ಪಾಕ್ ಕ್ರಿಕೆಟಿಗ ಮೊಹಮ್ಮದ್ ಅಮೀರ್
- ಕೋಟ್ಯಂತರ ಭಾರತೀಯರ ಆಸೆಯನ್ನು ಕಡೆಗೂ ಈಡೇರಿಸಿದ ಟೀಮ್ ಇಂಡಿಯಾ
- ಟೀಮ್ ಇಂಡಿಯಾಗೆ ಗೆಲುವಿಗೆ ಪಾಕ್ ಆಟಗಾರರಲ್ಲಿ ಉರಿ ಉರಿ!
- ಮತ್ತೊಮ್ಮೆ ಸೊಕ್ಕಿನ ಮಾತಾಡಿದ ಮೊಹಮ್ಮದ್ ಅಮೀರ್
IND vs NZ Final: ಕೋಟ್ಯಂತರ ಭಾರತೀಯರ ಆಸೆಯನ್ನು ಕಡೆಗೂ ಈಡೇರಿಸಿದ ಟೀಮ್ ಇಂಡಿಯಾ, ನ್ಯೂಜಿಲೆಂಡ್ ವಿರುದ್ಧ 96 ರನ್ಗಳ ಭರ್ಜರಿ ಗೆಲುವು ದಾಖಲಿಸುವ ಮೂಲಕ ಟಿ20 ವಿಶ್ವಕಪ್ ಟೂರ್ನಿಯ ವಿಜಯಶಾಲಿಯಾಗಿ ಹೊರಹೊಮ್ಮಿತು. ಈ ಮೂಲಕ ಸತತ ಮೂರು ಬಾರಿ ಟಿ20 ವಿಶ್ವಕಪ್ ಗೆದ್ದ ತಂಡ ಮತ್ತು ತವರಿನಲ್ಲಿ ಚುಟುಕು ವಿಶ್ವಕಪ್ ಗೆದ್ದ ಮೊದಲ ತಂಡ ಎಂಬ ಹೆಗ್ಗಳಿಕೆಗೆ ಸೂರ್ಯಕುಮಾರ್ ಯಾದವ್ ಪಡೆ ಪಾತ್ರವಾಗಿದೆ. ಸದ್ಯ ಇದೇ ಪಾಕಿಸ್ತಾನ ಆಟಗಾರರ ಹೊಟ್ಟೆಗೆ ಬೆಂಕಿ ಇಟ್ಟಿದೆ.
ಆರಂಭದಿಂದಲೂ ಟೀಕೆ
ಟಿ20 ವಿಶ್ವಕಪ್ನ ಆರಂಭದಿಂದಲೂ ಭಾರತ ತಂಡವನ್ನು ಒಂದಲ್ಲ ಒಂದು ರೀತಿ ಟೀಕಿಸುತ್ತಲೇ ಬರುತ್ತಿರುವ ಪಾಕ್ ಮಾಜಿ ಆಟಗಾರ ಮೊಹಮ್ಮದ್ ಅಮೀರ್, ಮೊದಲಿಗೆ ಬ್ಯಾಕ್ ಟು ಬ್ಯಾಕ್ ಡಕ್ಔಟ್ ಆದ ಅಭಿಷೇಕ್ ಶರ್ಮ ಅವರನ್ನು ಟೆಕ್ನಿಕ್ ಇಲ್ಲದೆ ಆಡುವ ಆಟಗಾರ ಎಂದು ಟೀಕಿಸಿದರು. ಅದನ್ನೇ ಒಂದಷ್ಟು ಸಮಯ ಮುಂದುವರಿಸಿಕೊಂಡು ಬಂದ ಅಮೀರ್, ಟೀಮ್ ಇಂಡಿಯಾ ಸಂಪೂರ್ಣವಾಗಿ ಬುಮ್ರಾ ಬೌಲಿಂಗ್ ಮೇಲೆ ನಿಂತಿದೆ. ಅವರ ಬಳಿ ಉತ್ತಮ ಬ್ಯಾಟಿಂಗ್ ಲೈನ್ಅಪ್ ಇಲ್ಲ ಎಂದು ನಾನಾ ರೀತಿಯಲ್ಲಿ ಭಾರತದ ಸೋಲನ್ನು ಬಯಸುತ್ತಿದ್ದರು. ಆದರೆ, ಅದ್ಯಾವುದು ನಡೆಯಲಿಲ್ಲ. ಟೀಮ್ ಇಂಡಿಯಾದ ಪ್ರತಿ ನಿರ್ಣಾಯಕ ಪಂದ್ಯಕ್ಕೂ ಮುನ್ನ ಭಾರತ ಸೋಲುತ್ತೆ ಎಂದೇ ಭವಿಷ್ಯ ನುಡಿಯುತ್ತಿದ್ದ ಅಮೀರ್ಗೆ ಈಗ ಭಾರೀ ಮುಖಭಂಗವೇ ಉಂಟಾಗಿದೆ.
ಪ್ರತಿ ಮ್ಯಾಚ್ಗೂ ಭವಿಷ್ಯವಾಣಿ....
ಭಾರತ ಸೆಮಿಫೈನಲ್ಗೆ ಹೋಗಲ್ಲ ಎಂದಿದ್ದ ಅಮೀರ್, ಫೈನಲ್ಗೆ ತಲುಪಲು ಅವರಲ್ಲಿ ಉತ್ತಮ ಆಟಗಾರರಿಲ್ಲ ಎಂದು ಹೇಳಿದ್ದರು. ಅದಾದ ಬಳಿಕ ಫೈನಲ್ನಲ್ಲಿ ನ್ಯೂಜಿಲೆಂಡ್ ಗೆಲ್ಲುತ್ತದೆ ಅಂತ ನುಡಿದಿದ್ದ ಪಾಕ್ ಕ್ರಿಕೆಟಿಗನ ಭವಿಷ್ಯವಾಣಿ ಕಡೆಗೂ ಮಣ್ಣಾಯಿತು. ಇಷ್ಟಾದ ಮೇಲೂ ಸೋಷಿಯಲ್ ಮೀಡಿಯಾದಲ್ಲಿ ಸಪ್ಪೆ ಮುಖವಿಟ್ಟುಕೊಂಡೇ ಮತ್ತೊಮ್ಮೆ ಸೊಕ್ಕಿನ ಮಾತಾಡಿರುವ ಅಮೀರ್, ಭಾರತ ಗೆದ್ದಿದೆ. ಅದು ಓಕೆ. ಅವರೇನು ನನ್ನ ಮನೆಗೆ ಟ್ರೋಫಿಯನ್ನು ತರೋದಿಲ್ಲ ತಾನೇ. ತಮ್ಮ ಜಾಗಕ್ಕೆ ಕೊಂಡೊಯ್ದು, ಸಂಭ್ರಮಿಸುತ್ತಾರೆ ಅಷ್ಟೇ. ಓಕೆ, ವೆಲ್ ಡನ್ ಎಂದು ಕೋಪದಲ್ಲೇ ಹೇಳಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿದ ಅಹ್ಮದ್ ಶೆಹಜಾದ್, ಇವೆಲ್ಲ ಕ್ರಿಕೆಟಿಂಗ್ ಭವಿಷ್ಯ ನುಡಿಗಳು ಅಷ್ಟೇ. ತನ್ನ ಅನುಭವದ ಮೇಲೆ ಅಮೀರ್, ಒಂದಷ್ಟು ಅಭಿಪ್ರಾಯಗಳನ್ನು ಮುಕ್ತವಾಗಿ ಹೇಳುತ್ತಿದ್ದ ಅಷ್ಟೇ. ಇದನ್ನೆಲ್ಲ ತಡೆದುಕೊಳ್ಳಬೇಕು ಎಂದು ಹೇಳಿದ್ದಾರೆ. ಆರಂಭದಿಂದಲೂ ಟೀಮ್ ಇಂಡಿಯಾವನ್ನು ಟಾರ್ಗೆಟ್ ಮಾಡುತ್ತಲೇ ಬಂದ ಅಮೀರ್ಗೆ ಇದೀಗ ಭಾರತೀಯ ಕ್ರಿಕೆಟ್ ಅಭಿಮಾನಿಗಳು ಹುಡುಕಿ, ಹುಡುಕಿ ಛೀಮಾರಿ ಹಾಕುತ್ತಿದ್ದಾರೆ,(ಏಜೆನ್ಸೀಸ್).