ಕ್ರಿಕೆಟ್

'ಅವರಿವರ ಮಾತು ಕೇಳಿ ತಪ್ಪು ಮಾಡಿಬಿಟ್ಟೆ'; ಪೃಥ್ವಿ ಶಾ ಜೊತೆ ಮತ್ತೆ ಒಂದಾದ ನಟಿ Akriti Agarwal, ಇನ್​ಸ್ಟಾದಲ್ಲಿ ಸ್ಪಷ್ಟನೆ

  • ಬ್ರೇಕಪ್​ ಆದ 26ದಿನಕ್ಕೆ ಮತ್ತೆ ಒಂದಾದ ​ ನಟಿ ಆಕೃತಿ ಅಗರ್ವಾಲ್​, ಕ್ರಿಕೆಟ್ ಆಟಗಾರ ಪೃಥ್ವಿ ಶಾ.

  • 'ನಾವು ಮುಕ್ತವಾಗಿ ಮಾತನಾಡಿ, ಒಟ್ಟಾಗಿ ಬದುಕಲು ನಿರ್ಧರಿಸಿದ್ದೇವೆ ನಮ್ಮ ನಿರ್ಧಾರ ಗೌರವಿಸಿ.

  • ಇನ್​ಸ್ಟಾಗ್ರಾಮ್​ನಲ್ಲಿ ಪೋಸ್ಟ್​ ಹಂಚಿಕೊಂಡ ನಟಿ ಆಕೃತಿ ಅಗರ್ವಾಲ್​, ಕ್ರಿಕೆಟ್ ಆಟಗಾರ ಪೃಥ್ವಿ ಶಾ.

Akriti Agarwal Reunites With Prithvi Shaw: 'ಮತ್ತೆ ನಾವು ಒಟ್ಟಿಗೆ ಇರಲು ಬಯಸಿದ್ದೇವೆ. ಮುಕ್ತವಾಗಿ ಮಾತನಾಡಿ ಅರ್ಥ ಮಾಡಿಕೊಂಡಿದ್ದೇವೆ. ಕೆಲವರಿಂದ ತಪ್ಪು ನಿರ್ಧಾರ ತೆಗೆದುಕೊಂಡು ಬಿಟ್ಟಿದ್ದೆ' ಎಂದು ಎಂಗೇಜ್​ಮೆಂಟ್​ ಮುರಿದು ಬಿದ್ದ 26 ದಿನಗಳ ಬಳಿಕ ಇಂಡಿಯಾ ಕ್ರಿಕೆಟ್​ ಟೀಂನ ಆಟಗಾರ ಪೃಥ್ವಿ ಶಾ ಮತ್ತು ಇನ್​ಫ್ಯುಯೆನ್ಸರ್​ ನಟಿ ಆಕೃತಿ ಅಗರ್ವಾಲ್​ ಇನ್​ಸ್ಟಾಗ್ರಾಮ್​ನಲ್ಲಿ ಪೋಸ್ಟ್​ ಹಂಚಿಕೊಂಡಿದ್ದಾರೆ.

ಭಾರತದ ಸ್ಟಾರ್​ ಕ್ರಿಕೆಟಿಗ ಪೃಥ್ವಿಶಾ ಅವರು ತಮ್ಮ ಬಹುಕಾಲದ ಗೆಳತಿ, ಸಾಮಾಜಿಕ ಜಾಲತಾಣ ಇನ್​ಫ್ಯುಯೆನ್ಸರ್​, ನಟಿ ಆಕೃತಿ ಅಗರ್ವಾಲ್​ ಜೊತೆಗೆ ಮಾರ್ಚ್​.8ರಂದು ಎಂಗೇಜ್​ ಆದರು. ಸೆ.18ರಂದು ಮತ್ತೆ ಇನ್​ಸ್ಟಾಗ್ರಾಮ್​ನಲ್ಲಿ ಪೋಸ್ಟ್ ಮಾಡಿದ ಸ್ಟಾರ್​ ಜೋಡಿ, ಪರಸ್ಪರ ಒಪ್ಪಿಗೆಯಿಂದ ದೂರಾಗುತ್ತಿದ್ದೇವೆ ಎಂದು ಹೇಳಿ ಅಭಿಮಾನಿಗಳಿಗೆ ಶಾಕ್​ ಕೊಟ್ಟಿದ್ದರು. ಸದ್ಯ ಇಬ್ಬರು ಒಟ್ಟಾಗುವ ಬಗ್ಗೆ ಜಂಟಿಯಾಗಿ ಘೋಷಿಸಿದ್ದಾರೆ. ನಮ್ಮ ನಿರ್ಧಾರವನ್ನು ಗೌರವಿಸಿ ಎಂದು ಮನವಿ ಮಾಡಿಕೊಂಡಿದ್ದಾರೆ.

ಆಕೃತಿ ಬರೆದುಕೊಂಡಿರುವುದು ಏನು?

ವೈಯಕ್ತಿಕ ಸ್ಪಷ್ಟನೆ ಎಂದು ಆರಂಭಿಸಿರುವ ಆಕೃತಿ, 'ನಮ್ಮ ಸಂಬಂಧದ ಬಗ್ಗೆ ನಮಗಿಂತ ಹೆಚ್ಚು ಗೊತ್ತಿದೆ ಎಂದು ವರ್ತಿಸಿದ ನನ್ನ ಆಪ್ತರ ಅಭಿಪ್ರಾಯವನ್ನು ಪಡೆದುಕೊಂಡ ಪರಿಣಾಮ ಎಂಗೇಜ್​ಮೆಂಟ್​ ಮುರಿದುಕೊಳ್ಳುವ ನಿರ್ಧಾರಕ್ಕೆ ಕಾರಣವಾಯ್ತು. ಅವರ ಮಾತು ನಾನು ತಪ್ಪು ದಾರಿ ಹಿಡಿಯುವಂತೆ ಮಾಡಿತು ಎಂದು ನನಗೆ ಅನಿಸಿತು. ನಮ್ಮಿಬ್ಬರಿಗೂ ವೈಯಕ್ತಿಕವಾಗಿ ಕುಳಿತು ಮಾತನಾಡುವ ಅವಕಾಶವನ್ನು ನಾನು ನೀಡದೆ..ಈ ನಿರ್ಧಾರ ತೆಗೆದುಕೊಂಡುಬಿಟ್ಟೆ' ಎಂದು ಬೇಸರ ವ್ಯಕ್ತಪಡಿಸಿದರು.

'ದುಡುಕಿ ತೆಗೆದುಕೊಂಡ ನಿರ್ಧಾರದಿಂದ ಉಂಟಾದ ನೋವಿಗೆ ನಾನೇ ಸಂಪೂರ್ಣ ಹೊಣೆ. ಈಗ ನಾವಿಬ್ಬರೂ ಮುಕ್ತವಾಗಿ ಮಾತನಾಡಿ, ಒಬ್ಬರಿಗೊಬ್ಬರು ಅರ್ಥ ಮಾಡಿಕೊಂಡಿದ್ದೇವೆ. ಈಗ ಮತ್ತೆ ಜೊತೆಯಾಗಿ ಬದುಕು ಕಟ್ಟಿಕೊಳ್ಳಲು ನಿರ್ಧರಿಸಿದ್ದೇವೆ. ನಮಗೆ ನಾವಿಬ್ಬರು ಸಾಕು. ನಮ್ಮ ಸಂಬಂಧಕ್ಕೆ ಇನ್ಯಾರ ಅವಶ್ಯಕತೆ ಇಲ್ಲ' ಎಂದು ಖಡಕ್​ ಆಗಿ ಹೇಳಿದ್ದಾರೆ.

'ಮುಂದಿನ ನಮ್ಮ ಭವಿಷ್ಯವನ್ನು ನಮ್ಮಿಬ್ಬರ ತಿಳುವಳಿಕೆ, ನಂಬಿಕೆ, ಪ್ರೀತಿಯ ಆಧಾರದ ಮೇಲೆ ಕಟ್ಟಿಕೊಳ್ಳಲು ಬಯಸುತ್ತೇವೆ. ನಾವು ಹೊಸದಾಗಿ ಜೀವನ ಆರಂಭಿಸುತ್ತಿರುವುದರಿಂದ ದಯವಿಟ್ಟು ನಮ್ಮ ನಿರ್ಧಾರವನ್ನು ಗೌರವಿಸಿ' ಎಂದು ಮನವಿ ಮಾಡಿಕೊಂಡಿದ್ದಾರೆ.

ಪೋಸ್ಟ್​ ರಿಶೇರ್ ಮಾಡಿದ ಪೃಥ್ವಿ ಶಾ

ನಿಶ್ಚಿತಾರ್ಥ ಮುರಿದುಬಿದ್ದ ಕೇವಲ 26 ದಿನದಲ್ಲಿ ಇಬ್ಬರು ಒಟ್ಟಾಗಿ ಕುಳಿತು ಮುಕ್ತವಾಗಿ ಮಾತನಾಡಿ, ಒಟ್ಟಾಗಿರಲು ಬಯಸಿದ್ದಾರೆ. ಪೃಥ್ವಿ ಶಾ ಸಹ . ಈ ಪೋಸ್ಟ್​ ಅನ್ನು ರಿ ಶೇರ್​ ಮಾಡಿಕೊಂಡಿದ್ದಾರೆ. ಅಲ್ಲದೆ ಅದಕ್ಕೆ ಕೆಂಪು ಹೃದಯ ಮತ್ತು ದೃಷ್ಟಿ ನಿವಾರಣೆಯನ್ನು ಸೂಚಿಸುವ ಇಮೋಜಿ ಹಾಕುವ ಮೂಲಕ ಸಂತಸ ಹಂಚಿಕೊಂಡಿದ್ದಾರೆ.

ಯಾರು ಈ ಆಕೃತಿ?

ಆಕೃತಿ ಅಗರ್ವಾಲ್​​ ಸೋಶಿಯಲ್​ ಮೀಡಿಯಾ ಇನ್ಫ್ಲುಯೆನ್ಸರ್​. 22 ವರ್ಷದ ಈಕೆ ನಟಿಯಾಗಿಯೂ ಮಿಂಚಿದ್ದಾರೆ. ಮೂಲತಃ ಉತ್ತರ ಪ್ರದೇಶದ ಲಖನೌದವರಾದ ಆಕೃತಿ, ಮುಂಬೈನಲ್ಲಿ ಉನ್ನತ ಶಿಕ್ಷಣ ಪಡೆದುಕೊಂಡರು. ಜೊತೆಗೆ ನಟನೆಯಲ್ಲಿ ಆಸಕ್ತಿಯಿದ್ದ ಕಾರಣ ತೆಲುಗಿನ ತ್ರಿಮುಖ ಚಿತ್ರದಲ್ಲಿ ನಟಿಸಿದರು. ಕೋವಿಡ್​ ಸಮಯದಲ್ಲಿ ಅವರ ರೀಲ್ಸ್​ಗಳು ಹೆಚ್ಚು ವೈರಲ್ ಆದವು. ಅವರಿಗೆ ಮೂರು ಮಿಲಿಯನ್​ಗಿಂತಲೂ ಹೆಚ್ಚು ಫಾಲೋವರ್ಸ್ ಇದ್ದಾರೆ, (ಏಜೆನ್ಸೀಸ್).