೆ. ಅದೇ ರೀತಿ ಕಾವ್ಯಾ ಮಾರನ್ ಅವರು ಇತ್ತೀಚೆಗೆ ಪಾಕಿಸ್ತಾನಿ ಆಟಗಾರ ಅಬ್ರಾರ್ ಅಹ್ಮದ್ ಅವರನ್ನು ಹರಾಜಿನಲ್ಲಿ 2.34 ಕೋಟಿ ರೂ.ಗಳಿಗೆ ಖರೀದಿಸಿದ್ದಕ್ಕೆ ಆಕ್ರೋಶ ಹೊರಹಾಕಿದ್ದಾರೆ ಎಂಬ ವರದಿ ಇದೆ.

ಸತ್ಯಾಂಶ ಏನು?

ಅಂದಹಾಗೆ, ಸನ್‌ರೈಸರ್ಸ್ ಹೈದರಾಬಾದ್ (SRH) ಜೊತೆಗಿನ ಜಿಯೋ ಸಂಬಂಧದ ಹಿನ್ನೆಲೆಯಲ್ಲಿ ಬಾಲಿವುಡ್ ನಟಿ ಅನನ್ಯಾ ಪಾಂಡೆ ತಮ್ಮ ಜಿಯೋ ಸಿಮ್ ಕಾರ್ಡ್ ಮುರಿದಿದ್ದಾರೆ ಎಂದು ಹೇಳುವ ವೈರಲ್ ಪೋಸ್ಟ್ ನಕಲಿಯಾಗಿದೆ. ಪೋಸ್ಟ್‌ನಲ್ಲಿ ಅನನ್ಯಾ "ದೇಶ ಮೊದಲು" ಎಂಬ ಶೀರ್ಷಿಕೆಯೊಂದಿಗೆ ಮುರಿದ ಜಿಯೋ ಸಿಮ್ ಹಿಡಿದಿರುವುದನ್ನು ತೋರಿಸಲಾಗಿದೆ. ಕೆಲ ನೆಟ್ಟಿಗರು SRH ಪ್ರಾಯೋಜಕತ್ವದ ವಿರುದ್ಧ ಪ್ರತಿಭಟಿಸುವ ಸೂಚಕವಾಗಿ ತನ್ನ 3 ವರ್ಷದ ಜಿಯೋ ಸಿಮ್ ಅನ್ನು ಅನನ್ಯ ನಾಶಪಡಿಸಿದ್ದಾರೆ ಎಂದು ಹೇಳಲಾಗಿದೆ. ಆದಾಗ್ಯೂ, ಸೂಕ್ಷ್ಮವಾಗಿ ಪರಿಶೀಲಿಸಿದಾಗ ಅನನ್ಯಾ ಪಾಂಡೆ ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಅಂತಹ ಯಾವುದೇ ಸ್ಟೋರಿಯನ್ನು ಎಂದಿಗೂ ಹಂಚಿಕೊಂಡಿಲ್ಲ ಎಂದು ತೋರಿಸುತ್ತದೆ. ಆನ್‌ಲೈನ್‌ನಲ್ಲಿ ಹರಿದಾಡುತ್ತಿರುವ ಪೋಸ್ಟ್​ ದಾರಿತಪ್ಪಿಸುವಂತಿದೆ. ಸತ್ಯ ಪರಿಶೀಲನೆಯ ನಂತರ, ಹಲವಾರು ಬಳಕೆದಾರರು ಈ ಪೋಸ್ಟ್​ ನಕಲಿ ಎಂದು ಖಚಿತಪಡಿಸಿದ್ದಾರೆ, (ಏಜೆನ್ಸೀಸ್​).