ಮಹಿಳಾ ಟಿ20 ವಿಶ್ವಕಪ್: ದಕ್ಷಿಣ ಆಫ್ರಿಕಾ ಎದುರು ಭಾರತಕ್ಕೆ ಸೋಲು, ಸೆಮೀಸ್ಗೆ ಆಸೆಗೆ ಪೆಟ್ಟು
ಮ್ಯಾಂಚೆಸ್ಟರ್: ಮಾರಿಜಾನ್ ಕಾಪ್ (81*ರನ್, 45 ಎಸೆತ, 7 ಬೌಂಡರಿ, 4 ಸಿಕ್ಸರ್, 27ಕ್ಕೆ 2 ವಿಕೆಟ್) ಆಲ್ರೌಂಡ್ ಆಟದ ಎದುರು ಮಂಕಾದ ಭಾರತ ತಂಡ ಮಹಿಳಾ ಟಿ20 ವಿಶ್ವಕಪ್ (Women''s T20 World Cup) ಟೂರ್ನಿಯ ತನ್ನ 3ನೇ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 6 ವಿಕೆಟ್ಗಳಿಂದ ಪರಾಭವಗೊಂಡಿದೆ. ಟೂರ್ನಿಯಲ್ಲಿ ಸತತ 2 ಗೆಲುವಿನ ಬಳಿಕ ಮೊದಲ ಸೋಲು ಎದುರಿಸಿರುವ ಭಾರತ ತಂಡ ಸೆಮಿಫೈನಲ್ ರೇಸ್ನಲ್ಲಿ ತುಸು ಹಿನ್ನಡೆ ಅನುಭವಿಸಿದ್ದರೆ, ಆಸೀಸ್ ವಿರುದ್ಧದ ಸೋಲಿನೊಂದಿಗೆ ಅಭಿಯಾನ ಆರಂಭಿಸಿದ್ದ ದಕ್ಷಿಣ ಆಫ್ರಿಕಾ ಸತತ 2ನೇ ಗೆಲುವು ಸಾಧಿಸಿದೆ.
ಓಲ್ಡ್ ಟ್ರಾರ್ಡ್ ಸ್ಟೇಡಿಯಂನಲ್ಲಿ ಭಾನುವಾರ ನಡೆದ ತನ್ನ 3ನೇ ಲೀಗ್ ಪಂದ್ಯದಲ್ಲಿ ಭಾರತ ತಂಡ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡಿತು. ಸಾಧಾರಣ ಆರಂಭ ಪಡೆದ ಭಾರತ ತಂಡ ಶೆಫಾಲಿ ವರ್ಮ (31 ರನ್, 15 ಎಸೆತ, 4 ಬೌಂಡರಿ, 1 ಸಿಕ್ಸರ್), ನಾಯಕಿ ಹರ್ಮಾನ್ಪ್ರೀತ್ ಕೌರ್ (24 ರನ್, 22 ಎಸೆತ, 2 ಬೌಂಡರ) ಮತ್ತು ದೀಪ್ತಿ ಶರ್ಮ (29 ರನ್, 21 ಎಸೆತ, 3 ಬೌಂಡರಿ) ಉಪಯುಕ್ತ ಕೊಡುಗೆಯ ಬಲದಿಂದ 7 ವಿಕೆಟ್ಗೆ 158 ರನ್ ಕಲೆಹಾಕಿತು. ಪ್ರತಿಯಾಗಿ ದ. ಆಫ್ರಿಕಾ ತಂಡ ಆರಂಭಿಕ ಆಘಾತ ಎದುರಿಸಿದರೂ, ಕಾಪ್ ದಿಟ್ಟ ಹೋರಾಟದಿಂದ 19.1 ಓವರ್ಗಳಲ್ಲಿ 4 ವಿಕೆಟ್ಗೆ 161 ರನ್ ಗಳಿಸಿ ಜಯಿಸಿತು. ಕಾಪ್ ಮತ್ತು ತಜ್ಮಿನ್ ಬ್ರಿಟ್ಸ್ (40) 3ನೇ ವಿಕೆಟ್ಗೆ 63 ಎಸೆತಗಳಲ್ಲಿ 97 ರನ್ ಸೇರಿಸಿ ಭಾರತದ ಗೆಲುವಿಗೆ ಅಡ್ಡಿಯಾದರು.
ಸಂಟಿತ ಬ್ಯಾಟಿಂಗ್: ಉಪನಾಯಕಿ ಸ್ಮೃತಿ ಮಂದನಾ (17) ಮೊದಲ ವಿಕೆಟ್ಗೆ ಶೆಾಲಿ ಜತೆ 3 ಓವರ್ಗಳಲ್ಲಿ 30 ರನ್ ಸೇರಿಸಿ ಬೇರ್ಪಟ್ಟರು. ಶೆಫಾಲಿ ನಂತರವೂ ಬಿರುಸಿನ ಆಟ ಮುಂದುವರಿಸಿ ಭಾರತ ಪವರ್ಪ್ಲೇನಲ್ಲಿ 59 ರನ್ ಗಳಿಸಲು ನೆರವಾದರು. ಜೆಮೀಮಾ ರೋಡ್ರಿಗಸ್ (12) ಈ ಸಲವೂ ರನ್ಬರ ಮುಂದುವರಿಸಿದರು. ಬಳಿಕ ಹರ್ಮಾನ್&ದೀಪ್ತಿ 33 ರನ್ ಸೇರಿಸಿ ಬಲ ತುಂಬಿದರು. ಭಾರತ ಕೊನೇ 5 ಓವರ್ಗಳಲ್ಲಿ 42 ರನ್ ಕಲೆಹಾಕಿ 150ರ ಗಡಿ ದಾಟುವಲ್ಲಿ ಯಶಸ್ವಿಯಾಯಿತು.
ಭಾರತ: 7 ವಿಕೆಟ್ಗೆ 158 (ಸ್ಮೃತಿ 17, ಶೆಫಾಲಿ 31, ಯಸ್ತಿಕಾ 15, ಜೆಮೀಮಾ 12, ಹರ್ಮಾನ್ಪ್ರೀತ್ 24, ದೀಪ್ತಿ 29, ರಿಚಾ 15, ಅರುಂಧತಿ 6*, ಮಾರಿಜಾನ್ ಕಾಪ್ 27ಕ್ಕೆ 2, ಶಬ್ನಿಮ್ ಇಸ್ಮಾಯಿಲ್ 28ಕ್ಕೆ 2, ಡಿಕ್ಲರ್ಕ್ 16ಕ್ಕೆ 1, ಖಾಕ 31ಕ್ಕೆ 1). ದ. ಆಫ್ರಿಕಾ: 19.1 ಓವರ್ಗಳಲ್ಲಿ 4 ವಿಕೆಟ್ಗೆ 161 (ವೊಲ್ವಾರ್ಡ್ 20, ಬ್ರಿಟ್ಸ್ 40, ಕಾಪ್ 81*, ಡಿಕ್ಲರ್ಕ್ 5, ಟ್ರಯಾನ್ 10*, ಶ್ರೀಚರಣಿ 24ಕ್ಕೆ 3, ಶೆಾಲಿ 22ಕ್ಕೆ 1).
ಭಾರತ ತಂಡದ ನಾಯಕಿ ಹರ್ಮಾನ್ಪ್ರೀತ್ ಕೌರ್ ಪುರುಷ&ಮಹಿಳಾ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ನಲ್ಲಿ 200 ಪಂದ್ಯ ಆಡಿದ ಮೊದಲ ಕ್ರಿಕೆಟರ್ ಎನಿಸಿದರು. ಅವರು 2009ರಲ್ಲಿ ಮೊದಲ ಟಿ20 ಪಂದ್ಯ ಆಡಿದ್ದರು. 200ನೇ ಪಂದ್ಯದ ಸ್ಮರಣಾರ್ಥ ಪಂದ್ಯಕ್ಕೆ ಮುನ್ನ ಹರ್ಮಾನ್ಪ್ರೀತ್ಗೆ "200' ಸಂಖ್ಯೆಯ ವಿಶೇಷ ಜೆರ್ಸಿ ವಿತರಿಸಲಾಯಿತು. ನ್ಯೂಜಿಲೆಂಡ್ನ ಸುಜಿ ಬೇಟ್ಸ್ 184 ಪಂದ್ಯ ಆಡಿರುವುದು ನಂತರದ ಗರಿಷ್ಠವಾಗಿದೆ. ಪುರುಷರಲ್ಲಿ ಐರ್ಲೆಂಡ್ನ ಪೌಲ್ ಸ್ಟಿರ್ಲಿಂಗ್ ಸರ್ವಾಧಿಕ 163 ಟಿ20 ಪಂದ್ಯ ಆಡಿದ್ದಾರೆ.
ಇಂಗ್ಲೆಂಡ್, ವಿಂಡೀಸ್ಗೆ ಸತತ ಮೂರನೇ ಗೆಲುವು
ಆತಿಥೇಯ ಇಂಗ್ಲೆಂಡ್ ಮತ್ತು ವೆಸ್ಟ್ ಇಂಡೀಸ್ ತಂಡಗಳು ಟೂರ್ನಿಯ ಗ್ರೂಪ್&2ರಲ್ಲಿ ಸತತ 3 ಗೆಲುವಿನ ಸಾಧನೆ ಮಾಡಿವೆ. ಇಂಗ್ಲೆಂಡ್ ತಂಡ ಲೀಡ್ಸ್ನಲ್ಲಿ ಶನಿವಾರ ರಾತ್ರಿ ನಡೆದ ಪಂದ್ಯದಲ್ಲಿ ಸ್ಕಾಟ್ಲೆಂಡ್ ವಿರುದ್ಧ 38 ರನ್ಗಳಿಂದ ಗೆದ್ದರೆ, ವೆಸ್ಟ್ ಇಂಡೀಸ್ ತಂಡ ಭಾನುವಾರದ ಮೊದಲ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ 5 ವಿಕೆಟ್ಗಳಿಂದ ಜಯಿಸಿತು. ಇಂಗ್ಲೆಂಡ್&ವಿಂಡೀಸ್ ಮುಂದಿನ ಪಂದ್ಯದಲ್ಲಿ ಬುಧವಾರ ಮುಖಾಮುಖಿ ಆಗಲಿದ್ದು, ಒಂದು ತಂಡವಷ್ಟೇ ಅಜೇಯ ಓಟ ಮುಂದುವರಿಸಲಿದೆ.