ಐರ್ಲೆಂಡ್‌ನಲ್ಲಿ ಟೀ ಇಂಡಿಯಾ ಯುವ ಸ್ಟಾರ್ ಅಭಿಷೇಕ್ ಶರ್ಮಾ ಕ್ರೇಜ್(
ಬೆಲ್‌ಫಾಸ್ಟ್: ಭಾರತೀಯ ಕ್ರಿಕೆಟಿಗರಿಗೆ ಕೇವನ ನಮ್ಮ ದೇಶದಲ್ಲಷ್ಟೇ ಅಲ್ಲ, ವಿದೇಶದಲ್ಲೂ ಎಂಥಾ ಕ್ರೇಜ್ ಇರುತ್ತೆ ಅನ್ನೋದಕ್ಕೆ ಐರ್ಲೆಂಡ್‌ನಲ್ಲಿ ನಡೆದ ಈ ಒಂದು ಘಟನೆಯೇ ಸಾಕ್ಷಿಯಾಗಿದೆ.
ಸದ್ಯ ಐರ್ಲೆಂಡ್ ಪ್ರವಾಸದಲ್ಲಿರುವ ಟೀ ಇಂಡಿಯಾದ ಯುವ ಸ್ಟಾರ್ ಬ್ಯಾಟ್ಸ್‌ಮನ್ ಅಭಿಷೇಕ್ ಶರ್ಮಾ (Abhishek Sharma Fan) ಅವರ ಲೇಡಿ ಫ್ಯಾನ್ ಒಬ್ಬರು ಮಾಡಿರುವ ವಿಶಿಷ್ಟ ಸನ್ನೆ ಈಗ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಸೌಂಡ್ ಮಾಡುತ್ತಿದೆ.
ಬೆಲ್‌ಫಾಸ್ಟ್‌ನಲ್ಲಿ ಐರ್ಲೆಂಡ್ ವಿರುದ್ಧದ ಎರಡನೇ ಟಿ-20 ಪಂದ್ಯ ಶುರುವಾಗುವುದಕ್ಕೂ ಮುನ್ನ ಈ ಘಟನೆ ನಡೆದಿದೆ. ಮೈದಾನದ ಹೊರಗೆ ಟೀ ಇಂಡಿಯಾ ಆಟಗಾರರನ್ನು ನೋಡಲು ಮುಗಿಬಿದ್ದಿದ್ದ ಅಭಿಮಾನಿಗಳ ಮಧ್ಯೆ, ಯುವತಿಯೊಬ್ಬರು ಅಭಿಷೇಕ್ ಶರ್ಮಾ ಅವರಿಗೆ ವಿಚಿತ್ರ ರಿಕ್ವೆಸ್ಟ್ ಒಂದನ್ನು ಇಟ್ಟಿದ್ದಾರೆ.
ಬೈಸೆಪ್ಸ್ ಮೇಲೆ ಸಹಿ ಹಾಕಿಸಿಕೊಂಡ ಸುಂದರಿ!
ಸಾಮಾನ್ಯವಾಗಿ ಫ್ಯಾನ್ಸ್ ಬ್ಯಾಟ್, ಟಿ-ಶರ್ಟ್ ಅಥವಾ ಬುಕ್ ಮೇಲೆ ಆಟೋಗ್ರಾಫ್ ಹಾಕಿಸಿಕೊಳ್ಳುತ್ತಾರೆ. ಆದರೆ ಈ ಮಹಿಳಾ ಅಭಿಮಾನಿ ಮಾತ್ರ ನೇರವಾಗಿ ಅಭಿಷೇಕ್ ಶರ್ಮಾ ಹತ್ತಿರ ಬಂದು, ತನ್ನ ತೋಳಿನ ಮೇಲೆ ಸಹಿ ಹಾಕುವಂತೆ ಕೇಳಿಕೊಂಡಿದ್ದಾರೆ. ನೀವು ಹಾಕುವ ಈ ಆಟೋಗ್ರಾಫ್ ಅನ್ನು ನಾನು ಲೈಫ್ ಟೈಮ್ ಹಾಗೇ ಇಟ್ಟುಕೊಳ್ಳಲು ಪರ್ಮನೆಂಟ್ ಟ್ಯಾಟೂ ಹಾಕಿಸಿಕೊಳ್ಳುತ್ತೇನೆ ಎಂದು ಹೇಳಿದ್ದಾರೆ.
ಅಭಿಮಾನಿಯ ಈ ಅಪ್ರತಿಮ ಪ್ರೀತಿಯನ್ನು ಕಂಡು ಭಾರತದ ಯುವ ಓಪನರ್ ಅಭಿಷೇಕ್ ಶರ್ಮಾ ಕೂಡ ಫುಲ್ ಖುಷ್ ಆಗಿದ್ದಾರೆ. ತಕ್ಷಣವೇ ಮಾರ್ಕರ್ ಪೆನ್ ಕೈಗೆತ್ತಿಕೊಂಡು ಆಕೆಯ ತೋಳಿನ ಮೇಲೆ ನಗುತ್ತಲೇ ಸಹಿ ಹಾಕಿಕೊಟ್ಟರು. ಇತ್ತ ಆ ಲೇಡಿ ಫ್ಯಾನ್ ಕೂಡ ಸಖತ್ ಹ್ಯಾಪಿಯಾಗಿ, ಆ ಆಟೋಗ್ರಾಫ್ ಅನ್ನು ಹಚ್ಚೆಯಾಗಿ ಬದಲಿಸಿಕೊಳ್ಳಲು ಹೊರಟಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್!
ಈ ಕ್ಷಣವನ್ನು ಯಾರೋ ಮೊಬೈಲ್‌ನಲ್ಲಿ ವಿಡಿಯೋ ಮಾಡಿದ್ದು, ಸದ್ಯ ಇನ್‌ಸ್ಟಾಗ್ರಾಮ್ ಮತ್ತು ಎಕ್ಸ್ (ಟ್ವಿಟರ್) ಖಾತೆಗಳಲ್ಲಿ ಇದು ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಕ್ರಿಕೆಟ್ ಪ್ರೇಮಿಗಳು ಈ ವಿಡಿಯೋ ನೋಡಿ ಭಾರತೀಯ ಕ್ರಿಕೆಟಿಗರ ಕ್ರೇಜ್ ಅಂದ್ರೆ ಸುಮ್ಮನೇನಾ? ಎಂದು ಕೆಲವರು ಕಮೆಂಟ್ ಮಾಡುತ್ತಿದ್ದಾರೆ.
ಐರ್ಲೆಂಡ್ ವಿರುದ್ಧ ಭಾರತಕ್ಕೆ ಮುಖಭಂಗ!
ಜೂನ್ 26 ರಂದು ನಡೆದ ಮೊದಲ ಟಿ-20 ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಐರ್ಲೆಂಡ್ 20 ಓವರ್ಗಳಲ್ಲಿ 184 ರನ್ಗಳನ್ನು ಗಳಿಸಿತು. ಈ ದೊಡ್ಡ ಟಾರ್ಗೆಟ್ನ್ನು ಬೆನ್ನತ್ತಿದ್ದ ಭಾರತದ ಬ್ಯಾಟಿಂಗ್ ವಿಭಾಗ ಸಂಪೂರ್ಣ ವಿಫಲವಾದ ಹಿನ್ನಲೆ 18.5 ಓವರ್ಗಳಲ್ಲಿ 148 ರನ್ಗಳಿಸಿ ಆಲ್ಔಟ್ ಆಗಿತು. ಈ ಮೂಲಕ ಮೊದಲ ಪಂದ್ಯದಲ್ಲಿ ಐರ್ಲೆಂಡ್ 34 ರನ್ಗಳ ಭರ್ಜರಿ ಗೆಲುವನ್ನು ಸಾಧಿಸಿತು.
ಭಾನುವಾರ (ಜೂ.28) ನಡೆದ ಎರಡನೇ ಟಿ-20 ಪಂದ್ಯದಲ್ಲಿ ಭಾರತ ಕೇವಲ 1 ರನ್ನಿಂದ ಪರಾಜಿತಗೊಂಡಿತು. ಟಾಸ್ ಸೊತು ಬ್ಯಾಟಿಂಗ್ ಆರಂಭಿಸಿದ ಐರ್ಲೆಂಡ್ ತಂಡ 20 ಓವರ್ಗಳಲ್ಲಿ 154 ರನ್ ಗಳಿಸಿತು.
155 ರನ್ನ್ನು ಬೆನ್ನತ್ತಿದ್ದ ಭಾರತ ತಂಡದ ಬ್ಯಾಟರ್ಗಳು ನಿರಾಶಾದಾಯಕ ಪ್ರದರ್ಶನ ನೀಡಿದರು. ತಿಲಕ್ ವರ್ಮಾ ಬ್ಯಾಟ್ನಿಂದ ಅರ್ಧ ಶತಕ ಬಂದಿದ್ದು ಬಿಟ್ಟರೆ ಮತ್ತ್ಯಾರು ಹೇಳಿಕೊಳ್ಳುವಂತ ಪ್ರದರ್ಶನ ನೀಡಲಿಲ್ಲ. ಪಂದ್ಯದ ಕೊನೆಯಲ್ಲಿ ಹರ್ಷಿತ್ ರಾಣಾ ಪ್ರಯತ್ನ ತಂಡವನ್ನು ಗೆಲ್ಲಿಸಲಿಲ್ಲ. ಹೀಗಾಗಿ ಭಾರತ ಈ ಪಂದ್ಯವನ್ನೂ ಸಹ ಸೋಲುವುದರೊಂದಿಗೆ ಸರಿಣಿಯಲ್ಲಿ ಕ್ಲೀನ್ ಸ್ವೀಪ್ ಮೂಲಕ ಪರಾಜಿಗಗೊಂಡಿದೆ, (ಏಜನ್ಸೀಸ್).