ಡ್ಯಾರಿಲ್ ಮಿಚೆಲ್ ಎಂಗೇಜ್​ಮೆಂಟ್​ ರಿಂಗ್​ ಕದ್ದ ಪಾಕಿಗಳು! ಕಿವೀಸ್​ ಆಟಗಾರ ಹೇಳಿದ್ದೇನು? ಅಷ್ಟಕ್ಕೂ ಇದು ನಿಜವೇ? Daryl Mitchell 
ಕ್ರಿಕೆಟ್

ಡ್ಯಾರಿಲ್ ಮಿಚೆಲ್ ಎಂಗೇಜ್​ಮೆಂಟ್​ ರಿಂಗ್​ ಕದ್ದ ಪಾಕಿಗಳು! ಕಿವೀಸ್​ ಆಟಗಾರ ಹೇಳಿದ್ದೇನು? ಅಷ್ಟಕ್ಕೂ ಇದು ನಿಜವೇ? Daryl Mitchell

ಪ್ರಮುಖ ಮುಖ್ಯಾಂಶಗಳು

  • ಪಾಕ್ ಅಭಿಮಾನಿಗಳು ಡ್ಯಾರಿಲ್ ಮಿಚೆಲ್ ಅವರ ನಿಶ್ಚಿತಾರ್ಥದ ಉಂಗುರ ಕದ್ದಿದ್ದಾರೆಂಬ ಸುದ್ದಿ ವೈರಲ್​
  • ಹಸ್ತಲಾಘವ ಮಾಡುವಾಗ ಉಂಗುರ ಕಳುವಾಗಿದೆ ಎಂಬ ಪೋಸ್ಟ್ ಸಂಪೂರ್ಣ ಸುಳ್ಳು ಎಂದ ಎಐ ಗ್ರೋಕ್
  • ಕಳುವಾಗಿರುವುದು ಉಂಗುರವಲ್ಲ, ಬದಲಾಗಿ ಲಾಹೋರ್‌ನಲ್ಲಿ ಮಿಚೆಲ್ ಅವರ 1.2 ಕೋಟಿ ರೂ. ಮೌಲ್ಯದ ಗಡಿಯಾರ ಕಳುವು
  • ಗಡಿಯಾರ ಕಳ್ಳತನಕ್ಕೆ ಸಂಬಂಧಿಸಿದಂತೆ ಪೊಲೀಸರು ಈಗಾಗಲೇ ಶಂಕಿತರನ್ನು ಬಂಧಿಸಿದ್ದಾರೆ
Daryl Mitchell : ಪಾಕಿಸ್ತಾನ ಸೂಪರ್ ಲೀಗ್ - 2026ರ ಟೂರ್ನಮೆಂಟ್ ಆರಂಭವಾದಾಗಿನಿಂದ, ಸಾಕಷ್ಟು ವಿವಾದಗಳು ಮುನ್ನೆಲೆಗೆ ಬರುತ್ತಿವೆ. ನಸೀಮ್ ಶಾ ಅವರ ವಿವಾದಾತ್ಮಕ ಪೋಸ್ಟ್‌ನಿಂದ ಹಿಡಿದು ಡೇವಿಡ್ ವಾರ್ನರ್ ಅವರ ಡ್ರಂಕ್ ಅಂಡ್ ಡ್ರೈವ್ ಪ್ರಕರಣದವರೆಗೆ ಅನೇಕ ವಿವಾದಗಳು ಬೆಳಕಿಗೆ ಬಂದಿವೆ. ಇದೀಗ ಮತ್ತೊಂದು ವಿವಾದ ಪಿಎಸ್​ಎಲ್​ ಸುತ್ತ ಸುತ್ತಿಕೊಂಡಿದೆ. ಅದೇನೆಂದರೆ, ನ್ಯೂಜಿಲೆಂಡ್​ ಆಟಗಾರ ಡ್ಯಾರಿಲ್ ಮಿಚೆಲ್ ಅವರ ನಿಶ್ಚಿತಾರ್ಥದ ಉಂಗುರವನ್ನು ಪಾಕಿಸ್ತಾನದ ಕ್ರೀಡಾಭಿಮಾನಿಗಳು ಕದ್ದಿದ್ದಾರೆ ಎಂಬ ಸುದ್ದಿ ಜಾಲತಾಣದಲ್ಲಿ ಹರಿದಾಡುತ್ತಿದೆ.
ಸ್ವತಃ ಡ್ಯಾರಿಲ್ ಮಿಚೆಲ್ ಅವರೇ ಮಾಧ್ಯಮಗೋಷ್ಠಿಯಲ್ಲಿ ಇದನ್ನು ಬಹಿರಂಗಪಡಿಸಿದ್ದಾರೆ ಎಂಬ ಎಕ್ಸ್​ ಪೋಸ್ಟ್​ ಒಂದು ವೈರಲ್​ ಆಗುತ್ತಿದೆ. ಆದರೆ, ಈ ಬಗ್ಗೆ ಅಧಿಕೃತ ಹೇಳಿಕೆಯಾಗಲಿ ಅಥವಾ ವರದಿಯಾಗಲಿ ಎಲ್ಲೂ ಪ್ರಕಟವಾಗಿಲ್ಲ. ಜಾಲತಾಣದಲ್ಲಿ ಮಾತ್ರ ಈ ಸುದ್ದಿ ಭಾರಿ ಸಂಚಲನ ಮೂಡಿಸುತ್ತಿದ್ದು, ಪಾಕ್​ ಕ್ರೀಡಾಭಿಮಾನಿಗಳ ವಿರುದ್ಧ ಜಾಲತಾಣದಲ್ಲಿ ಆಕ್ರೋಶ ಸುರಿಮಳೆಯಾಗುತ್ತಿದೆ.
ಪಿಎಸ್ಎಲ್ 2026ರ ಟೂರ್ನಮೆಂಟ್‌ನಲ್ಲಿ ಮಿಚೆಲ್​ ರಾವಲ್ಪಿಂಡಿ ಪರ ಆಡುತ್ತಿದ್ದಾರೆ. ಕ್ವೆಟ್ಟಾ ಗ್ಲಾಡಿಯೇಟರ್ಸ್ ಮತ್ತು ರಾವಲ್ಪಿಂಡಿ ತಂಡಗಳ ನಡುವಿನ ಪಂದ್ಯವು ಏಪ್ರಿಲ್ 10 ರಂದು ಕರಾಚಿಯ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯಿತು. ಕ್ವೆಟ್ಟಾ ಗ್ಲಾಡಿಯೇಟರ್ಸ್ 61 ರನ್‌ಗಳಿಂದ ಗೆದ್ದಿತು. ಆದಾಗ್ಯೂ, ರಾವಲ್ಪಿಂಡಿ ತಂಡಕ್ಕಾಗಿ ಆಡುತ್ತಿರುವ ಡ್ಯಾರಿಲ್ ಮಿಚೆಲ್ ಪಂದ್ಯದ ನಂತರ ತಮ್ಮ ಹೋಟೆಲ್ ಕೋಣೆಗೆ ತೆರಳಿದರು.
ಈ ವೇಳೆ ಕ್ರೀಡಾಂಗಣದ ಹೊರಗೆ ಕೆಲವು ಅಭಿಮಾನಿಗಳು ಮಿಚೆಲ್​ ಬಳಿ ಬಂದು ಕೈಕುಲುಕುತ್ತಿದ್ದರು. ಈ ಸಂದರ್ಭದಲ್ಲಿ ಪಾಕಿಸ್ತಾನ ಅಭಿಮಾನಿಗಳು ಡ್ಯಾರಿಲ್ ಮಿಚೆಲ್ ಅವರ ಉಂಗುರವನ್ನು ಕದ್ದಿದ್ದಾರೆಂದು ಎಂಬ ಆರೋಪ ಮಾಡಲಾಗಿದೆ. ಹಸ್ತಲಾಘವ ಮಾಡುತ್ತಿದ್ದಾಗ, ಅಪರಿಚಿತ ವ್ಯಕ್ತಿಯೊಬ್ಬರು ನನ್ನ ಉಂಗುರವನ್ನು ಕದ್ದಿದ್ದಾರೆ ಎಂದು ಮಿಚೆಲ್​ ಆರೋಪಿಸಿದ್ದಾರೆ ಎನ್ನಲಾದ ಎಕ್ಸ್​ ಪೋಸ್ಟ್​ ಒಂದು ವೈರಲ್​ ಆಗಿದೆ. ಅದು ಅವರ ನಿಶ್ಚಿತಾರ್ಥದ ಉಂಗುರವಂತೆ.
ಸದ್ಯ ಈ ಘಟನೆಗೆ ಸಂಬಂಧಿಸಿದ ಸುದ್ದಿ ವೈರಲ್ ಆಗುತ್ತಿದ್ದು, ಕ್ರಿಕೆಟ್ ಅಭಿಮಾನಿಗಳು ಈ ಬಗ್ಗೆ ವಾದ-ಪ್ರತಿವಾದಗಳನ್ನು ಮಾಡುತ್ತಿದ್ದಾರೆ. ಪಾಕಿಸ್ತಾನ ಕ್ರಿಕೆಟ್ ಅಭಿಮಾನಿಗಳು ಅಷ್ಟು ಕೀಳಾಗಿ ವರ್ತಿಸಿದ್ದಾರೆಯೇ? ಅವರು ವಿದೇಶಿ ಕ್ರಿಕೆಟಿಗರನ್ನು ಈ ರೀತಿ ನಡೆಸಿಕೊಳ್ಳುತ್ತಾರೆಯೇ? ಪಾಕಿಸ್ತಾನ ಕಳ್ಳರಿಂದ ತುಂಬಿ ಹೋಗಿದೆ ಎಂದೆಲ್ಲ ಆಕ್ರೋಶಗಳ ಸುರಿಮಳೆಯಾಗುತ್ತಿದೆ. ಆದರೆ, ಇನ್ನು ಕೆಲವರು ಈ ಸುದ್ದಿ ಅಸಲಿಯತ್ತಿನ ಕಡೆ ಗಮನ ಹರಿಸಿದ್ದಾರೆ.

ಗ್ರೊಕ್​ ಕೊಟ್ಟ ಸ್ಪಷ್ಟನೆ ಏನು?

ವೈರಲ್​ ಆಗುತ್ತಿರುವ ಎಕ್ಸ್​ ಪೋಸ್ಟ್​ ನಿಜವೇ? ಈ ಬಗ್ಗೆ ಮಾಹಿತಿ ಕೊಡಿ ಎಂದು ಎಕ್ಸ್​ ಬಳಕೆದಾರರೊಬ್ಬರು ಪ್ರಶ್ನೆ ಮಾಡಿದರು. ಇದಕ್ಕೆ ಉತ್ತರ ನೀಡಿರುವ ಎಐ ಗ್ರೋಕ್, ಇಲ್ಲ, ಇದು ನಿಜವಲ್ಲ. ವೈರಲ್ ಆಗಿರುವ ಈ ಹಕ್ಕು ಇತ್ತೀಚಿನ ನಿಜವಾದ ಪಿಎಸ್​ಎಲ್​ ಘಟನೆಯನ್ನು ತಿರುಚುತ್ತದೆ. ಡ್ಯಾರಿಲ್ ಮಿಚೆಲ್ ಅವರ ದುಬಾರಿ ಗಡಿಯಾರ (1.2 ಕೋಟಿ ರೂ. ಮೌಲ್ಯ) ಲಾಹೋರ್‌ನಲ್ಲಿ ಕಳುವಾಗಿದೆ ಎಂದು ವರದಿಯಾಗಿದೆ ಮತ್ತು ಪೊಲೀಸರು ಶಂಕಿತರನ್ನು ಬಂಧಿಸಿದ್ದಾರೆ. ಯಾವುದೇ ಹ್ಯಾಂಡ್‌ಶೇಕ್ ಅಥವಾ ಪತ್ರಿಕಾಗೋಷ್ಠಿಯ ಸಮಯದಲ್ಲಿ ಮದುವೆಯ ಉಂಗುರವನ್ನು ಕಸಿದುಕೊಂಡಿರುವುದಕ್ಕೆ ಯಾವುದೇ ಪುರಾವೆಗಳಿಲ್ಲ. ಇದು ತಪ್ಪು ಮಾಹಿತಿ ಎಂದು ಹೇಳಿದೆ. ಅಲ್ಲಿಗೆ, ಸದ್ಯ ಜಾಲತಾಣದಲ್ಲಿ ವೈರಲ್​ ಆಗುತ್ತಿರುವ ಪೋಸ್ಟ್​ ಸುಳ್ಳು ಎಂದು ಬಯಲಾಗಿದೆ, (ಏಜೆನ್ಸೀಸ್​).