Anushka Sharma dance 
ಕ್ರಿಕೆಟ್

ವಿರಾಟ್​ ಹೊಡೆದ ಸಿಕ್ಸ್​ಗೆ ಅನುಷ್ಕಾ ಶರ್ಮಾ ಕ್ಲೀನ್​ ಬೋಲ್ಡ್​; ಗ್ಯಾಲರಿಯಲ್ಲೇ ಕುಣಿದ ವಿಡಿಯೋ ವೈರಲ್..Anushka Sharma

ಪ್ರಮುಖ ಮುಖ್ಯಾಂಶಗಳು

  • ವಿರಾಟ್​ ಸಿಕ್ಸ್ ಹೊಡೆದದ್ದಕ್ಕೆ ಗ್ಯಾಲರಿಯಲ್ಲಿ ಡ್ಯಾನ್ಸ್ ಮಾಡಿದ ನಟಿ ಅನುಷ್ಕಾ ಶರ್ಮಾ
  • ಕ್ಯೂಟ್​ನೆಸ್ ಲೋಡೆಡ್ ವಿಡಿಯೋ ನೋಡೋಕೆ ಇಂಟರ್ನೆಟ್​ಗೆ ಹಣ ಕೊಟ್ಟಿದ್ದಕೂ ಸಾರ್ಥಕ ಎಂದ ನೆಟ್ಟಿಗರು
  • ಇಬ್ಬರ ಹೊಂದಾಣಿಕೆ ಬಗ್ಗೆ ಕೊಂಡಾಡಿದ ಫ್ಯಾನ್ಸ್
Anushka Sharma Dance: ಶುಕ್ರವಾರ ಗುಜರಾತ್​ ಟೈಟನ್ಸ್​ ವಿರುದ್ಧ ರಾಯಲ್​ ಚಾಲೆಂಜರ್ಸ್​ ಬೆಂಗಳೂರು 20 ಓವರ್​ಗಳಲ್ಲಿ ಮೂರು ವಿಕೆಟ್​ ಕಳೆದುಕೊಂಡು 205 ರನ್​​ ಗಳಿಸಿತ್ತು. ಈ ಗುರಿಯನ್ನು ಆರ್​ಸಿಬಿ 18.5 ಓವರ್​ಗಳಲ್ಲಿ 206 ರನ್​ ಗಳಿಸಿ ಭರ್ಜರಿ ಜಯ ಸಾಧಿಸಿತ್ತು. ಈ ಮಧ್ಯೆ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಎಲ್ಲ ಕ್ರಿಕೆಟ್​ ಅಭಿಮಾನಿಗಳ ಕಣ್ಸೆಳೆಯುವಂತೆ ಮಾಡಿದ್ದು.. ಅನುಷ್ಕಾ ಶರ್ಮಾರ ಡ್ಯಾನ್ಸ್.
ಹೌದು, ಒಂದು ಕಡೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಒಂದು ಕಡೆ ವಿರಾಟ್​ ಕೊಹ್ಲಿ ಮತ್ತು ದೇವದತ್​ ಪಡಿಕ್ಕಲ್​ ಬ್ಯಾಟಿಂಗ್​ಗೆ ಫ್ಯಾನ್ಸ್ ಕೇಕೆ, ಘೋಷಣೆಗಳನ್ನು ಕೂಗುತ್ತಿದ್ದರೆ, ಮತ್ತೊಂದು ಕಡೆ ಕ್ರಿಕೆಟ್​ ಪ್ರೇಮಿಗಳು ಮನಸೋತಿದ್ದು ಅನುಷ್ಕಾ ಶರ್ಮಾರ ಪಂಜಾಬಿ ಸ್ಟೈಲ್​ನ ಡ್ಯಾನ್ಸ್​ಗೆ. ಬಿಳಿ ಬಣ್ಣದ ಬಟ್ಟೆ ಧರಿಸಿದ್ದ ಅನುಷ್ಕಾ ಶರ್ಮಾ, ಅದಕ್ಕೆ ತಕ್ಕಂತೆ ಮುಖಕ್ಕೆ ಹಚ್ಚಿದ್ದ ಸಿಂಪಲ್​ ಮೇಕಪ್​​​ ಸ್ಟನ್ನಿಂಗ್ ಆಗಿತ್ತು. ಹಾಲ್ಗೆನ್ನೆಯ ಹೊಳಪು..ನಕ್ಕಾಗ ವಜ್ರದಂತೆ ಅಳೆಯುವ ಹಲ್ಲು ಕಣ್​ ಮಿಟುಕಿಸದೆ ನೋಡುವಂತೆ ಮಾಡಿತ್ತು.
ಗುಜರಾತ್​ ವಿರುದ್ಧ ಆರ್​ಸಿಬಿಗೆ ಜಯ
ಗುಜರಾತ್​ ಟೈಟನ್ಸ್​ ವಿರುದ್ಧ ಪಂದ್ಯದಲ್ಲಿ ವಿರಾಟ್​ ಕೊಹ್ಲಿ ಬ್ಯಾಟಿಂಗ್ ಮಾಡುವಾಗ 44 ಎಸೆತದಲ್ಲಿ 81 ರನ್​ ಗಳಿಸಿರು. ಆರಂಭಿಕವಾಗಿ ಬ್ಯಾಟಿಂಗ್​ಗೆ ಹಿನ್ನಡೆ ಕಂಡರು, ಜಾಕೋಬ್​ ಬೆಥಲ್​ ವಿಕೆಟ್ ನಂತರ ಬಂದ ದೇವದತ್​ ಪಡಿಕ್ಕಲ್​​​ರಿಂದ ಆಟದ ವೇಗ ಬದಲಾಯಿತು. ಈ ಜೋಡಿಯಿಂದ ಸ್ಕೋರ್​ ಹೆಚ್ಚಾಯಿತು.
ಈ ಮಧ್ಯೆ ಕೊಹ್ಲಿ ಒಂದು ಎಸೆತವನ್ನು ಸದುಪಯೋಗಪಡಿಸಿಕೊಂಡು, ಸಿಕ್ಸರ್‌ ಹೊಡೆದರು. ತಕ್ಷಣವೇ ಫ್ಯಾನ್ಸ್ ಘೋಷಣೆ ಕೂಗಿದರು. ಜೊತೆಗೆ ಗ್ಯಾಲರಿಯಲ್ಲಿದ್ದ ಅನುಷ್ಕಾ ಶರ್ಮಾ ಅವರು ತಾವು ಕುಳಿತಿದ್ದ ಸ್ಥಳದಿಂದಲೇ ಎದ್ದು ನಿಲ್ಲದೇನೆ ಖುಷಿಯಿಂದ ಡ್ಯಾನ್ಸ್​ ಮಾಡಿರುವ ವಿಡಿಯೋಗಳು ಎಕ್ಸ್​ನಲ್ಲಿ ಸದ್ದು ಮಾಡುತ್ತಿದೆ. ಪತಿಯ ಯಶಸ್ಸು ಕಾಣುತ್ತ ಸಂತೋಷ ವ್ಯಕ್ತಪಡಿಸಿದ ಅವರ ಈ ಪ್ರತಿಕ್ರಿಯೆ ಸದ್ಯ ಆರ್​ಸಿಬಿ ಮತ್ತು ಕೊಹ್ಲಿ ಫ್ಯಾನ್ಸ್ ನಿದ್ದೆಗೆಡಿಸಿದೆ

ನೆಟ್ಟಿಗರು ಏನಂದ್ರು?

ಆರ್​ಸಿಬಿ ಮ್ಯಾಚ್​ ನೋಡುವಾಗ ಅನುಷ್ಕಾ ಶರ್ಮಾರ ರಿಯಾಕ್ಷನ್ ನೋಡುತ್ತಿದ್ದರೆ ಎಂಥಾ ಆನಂದ ಗೊತ್ತಾ?. ಇಂತಹ ವಿಡಿಯೋ ನೋಡಿದರೆ, ಇಂಟರ್​ನೆಟ್ ಬಿಲ್ ಕಟ್ಟಿದ್ದಕ್ಕೂ ಸಾರ್ಥಕ ಎಂದೆನಿಸುತ್ತದೆ ಎಂದು ಬರೆದುಕೊಂಡಿದ್ದಾರೆ. ಮತ್ತೊಬ್ಬರು ಅವರಿಬ್ಬರ ಜೋಡಿಯೇ ಚೆಂದ. ಸದಾ ಅವರು ವಿರಾಟ್​​​ ಬೆನ್ನೆಲುಬಾಗಿ ನಿಂತಿರುತ್ತಾರೆ ಎಂದಿದ್ದಾರೆ.
ಅನುಷ್ಕಾ ಮತ್ತು ವಿರಾಟ್ ಮದುವೆ ಹೀಗಿತ್ತು
ವಿರಾಟ್​ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಅವರು 2013ರಲ್ಲಿ ಪರಿಚಯವಾದರು. ಒಂದು ಶಾಂಪು ಜಾಹೀರಾತಿನಲ್ಲಿ ಭೇಟಿಯಾದ ಅವರು ಪ್ರೀತಿಸಲು ಶುರುಮಾಡಿದರು. ಆಗಾಗ ಇಬ್ಬರ ಬಗ್ಗೆ ಗಾಸ್ಇಪ್ಸ್​ ಕೇಳಿ ಬಂದಿತ್ತು. ಮೊದಲ ನಾಲ್ಕು ವರ್ಷಗಳ ಕಾಲ ಡೇಟಿಂಗ್ ಮಾಡಿದ ಅವರು, 2017 ಡಿಸೆಂಬರ್ 11ರಂದು ಅಧಿಕೃತವಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಇಟಲಿಯ ಟಸ್ಕನಿಯಲ್ಲಿರುವ ಬೊರ್ಗೊ ಫಿನೋಚಿಯೆಟೊ ವಿಲ್ಲಾದಲ್ಲಿ ವಿವಾಹವಾದರು,(ಏಜೆನ್ಸೀಸ್).