ಕ್ರಿಕೆಟಿಗ ಪೃಥ್ವಿ ಶಾ-ಆಕೃತಿ ನಿಶ್ಚಿತಾರ್ಥ ರದ್ದು!  
ಕ್ರಿಕೆಟ್

ಕ್ರಿಕೆಟಿಗ ಪೃಥ್ವಿ ಶಾ-ಆಕೃತಿ ನಿಶ್ಚಿತಾರ್ಥ ಅಗರ್ವಾಲ್​ ರದ್ದು! ಹೀಗಿದೆ ಕಾರಣ...

ಮುಂಬೈ: ಭಾರತ ಪರ ಆಡಿರುವ ಮುಂಬೈ ಬ್ಯಾಟರ್​ ಪೃಥ್ವಿ ಶಾ (Prithvi Shaw) ಮತ್ತು ಸಾಮಾಜಿಕ ಜಾಲತಾಣ ಇನ್​ಫ್ಯುಯೆನ್ಸರ್​, ನಟಿ ಆಕೃತಿ ಅಗರ್ವಾಲ್​ ಅವರ ನಿಶ್ಚಿತಾರ್ಥ 6 ತಿಂಗಳ ಬಳಿಕ ರದ್ದುಗೊಂಡಿದೆ.

ಈ ವಿಷಯವನ್ನು ಆಕೃತಿ ಇನ್​ಸ್ಟಾಗ್ರಾಂ ಪೋಸ್ಟ್​ನಲ್ಲಿ ಖಚಿತಪಡಿಸಿದ್ದು, ಇಬ್ಬರೂ ಪರಸ್ಪರ ಒಪ್ಪಿಗೆಯಿಂದ ದೂರವಾಗುತ್ತಿದ್ದೇವೆ. ನಮ್ಮಿಬ್ಬರ ಗುರಿ ಮತ್ತು ದಾರಿಗಳು ಬೇರೆ ಬೇರೆಯಾಗಿವೆ ಎಂಬುದನ್ನು ಕಂಡುಕೊಂಡಿದ್ದೇವೆ ಎಂದು ತಿಳಿಸಿದ್ದಾರೆ. ಜತೆಗೆ ಪೃಥ್ವಿ ಶಾ ಅವರ ಹೊಸ ಜೀವನಕ್ಕೆ ಶುಭ ಹಾರೈಸಿದ್ದಾರೆ.

ಕಳೆದ ಮಾರ್ಚ್​ನಲ್ಲಷ್ಟೇ ಸರಳ ಸಮಾರಂಭದ ಮೂಲಕ ಇವರಿಬ್ಬರ ನಿಶ್ಚಿತಾರ್ಥ ನಡೆದಿತ್ತು. ಬಳಿಕ ಪೃಥ್ವಿ ಶಾ ಐಪಿಎಲ್​ನಲ್ಲಿ ಡೆಲ್ಲಿ ತಂಡದ ಭಾಗವಾಗಿದ್ದ ಸಮಯದಲ್ಲಿ ಇಬ್ಬರೂ ಜತೆಯಾಗಿ ಕಾಣಿಸಿಕೊಂಡಿದ್ದರು. "ನನಗೆ ಹಲವು ಬಾರಿ ಮೋಸವಾಗಿದೆ' ಎಂದು ಆಕೃತಿ ಕಳೆದ ಜುಲೈನಲ್ಲಿ ಪೃಥ್ವಿ ಶಾ ಹೆಸರು ಉಲ್ಲೇಖಿಸದೆ ಹಾಕಿದ ಪೋಸ್ಟ್​ನಿಂದಲೇ ಇವರಿಬ್ಬರ ನಡುವೆ ಒಡಕು ಮೂಡಿರುವ ಬಗ್ಗೆ ಸುದ್ದಿಗಳು ಹರಿದಾಡಿದ್ದವು.