ಭಾರತ ಕ್ರಿಕೆಟ್​ ತಂಡದ ಮಾಜಿ ಬೌಲರ್​ ಹರ್ಭಜನ್ ಸಿಂಗ್, ಪಾಕಿಸ್ತಾನದ ಮಾಜಿ ಆಟಗಾರ ತನ್ವೀರ್ ಅಹ್ಮದ್  
ಕ್ರಿಕೆಟ್

ಐದು ಮ್ಯಾಚ್ ಆಡಿರೋ ನೀನು ನನಗೇ ಬುದ್ಧಿ ಹೇಳ್ತೀಯಾ? ಪಾಕ್ ಮಾಜಿ ಆಟಗಾರನಿಗೆ ಹರ್ಭಜನ್ ಸಿಂಗ್ ಖಡಕ್​ ವಾರ್ನಿಂಗ್​; ವಿಡಿಯೋ ವೈರಲ್! Harbhajan Singh

ಪ್ರಮುಖ ಮುಖ್ಯಾಂಶಗಳು

  • ಭಾರತ ಕ್ರಿಕೆಟ್​ ತಂಡ ಕಂಡ ಅಗ್ರಗಣ್ಯ ಬೌಲರ್​ಗಳಲ್ಲಿ ಹರ್ಭಜನ್ ಸಿಂಗ್ ಒಬ್ಬರು
  • ಹರ್ಭಜನ್ ಸಿಂಗ್ ಯಾವಾಗಲೂ ಪಾಕಿಸ್ತಾನಿ ಆಟಗಾರರ ಹಿಂದೆ ತಿರುಗಾತ್ತಾನೆ ಎಂದು ಹೇಳಿದ್ದ ತನ್ವೀರ್ ಅಹ್ಮದ್
  • ಐದು ಮ್ಯಾಚ್ ಆಡಿರೋ ನೀನು ನನಗೇ ಬುದ್ಧಿ ಹೇಳ್ತೀಯಾ ಎಂದ ಭಜ್ಜಿ
ಕ್ರಿಕೆಟ್: ಭಾರತ ಕ್ರಿಕೆಟ್​ ತಂಡ ಕಂಡ ಅಗ್ರಗಣ್ಯ ಬೌಲರ್​ಗಳಲ್ಲಿ ಹರ್ಭಜನ್ ಸಿಂಗ್ (Harbhajan Singh) ಒಬ್ಬರು. ಆದರೆ ಇತ್ತೀಚೆಗೆ ಹರ್ಭಜನ್ ಸಿಂಗ್ ತಮ್ಮ ಕ್ರಿಕೆಟ್​ಕ್ಕಿಂತ ತಮ್ಮ ಮಾತಿನಿಂದ ಸುದ್ದಿಯಲ್ಲಿದ್ದಾರೆ.
ಸದ್ಯ ಪುರುಷರ ಟಿ20 ವಿಶ್ವಕಪ್ ನಡೆಯುತ್ತಿದ್ದು, ಭಾರತದೊಂದಿಗೆ ಪಾಕಿಸ್ತಾನ ಪಂದ್ಯವನ್ನು ಆಡುವುದಿಲ್ಲ ಎಂದು ತಗಾದೆ ಎತ್ತಿರುವ ವಿಷಯ ನಿಮಗೆಲ್ಲಾ ತಿಳಿದೆ ಇದೆ. ಆದರೆ ಈ ವಿಷಯವು ಕೇಲವ ಪಾಕಿಸ್ತಾನದ ವಿರುದ್ಧ ಮೈದಾನಕ್ಕಿಳಿಯುವ ಆಟಗಾರರರಿಗೆ ಸೀಮಿತವಾಗಿರದೇ, ಕ್ರಿಕೆಟ್​ನಿಂದ ನಿವೃತ್ತಿ ಘೋಷಿಸಿರುವ ಆಟಗಾರರರು ಸಹ ಈ ವಿಷಯದ ಕುರಿತು ಮಾತನಾಡುತ್ತಿದ್ದಾರೆ. ಈಗ ಹರ್ಭಜನ್ ಸಿಂಗ್ ತಮ್ಮ ಯೂಟ್ಯೂಬ್ ಚಾನಲ್​ನಲ್ಲಿ ಪಾಕಿಸ್ತಾನದ ಮಾಜಿ ಆಟಗಾರನೊಬ್ಬನನ್ನು ತರಾಟೆ ತೆಗೆದುಕೊಂಡಿರುವ ವಿಡಿಯೋ ಈಗ ಎಲ್ಲಡೆ ವೈರಲ್​ ಆಗುತ್ತಿದೆ.

ಆಗಿದ್ದೇನು?

ಪಾಕಿಸ್ತಾನದ ಮಾಜಿ ಕ್ರಿಕೆಟಿಗ ತನ್ವೀರ್ ಅಹ್ಮದ್, ಹರ್ಭಜನ್ ಸಿಂಗ್ ಯಾವಾಗಲೂ ಪಾಕಿಸ್ತಾನಿ ಕ್ರಿಕೆಟಿಗರ ಜೊತೆ ಸುತ್ತಾಡುತ್ತಿರುತ್ತಾನೆ ಎಂದು ಹೇಳುವ ಮೂಲಕ ವಿವಾದಕ್ಕೆ ನಾಂದಿಹಾಡಿದರು. ಈಗ ತನ್ವೀರ್ ಅಹ್ಮದ್ ಅವರ ಈ ವ್ಯಂಗ್ಯಭರಿತ ಹೇಳಿಕೆಯಿಂದ ತಾಳ್ಮೆ ಕಳೆದುಕೊಂಡ ಭಜ್ಜಿ, ನಾನು ಯುಎಇಯಲ್ಲಿ ನಡೆದ ILT20 ಪಂದ್ಯಾವಳಿಗೆ ತೆರಳಿದ್ದಾಗ ಪಾಕ್​ ಆಟಗಾರ ಉಸ್ಮಾನ್ ತಾರಿಕ್​ ಅವರನ್ನು ಸಂದರ್ಶಿಸಿದ ಹಿನ್ನಲೆ ತನ್ವೀರ್ ಅಹ್ಮದ್ ಈ ರೀತಿ ಮಾತನಾಡಿದ್ದಾನೆ ಎಂದರು.
ಈ ತನ್ವೀರ್ ಅಹ್ಮದ್ ಒಬ್ಬ ತುಚ್ಛ ಮನುಷ್ಯ, ನನಗೆ ಅವನ್ಯಾರೆಂದೆ ಗೊತ್ತಿಲ್ಲ, ಅವನು ಪಾಕಿಸ್ತಾನದ ಪರವಾಗಿ ಹೆಚ್ಚೆಂದರೆ 3-4 ಪಂದ್ಯಗಳನ್ನು ಆಡಿದ್ದಾನೆ, ಆದರೆ ಅವನು ತನ್ನನ್ನು ತಾನು ಇಮ್ರಾನ್ ಖಾನ್, ವಾಸಿಮ್ ಅಕ್ರಮ್ ಅಥವಾ ವಕಾರ್ ಯೂನಿಸ್ ಎಂಬಂತೆ ತಿಳಿದಂತಿದೆ. ನಿನ್ನ ಬದುಕಿಗೆ ನಾಚಿಕೆಯಾಗಬೇಕು ಎಂದು ಭಜ್ಜಿ ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ.
ILT20 ಪಂದ್ಯದ ನಂತರ ಪಂದ್ಯ ಶ್ರೇಷ್ಠ ಪ್ರಶಸ್ತಿ ಗೆದ್ದ ತಾರಿಕ್ ಅವರನ್ನು ಸಂದರ್ಶಿಸುವುದು ತನ್ನ ಕರ್ತವ್ಯವಾಗಿತ್ತು, ಅದನ್ನು ತಪ್ಪಾಗಿ ಅರ್ಥೈಸಿರುವ ಇವನು ಮೊದಲು ಅಸಂಬದ್ಧವಾಗಿ ಮಾತನಾಡುವುದನ್ನು ನಿಲ್ಲಿಸಬೇಕು, ಗೌರವಯುತವಾಗಿ ವರ್ತಿಸುವುದನ್ನು ಕಲಿತುಕೊಳ್ಳಲಿ, 5 ಪಂದ್ಯಗಳನ್ನು ಆಡಿರುವ ನೀನು 100 ಅಂತರರಾಷ್ಟ್ರೀಯ ಪಂದ್ಯಗಳನ್ನು ಆಡಿರುವ ನನಗೆ ಹೇಳುವ ಅವಶ್ಯಕತೆ ಇಲ್ಲ ಎಂದು ಖಡಕ್​ ಎಚ್ಚರಿಕೆ ನೀಡಿದ್ದಾರೆ.
ನಿನ್ನಂತವರು ಕ್ರಿಕೆಟ್​ನಲ್ಲಿ ಏನು ಕಿಸಿದಿರುವುದಿಲ್ಲ, ಸುಮ್ಮನೆ ಚಾನೆಲ್​ ಮುಂದೆ ಕುಳಿತು ಬಾಯಿಗೆ ಬಂದ ಹಾಗೆ ಬೊಗಳುತ್ತಾರೆ, ಮೊದಲು ಹೇಗೆ ವರ್ತಿಸಬೇಕು ಎನ್ನುವುದನ್ನು ಕಲಿತಿಕೊ, ಇನ್ನೊಮ್ಮೆ ನನ್ನ ತಂಟೆಗೆ ಬಂದರೆ ನಿನ್ನ ಜೀವನವನ್ನೇ ನಾಶ ಮಾಡುತ್ತೇನೆ ಎಂದು ಭಜ್ಜಿ ವಾರ್ನಿಂಗ್​ ಕೊಟ್ಟಿದ್ದಾರೆ,(ಏಜನ್ಸೀಸ್​).