ಐಪಿಎಲ್​ ಟ್ರೋಫಿ  
ಕ್ರಿಕೆಟ್

ಐಪಿಎಲ್​ ಪ್ಲೇಆಫ್​ಗೆ ಈ ತಂಡಗಳ ಎಂಟ್ರಿ ಬಹುತೇಕ ಡೌಟ್​! ಹೀಗಿದೆ ನೋಡಿ ಅಗ್ರ 4 ಸ್ಥಾನಗಳ ಲೆಕ್ಕಾಚಾರ | IPL Playoffs

ಪ್ರಮುಖ ಮುಖ್ಯಾಂಶಗಳು

  • ಜಿಟಿ ವಿರುದ್ಧ ರೋಚಕ ಜಯ ಸಾಧಿಸಿದ ಕೋಲ್ಕತ ಪಡೆ
  • ಬದಲಾಯಿತು ಐಪಿಎಲ್​ ಪ್ಲೇಆಫ್​ ಎಂಟ್ರಿ ಲೆಕ್ಕಾಚಾರ
  • ಈ ತಂಡಗಳ ಎಂಟ್ರಿಗೆ ಪವಾಡವೇ ನಡೆಯಬೇಕು
IPL Playoffs: 19ನೇ ಆವೃತ್ತಿಯ ಐಪಿಎಲ್​ ಪ್ಲೇಆಫ್‌ ರೇಸ್ ದಿನದಿಂದ ದಿನಕ್ಕೆ ರೋಚಕವಾಗುತ್ತಿದ್ದು, ಶನಿವಾರ (ಮೇ.16) ಕೋಲ್ಕತದ ಈಡನ್ ಗಾರ್ಡನ್ಸ್‌ನಲ್ಲಿ ನಡೆದ ನಿರ್ಣಾಯಕ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ಎದುರು ಕೆಕೆಆರ್​ 29 ರನ್‌ಗಳ ಭರ್ಜರಿ ಜಯ ಗಳಿಸಿತು. ಈ ಗೆಲುವಿನೊಂದಿಗೆ, ರಹಾನೆ ಪಡೆ ತನ್ನ ಪ್ಲೇಆಫ್ ಭರವಸೆಯನ್ನು ಇನ್ನೂ ಜೀವಂತವಾಗಿರಿಸಿಕೊಂಡಿದೆ. ಮತ್ತೊಂದೆಡೆ, ಅಗ್ರ 4 ಸ್ಥಾನಗಳ ಲೆಕ್ಕಾಚಾರ ಇದೀಗ ಕೊಂಚ ಬದಲಾಗಿದೆ.
ಸೋತರೂ ಸಹ ಗುಜರಾತ್ ಟೈಟನ್ಸ್​ ಹೆಚ್ಚುವರಿ ಪಾಯಿಂಟ್​ಗಳಿಂದ ಪ್ಲೇಆಫ್ ಸ್ಥಾನವನ್ನು ಖಚಿತಪಡಿಸಿಕೊಂಡಿದೆ. ಈ ಸೀಸನ್​ ಆರಂಭದಲ್ಲಿ ಮೊದಲ ಆರು ಪಂದ್ಯಗಳಲ್ಲಿ ಐದು ಸೋಲುಗಳನ್ನು ಅನುಭವಿಸಿದ ಕೆಕೆಆರ್​, ಈಗ ಕ್ರಿಕೆಟ್​ ಪ್ರೇಮಿಗಳೇ ಬೆರಗಾಗುವಂತೆ ಪ್ರದರ್ಶನ ನೀಡಿ, ಬ್ಯಾಕ್​ ಟು ಬ್ಯಾಕ್​ ಗೆಲುವು ಸಾಧಿಸುತ್ತಿದೆ. ಪ್ರಸ್ತುತ, 12 ಪಂದ್ಯಗಳಿಂದ 11 ಅಂಕಗಳೊಂದಿಗೆ 7ನೇ ಸ್ಥಾನದಲ್ಲಿರುವ ರಹಾನೆ ಪಡೆ, ಮೂರನೇ ಸ್ಥಾನದಲ್ಲಿರುವ ಸನ್ ರೈಸರ್ಸ್ ಹೈದರಾಬಾದ್‌ಗಿಂತ ಕೇವಲ ಮೂರು ಅಂಕಗಳಿಂದ ಹಿಂದಿದೆ ಅಷ್ಟೇ. ಉಳಿದ ಎರಡು ಪಂದ್ಯಗಳಲ್ಲಿಯೂ ಗೆದ್ದರೆ, 15 ಅಂಕಗಳಿಂದ ಪ್ಲೇಆಫ್​ ಕನಸನ್ನು ಈಡೇರಿಸಿಕೊಳ್ಳುವ ಎಲ್ಲ ಸಾಧ್ಯತೆಗಳಿದೆ.

ಹೇಗಿದೆ ಲೆಕ್ಕಾಚಾರ?

ಪ್ರಸ್ತುತ, 13 ಪಂದ್ಯಗಳಿಂದ 16 ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿರುವ ಜಿಟಿ, ಅಧಿಕೃತವಾಗಿ ಪ್ಲೇಆಫ್‌ಗೆ ಅರ್ಹತೆ ಪಡೆಯಲು ಕೊನೆಯ ಪಂದ್ಯವನ್ನು ಗೆಲ್ಲಬೇಕಿದೆ. ಇನ್ನು ಆರ್​ಸಿಬಿ 16 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಉಳಿದ ಎರಡು ಪಂದ್ಯಗಳಲ್ಲಿ ಒಂದನ್ನು ಗೆದ್ದರೆ ಸಾಕು ರಜತ್ ಪಡೆ ಅಧಿಕೃತವಾಗಿ ಪ್ಲೇಆಫ್‌ಗೆ ಎಂಟ್ರಿಯಾಗಲಿದೆ. ಅದೇ ಎರಡೂ ಪಂದ್ಯಗಳನ್ನು ಗೆದ್ದರೆ, ಅವರು ಅಗ್ರ ಸ್ಥಾನದಲ್ಲೇ ಉಳಿಯಲಿದೆ.
ಉಳಿದ ಎರಡು ಪಂದ್ಯಗಳನ್ನು ಸನ್‌ರೈಸರ್ಸ್ ಹೈದರಾಬಾದ್ ಗೆದ್ದರೆ, ಪ್ಲೇಆಫ್​ ರೇಸ್​ನಲ್ಲಿ ಸ್ಥಾನವನ್ನು ಪಡೆಯಬಹುದು. ಅದೇ ಒಂದರಲ್ಲಿ ಗೆದ್ದರೆ, ಅಗ್ರ 4ರಲ್ಲಿ ಸ್ಥಾನ ಪಡೆಯುವ ಅವಕಾಶವಿದೆ. ಪಂಜಾಬ್ ಕಿಂಗ್ಸ್ ಉಳಿದ ಎರಡು ಪಂದ್ಯಗಳನ್ನು ಗೆಲ್ಲಲೇಬೇಕು. ರಾಜಸ್ಥಾನ ರಾಯಲ್ಸ್ ಮೂರು ಪಂದ್ಯಗಳಲ್ಲಿ ಗೆದ್ದರೆ, ಅವರು ಅಗ್ರ 2ರಲ್ಲಿ ಸ್ಥಾನ ಪಡೆಯುವ ಅವಕಾಶವಿದೆ. ಎರಡು ಪಂದ್ಯಗಳಲ್ಲಿ ಜಯ ಸಾಧಿಸಿದರೆ, ಟಾಪ್​ 4ರಲ್ಲಿ ಸ್ಥಾನ ಪಡೆಯುವ ಅವಕಾಶವಿದೆ.

ಈ ತಂಡಗಳಿಗೆ ಪವಾಡವೇ ನಡೆಯಬೇಕಷ್ಟೇ

ಈ ತಂಡಗಳ ವಿಷಯದಲ್ಲಿ ಏನೇ ಇದ್ದರೂ ಪವಾಡ ನಡೆಯಬೇಕಷ್ಟೇ. ಚೆನ್ನೈ ಸೂಪರ್ ಕಿಂಗ್ಸ್​ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡಗಳಿಗೆ ಪ್ಲೇಆಫ್​ ಕನಸು ಅದಾಗಲೇ ದೂರವಾಗಿದೆ. ಕೆಕೆಆರ್ ಪರಿಸ್ಥಿತಿಯೂ ಹಾಗೆಯೇ ಇದೆ. ಆದರೆ, ಉಳಿದ ಪಂದ್ಯಗಳನ್ನು ಗೆದ್ದರೆ ಅವಕಾಶಗಳ ಲೆಕ್ಕಾಚಾರ ಬದಲಾಗುವ ಸಾಧ್ಯತೆಯಿದೆ. ಮುಂಬೈ ಇಂಡಿಯನ್ಸ್ ಮತ್ತು ಲಖನೌ ಸೂಪರ್ ಜೈಂಟ್ಸ್​ ತಂಡಗಳು ಈಗಾಗಲೇ ಲೀಗ್​ನಿಂದ ಹೊರಬಿದ್ದಿವೆ,(ಏಜೆನ್ಸೀಸ್).