- ಫೆ.7ರಿಂದ ಐಸಿಸಿ ಟಿ20 ವಿಶ್ವಕಪ್ ಟೂರ್ನಿ ಆರಂಭ
- 20 ತಂಡ, 55 ಪಂದ್ಯಗಳು ಒಬ್ಬರಿಗೆ ಟ್ರೋಫಿ
- ಯಾರಿಗೆ ಗೆಲುವು? ಎಐ ಅಚ್ಚರಿ ಉತ್ತರ ಹೀಗಿದೆ ನೋಡಿ
ನವದೆಹಲಿ: ಫೆ.7ರಿಂದ ಪ್ರಾರಂಭವಾಗಲಿರುವ ಟಿ20 ವಿಶ್ವಕಪ್ (T20 World Cup 2026 ) ಮೆಗಾ ಟೂರ್ನಿಗೆ ಈಗಾಗಲೇ ದಿನಗಣನೆ ಆರಂಭಗೊಂಡಿದೆ. ಈ ಬಾರಿಯ ಪ್ರತಿಷ್ಠಿತ ಐಸಿಸಿ ಟ್ರೋಫಿ ಯಾವ ತಂಡದ ಮುಡಿಗೇರಲಿದೆ ಎಂಬ ಪ್ರಶ್ನೆ, ಕುತೂಹಲ ಸದ್ಯ ಕ್ರಿಕೆಟ್ ಪ್ರಿಯರಲ್ಲಿ ತೀವ್ರವಾಗಿ ಕಾಡತೊಡಗಿದೆ. ಹಲವರ ತಲೆಯಲ್ಲಿ ಅದಾಗಲೇ ಮೂರು ತಂಡಗಳು ಬಲಿಷ್ಠ ಪೈಪೋಟಿ ಎನಿಸಿದೆ. ಈ ಮಧ್ಯೆ, ಎಐ ಕೊಟ್ಟಿರುವ ಉತ್ತರವೊಂದು ವೈರಲ್ ಆಗಿದ್ದು, ನೆಟ್ಟಿಗರ ಕೌತುಕವನ್ನು ಕೆರಳಿಸಿದೆ.
ಟಿ20 ವಿಶ್ವಕಪ್ ಟೂರ್ನಿಯ ಭಾಗವಾಗಿದ್ದ ಬಾಂಗ್ಲಾದೇಶವನ್ನು ಪಟ್ಟಿಯಿಂದಲೇ ಕಿತ್ತುಬಿಸಾಡಿದ ಐಸಿಸಿ, ಆ ಸ್ಥಾನಕ್ಕೆ ಸ್ಕಾಟ್ಲ್ಯಾಂಡ್ಗೆ ಅವಕಾಶ ನೀಡಿತು. ಈಗ ಪಾಕಿಸ್ತಾನ ಹೊಸ ನಾಟಕ ತೆಗೆದಿದ್ದು, ಫೆ.15ರಂದು ನಡೆಯಲಿರುವ ಟೀಮ್ ಇಂಡಿಯಾ ವಿರುದ್ಧದ ಪಂದ್ಯವನ್ನು ಬಹಿಷ್ಕರಿಸುವುದಾಗಿ ತಿಳಿಸಿದೆ. ಇದು ಮತ್ತೊಂದು ವಿವಾದಕ್ಕೆ ಕಾರಣವಾಗಿದೆ. ಇದನ್ನೆಲ್ಲ ಸೂಕ್ಷ್ಮವಾಗಿ ಗಮನದಲ್ಲಿಟ್ಟುಕೊಂಡಿರುವ ಐಸಿಸಿ, ಯಾರಿಗೆ ಹೇಗೆ ಬುದ್ಧಿ ಕಲಿಸಬೇಕು ಎಂಬುದನ್ನು ಈಗಾಗಲೇ ಉತ್ತಮ ಉದಾಹರಣೆ ಮೂಲಕ ಸ್ಪಷ್ಟಪಡಿಸಿದೆ.
20 ತಂಡ, 55 ಪಂದ್ಯ
ಮತ್ತೊಂದೆಡೆ, ಟೂರ್ನಿಯಲ್ಲಿ 20 ತಂಡಗಳು ಭಾಗವಹಿಸಲಿದ್ದು, 55 ಪಂದ್ಯಗಳು ನಡೆಯಲಿವೆ. ಈ ಎಲ್ಲ ಟೀಮ್ಗಳ ಗುರಿ ಒಂದೇ. ಅದು 2026ರ ವಿಶ್ವಕಪ್ ಪ್ರಶಸ್ತಿ ಗೆಲ್ಲುವುದು. ಭಾರತ ಮತ್ತು ಶ್ರೀಲಂಕಾದ ಪಿಚ್‌ಗಳಲ್ಲಿ ನಡೆಯಲಿರುವ ವಿಶ್ವಕಪ್ ಟೂರ್ನಿಯಲ್ಲಿ ಯಾರು ಗೆಲ್ತಾರೆ ಅನ್ನೋದು ಆರಂಭಕ್ಕೂ ಮೊದಲೇ ಗೊತ್ತಾಗಿದೆ. ಅದು ಎಐ ಕೊಟ್ಟಿರುವ ಉತ್ತರಿಂದ ಎಂಬುದು ಗಮನಾರ್ಹ. ಕೃತಕ ಬುದ್ಧಿಮತ್ತೆ ನೀಡಿರುವ ಉತ್ತರ ಕೇಳಿ ಕ್ರಿಕೆಟ್ ಪ್ರಿಯರು ಖುಷಿ ಹಾಗೂ ಅಚ್ಚರಿ ಎರಡನ್ನೂ ವ್ಯಕ್ತಪಡಿಸಿದ್ದಾರೆ.
ಇದೇ ನೋಡಿ ಎಐ ಉತ್ತರ
ಪ್ರಸ್ತುತ, ಟಿ20 ರ್ಯಾಕಿಂಗ್ನಲ್ಲಿ ಅಗ್ರಸ್ಥಾನದಲ್ಲಿರುವ ಟೀಮ್ ಇಂಡಿಯಾ, ಈ ಬಾರಿ ಪ್ರಶಸ್ತಿ ಗೆಲ್ಲುವ ಅತ್ಯುತ್ತಮ ತಂಡ ಎಂದು ಎಐ ಉತ್ತರಿಸಿದೆ. ಹಾಲಿ ಚಾಂಪಿಯನ್ ಆಗಿ ಟೂರ್ನಿಯಲ್ಲಿ ಕಾಲಿಡುತ್ತಿರುವ ಭಾರತ, 2024ರ ವಿಶ್ವಕಪ್ ಟ್ರೋಫಿ ಗೆದ್ದು ಅದ್ಭುತ ಫಾರ್ಮ್‌ನಲ್ಲಿದೆ. ಇದೇ ಲೆಕ್ಕಾಚಾರದಲ್ಲಿ, ಈ ಬಾರಿಯ ವಿಶ್ವಕಪ್ ವಿಜೇತ ತಂಡವಾಗಿ ಭಾರತ ಹೊರಹೊಮ್ಮಲಿದೆ ಎಂದು ಎಐ ಭವಿಷ್ಯ ನುಡಿದಿದೆ.
ಟೀಮ್ ಇಂಡಿಯಾ ಬಲ
ಪ್ರಸ್ತುತ, ಬ್ಯಾಟಿಂಗ್ ಆರ್ಡರ್ನಲ್ಲಿ ಅಭಿಷೇಕ್ ಶರ್ಮ, ಇಶಾನ್ ಕಿಶನ್ ಮತ್ತು ಕ್ಯಾಪ್ಟನ್ ಸೂರ್ಯಕುಮಾರ್ ಯಾದವ್ ಸ್ಫೋಟಕ ಇನ್ನಿಂಗ್ಸ್ ನೀಡಿದ್ದು, ಭಾರತಕ್ಕೆ ಉತ್ತಮ ಓಪನಿಂಗ್ ಸಿಗುವ ಭರವಸೆ ಹೆಚ್ಚಿದೆ. ಇದರೊಟ್ಟಿಗೆ ಬೌಲಿಂಗ್ ಯೂನಿಟ್ನಲ್ಲಿ, ವರುಣ್ ಚಕ್ರವರ್ತಿ ಮತ್ತು ಕುಲದೀಪ್ ಯಾದವ್ ಅವರಂತಹ ಬೌಲರ್ಗಳ ಸ್ಪಿನ್ ಕೈಚಳಕ ತಂಡಕ್ಕೆ ದೊಡ್ಡ ಬಲವಾಗಿದೆ ಎಂಬುದರಲ್ಲಿ ಅನುಮಾನವಿಲ್ಲ,(ಏಜೆನ್ಸೀಸ್).