Sreeleela Tilak Varma Dating 
ಕ್ರಿಕೆಟ್

ಒಂದು ವರ್ಷದಿಂದ ತಿಲಕ್ ವರ್ಮಾ ಮತ್ತು ಶ್ರೀಲೀಲಾ ಡೇಟಿಂಗ್?, ಗಾಸಿಪ್ಸ್​ ಬಗ್ಗೆ ಫ್ಯಾನ್ಸ್ ಹೇಳಿದ್ದಿಷ್ಟು.. Sreeleela

ಪ್ರಮುಖ ಮುಖ್ಯಾಂಶಗಳು

  • ಸ್ಟಾರ್ ಬ್ಯಾಟರ್ ತಿಲಕ್ ವರ್ಮಾ ಮತ್ತು ನಟಿ ಶ್ರೀಲೀಲಾ ಡೇಟಿಂಗ್ ಗಾಸಿಪ್
  • ಪಂಜಾಬ್ ಕಿಂಗ್ಸ್ ವಿರುದ್ಧದ ಮ್ಯಾಚ್​ ನೋಡಲು ಬಂದಿದ್ದ ಶ್ರೀಲೀಲಾ
  • ತಮ್ಮ ಕುಟುಂಬದೊಂದಿಗೆ ಸ್ಟೇಡಿಯಂಗೆ ಆಗಮಿಸಿದ್ದರು ಎಂಬ ಪೋಸ್ಟ್‌ಗಳು ವೈರಲ್.
  • ಊಹಾಪೋಹ ಸುಳ್ಳು ಎಂದ ಶ್ರೀ ಲೀಲಾ ಮತ್ತು ಕ್ರಿಕೆಟಿಗನ ಅಭಿಮಾನಿಗಳು
Sreeleela and Cricketer Tilak Varma in a Relationship: ಕಿಸ್​ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ನಟಿ ಶ್ರೀಲೀಲಾ (Sreeleela)ಈಗ ಟಾಲಿವುಡ್​, ಬಾಲಿವುಡ್​,ಕಾಲಿವುಡ್​ನಲ್ಲಿ ಮಿಂಚುತ್ತಿದ್ದಾರೆ. ಇತ್ತೀಚಗೆ ಅವರು ನಟಿಸಿದ್ದ ಉಸ್ತಾದ್ ಸಿನಿಮಾ ರಿಲೀಸ್ ಆಗಿತ್ತು. ಈ ನಡುವೆ ಅವರು ಯಂಗ್​ ಕ್ರಿಕೆಟರ್​ ತಿಲಕ್​ ವರ್ಮಾ ಜೊತೆಗೆ ಒಂದು ವರ್ಷದಿಂದ ಗುಟ್ಟಾಗಿ ಡೇಟಿಂಗ್ ಮಾಡುತ್ತಿದ್ದಾರೆ ಎನ್ನುವ ಊಹಾಪೋಹ ಎದ್ದಿದೆ.
ಹೌದು, ಮುಂಬೈ ಇಂಡಿಯನ್ಸ್ ತಂಡದ ಸ್ಟಾರ್ ಆಟಗಾರ, ತೆಲುಗು ಕುರ್ರಾಡು ತಿಲಕ್ ವರ್ಮಾ ಮತ್ತು ನಟಿ ಶ್ರೀಲೀಲಾ ಪ್ರೀತಿಯಲ್ಲಿದ್ದಾರೆ ಎಂಬ ವದಂತಿಗಳು ಕಾಡ್ಗಿಚ್ಚಿನಂತೆ ಹರಡುತ್ತಿವೆ. ಆದರೆ, ಇದೆಲ್ಲ ಊಹಾಪೋಹವಷ್ಟೇ ಯಾರೋ ಫೋಟೋಗಳನ್ನು ಎಡಿಟ್​ ಮಾಡಿ ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ ಎಂದು ಅಭಿಮಾನಿಗಳು ಕಿಡಿಕಾರಿದ್ದಾರೆ
ಪಂಜಾಬ್ ಕಿಂಗ್ಸ್ ಮತ್ತು ಮುಂಬೈ ಇಂಡಿಯನ್ಸ್ ನಡುವಿನ ಹೈ-ವೋಲ್ಟೇಜ್ ಪಂದ್ಯ ಇತ್ತೀಚೆಗೆ ಧರ್ಮಶಾಲದಲ್ಲಿ ನಡೆದಿತ್ತು. ಈ ಪಂದ್ಯದಲ್ಲಿ ತಿಲಕ್ ವರ್ಮಾ ಭರ್ಜರಿ ಬ್ಯಾಟಿಂಗ್ ನಡೆಸಿ ಮುಂಬೈ ತಂಡವನ್ನು ಒಂಟಿ ಕೈಯಿಂದ ಗೆಲ್ಲಿಸಿದ್ದರು. ಈ ಪಂದ್ಯ ನೋಡಲು ಶ್ರೀಲೀಲಾ ಅವರು ತಮ್ಮ ತಾಯಿಯೊಂದಿಗೆ ಮುಂಬೈ ಇಂಡಿಯನ್ಸ್ ಜರ್ಸಿ ಧರಿಸಿ ಬಂದಿದ್ದರು ಎನ್ನುವ ಪೋಸ್ಟ್​ಗಳು ವೈರಲ್ ಆಗುತ್ತಿದೆ.

ತೆಲುಗು ಅಬ್ಬಾಯ್, ಕನ್ನಡ ಅಮ್ಮಾಯ್ ಸೀಕ್ರೇಟ್ ಲವ್​?

ಶ್ರೀಲೀಲಾ ಮತ್ತು ತಿಲಕ್ ವರ್ಮಾ ಅವರು ಸಾಮಾನ್ಯ ಸ್ನೇಹಿತರೊಬ್ಬರ ಮೂಲಕ ಪರಿಚಯವಾಗಿದ್ದಾರೆ ಎನ್ನಲಾಗಿದೆ. ಕಳೆದ ಒಂದು ವರ್ಷದಿಂದ ರಹಸ್ಯವಾಗಿ ಡೇಟಿಂಗ್ ಮಾಡುತ್ತಿದ್ದಾರೆ. ಅಷ್ಟೇ ಅಲ್ಲದೇ, ಇವರಿಬ್ಬರು ಶೀಘ್ರದಲ್ಲೇ ಮದುವೆಯಾಗಲಿದ್ದಾರೆ ಎನ್ನುವ ಪುಕಾರು ಎದ್ದಿದೆ.

ತಿಲಕ್​ ವರ್ಮಾ ಅಭಿಮಾನಿಗಳು ಏನಂದ್ರು?

ಡೇಟಿಂಗ್ ಸುದ್ದಿಯಲ್ಲಿ ಯಾವುದೇ ಅಧಿಕೃತ ಸತ್ಯಾಂಶವಿಲ್ಲ. ಶ್ರೀಲೀಲಾ ಅವರು ಧರ್ಮಶಾಲಾ ಪಂದ್ಯಕ್ಕೆ ಹಾಜರಾಗಿದ್ದರು ಎನ್ನಲಾದ ಫೋಟೋಗಳು ಹಳೆಯದಾಗಿದ್ದು, ಸೋಷಿಯಲ್ ಮೀಡಿಯಾದಲ್ಲಿ ರೀಚ್ ಮತ್ತು ಲೈಕ್ಸ್‌ಗಳಿಗಾಗಿ ಕಿಡಿಗೇಡಿಗಳು ಇಬ್ಬರ ಫೋಟೋಗಳನ್ನು ಎಡಿಟ್ ಮಾಡಿ ಸುಳ್ಳು ಸುದ್ದಿ ಹರಡುತ್ತಿದ್ದಾರೆ ಎಂದು ತಿಲಕ್ ವರ್ಮಾ ಅವರ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ, (ಏಜೆನ್ಸೀಸ್).