Tilak Varma Sreeleela Dating Rumours
- ಶ್ರೀ ಲೀಲಾ- ತಿಲಕ್ ವರ್ಮಾ ಜೊತೆಗಿನ ಡೇಟಿಂಗ್ ಗಾಸಿಪ್ಸ್ಗೆ ಬೇಕ್
- ಡೇಟಿಂಗ್ ಗಾಸಿಪ್ಸ್ ಎಲ್ಲ ಸುಳ್ಳು, ಹೇಗೆ ಕತೆ ಕಟ್ತಾರೋ ಗೊತ್ತಿಲ್ಲ ಎಂದ ಶ್ರೀ ಲೀಲಾ ತಾಯಿ
- ಸುಮ್ನೆ ಕತೆ ಕಟ್ತಾರೆ ಆಕೆಗೆ ಈಗ ಸಿನಿಮಾ, ಶಿಕ್ಷಣದ ಬಗ್ಗೆಯಷ್ಟೇ ಏಕಾಗ್ರತೆ ಇದೆ ಎಂದ ಸ್ವರ್ಣಲತಾ
Tilak Varma Sreeleela Dating Rumours: ಕಳೆದ ಕೆಲವು ದಿನಗಳಿಂದ ದಕ್ಷಿಣ ಭಾರತದ ಚಿತ್ರರಂಗದ ಜನಪ್ರಿಯ ಮತ್ತು ಬ್ಯುಸಿ ನಟಿಯರಲ್ಲಿ ಒಬ್ಬರಾದ ಶ್ರೀಲೀಲಾ ಹಾಗೂ ಭಾರತೀಯ ಯುವ ಕ್ರಿಕೆಟರ್ ತಿಲಕ್ ವರ್ಮಾ ಪ್ರೀತಿಯಲ್ಲಿದ್ದಾರೆ ಎಂಬ ವದಂತಿಗಳು ಕಳೆದ ಕೆಲವು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡುತ್ತಿದ್ದವು. ಸದ್ಯ ಈ ಎಲ್ಲಾ ಡೇಟಿಂಗ್ ಗಾಸಿಪ್‌ಗಳಿಗೆ ನಟಿಯ ತಾಯಿ ಸ್ವರ್ಣಲತಾ ಅವರು ತೆರೆ ಎಳೆದಿದ್ದು, ಈ ವರದಿಗಳಿಗೆ ಆಧಾರವಿಲ್ಲ ಎಂದು ತಳ್ಳಿಹಾಕಿದ್ದಾರೆ.
'ಶ್ರೀಲೀಲಾ ಮತ್ತು ಕ್ರಿಕೆಟಿಗ ತಿಲಕ್ ವರ್ಮಾ ಡೇಟಿಂಗ್ನಲ್ಲಿದ್ದಾರೆ ಎನ್ನುವ ವಿಚಾರವೆಲ್ಲ ಸುಳ್ಳು. ಇದು ಸತ್ಯಕ್ಕೆ ದೂರವಾದ ಮಾತು. ಇಂತಹ ಕಟ್ಟುಕತೆಗಳು ಹೇಗೆ ಹುಟ್ಟುಕೊಳ್ಳುತ್ತವೆ ಎನ್ನುವುದು ನನಗೆ ತಿಳಿದಿಲ್ಲ. ಇವೆಲ್ಲವೂ ಕೇವಲ ಆಧಾರರಹಿತ ವದಂತಿಗಳಾಗಿವೆ. ಇಬ್ಬರಿಗೂ ವೈಯಕ್ತಿಕವಾಗಿ ಪರಿಚಯಾನೇ ಇಲ್ಲ' ಎಂದು ಮಾಧ್ಯಮವೊಂದರ ಜೊತೆ ಮಾತನಾಡಿ ಸ್ಪಷ್ಟನೆ ಕೊಟ್ಟಿದ್ದಾರೆ.
ಒಬ್ಬರಿಗೊಬ್ಬರು ವೈಯಕ್ತಿಕವಾಗಿ ಪರಿಚಯವಿಲ್ಲ
'ತಿಲಕ್ ವರ್ಮಾ ಮತ್ತು ಶ್ರೀ ಲೀಲಾ ಎಂದಿಗೂ ಒಬ್ಬರಿಗೊಬ್ಬರು ಮಾತನಾಡಿಕೊಂಡಿಲ್ಲ. ವೈಯಕ್ತಿಕವಾಗಿ ಪರಿಚಯವೇ ಇಲ್ಲ. ಒಬ್ಬರಿಗೊಬ್ಬರು ಭೇಟಿಯಾಗಿಲ್ಲ. ಯಾವುದೇ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿಲ್ಲ. ಹೀಗಿದ್ದ ಮೇಲೆ ಇಂತಹ ಕತೆ ಹುಟ್ಟಿಕೊಳ್ಳೊದು ಹೇಗೆ. ಇದೆಲ್ಲವು ಕಲ್ಪನೆ ಮಾತ್ರ' ಎಂದು ಕಿಡಿಕಾರಿದ್ದಾರೆ.
ಒಂದೇ ಸರಿ ಎರಡು ಕುಟುಂಬಸ್ಥರ ಭೇಟಿ
ಡಿಸೆಂಬರ್ 2025ರಂದು ವೈಕುಂಠ ಏಕಾದಶಿ ಹಬ್ಬದಂದು ಶ್ರೀಲೀಲಾ ತನ್ನ ತಾಯಿಯೊಂದಿಗೆ ವೆಂಕಟೇಶ್ವರ ದಗುಲಕ್ಕೆ ತೆರಳಿದ್ದರು ಇದೇ ವೇಳೆ ತಿಲಕ್ ಅವರು ತಮ್ಮ ಕುಟುಂಬದೊಂದಿಗೆ ದೇವರ ದರ್ಶನ ಪಡೆದುಕೊಂಡಿದ್ದರು. ಇಷ್ಟೇ ಅಲ್ಲದೇ, ವಾಖೆಂಡೆ ಕ್ರೀಡಾಂಗಣದಲ್ಲಿ ಟಿ20 ವಿಶ್ವಕಪ್ ಪಂದ್ಯ ವೀಕ್ಷಿಸಲು ಶ್ರೀಲೀಲಾ ಭೇಟಿ ಕೊಟ್ಟಿದ್ದರು. ಜೊತೆಗೆ ಜರ್ಸಿ ತೊಟ್ಟಿರುವುದು ಕಂಡು ಬಂದಿತ್ತು. ಈ ಬಗ್ಗೆ ಉಲ್ಲೇಖಿಸಿ ಪ್ರಶ್ನಿಸಿದಾಗ ಅವರು ಹೇಳಿದ್ದು ಹೀಗೆ, 'ಇದೆಲ್ಲ ಕಾಕತಾಳೀಯವಷ್ಟೇ, ಬದಲಾಗಿ ಇನ್ನೇನು ಇಲ್ಲ. ಸೋಶಿಯಲ್ ಮೀಡಿಯಾದಲ್ಲಿ ಸಂಬಂಧವಿಲ್ಲದ ಘಟನೆಗಳನ್ನು ಒಟ್ಟುಗೂಡಿಸಿ ಕತೆ ಸೃಷ್ಟಿಸಲಾಗುತ್ತಿದೆ. ಇದು ಅನ್ಯಾಯ' ಎಂದು ಹೇಳಿದ್ದಾರೆ.
ಓದು, ವೃತ್ತಿ ಇಷ್ಟೇ ಆಕೆಯ ಗುರಿ
ಶ್ರೀ ಲೀಲಾ ಸದ್ಯ ಜೂನ್ನಲ್ಲಿ ನಿಗದಿಯಾಗಿರುವ ನೀಟ್ ಪಿಜಿ ಪರೀಕ್ಷೆಗೆ ತಯಾರಿ ಮಾಡಿಕೊಳ್ಳುತ್ತಿದ್ದಾರೆ. 'ಆಕೆಯ ಗಮನ ಸದ್ಯ ಓದಿನ ಮೇಲಿದೆ. ಇದಾದ ನಂತರ ಸಿನಿಮಾಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಾರೆ. ಅಂತಹ ವೈಯಕ್ತಿಕ ವಿಚಾರಕ್ಕೆ ಆಕೆಗಿನ್ನು ಆರರಿಂದ -ಐದು ವರ್ಷ ಸಮಯವಿದೆ. ಆಕೆ ವೃತ್ತಿ ಮತ್ತು ಶಿಕ್ಷಣ ಜೀವನವನ್ನು ಸರಿದೂಗಿಸಿಕೊಳ್ಳುತ್ತಿದ್ದಾಳೆ. ಪ್ರೀತಿ ಪ್ರೇಮ ವಿಚಾರ ಸದ್ಯ ಆಕೆಯ ತಲೆಯಲ್ಲಿಲ್ಲ' ಎಂದು ಸ್ಪಷ್ಟನೆ ಕೊಟ್ಟರು, (ಏಜೆನ್ಸೀಸ್).