ಎಬಿ ಡಿವಿಲಿಯರ್ಸ್, ವೈಭವ್ ಸೂರ್ಯವಂಶಿ
- ವೈಭವ್ ಸೂರ್ಯವಂಶಿ ಆಡಿಸದೆ ಬೆಂಚ್ನಲ್ಲಿ ಕೂರಿಸಿದ ಟೀಮ್ ಇಂಡಿಯಾ
- ಇನ್ನೂ ಎಷ್ಟು ದಿನ ಅವಕಾಶ ಕೊಡದೆ ಕೂರಿಸ್ತೀರಾ?
- ಐರ್ಲೆಂಡ್ ವಿರುದ್ಧವೇ ಆಡಿದಿದ್ದರೆ ಒಳ್ಳೆದಿತ್ತು ಎಂದ ಎಬಿ ಡಿವಿಲಿಯರ್ಸ್
Vaibhav Sooryavanshi: ಟೀಮ್ ಇಂಡಿಯಾದ ಯುವ ಬ್ಯಾಟಿಂಗ್ ಸೆನ್ಸೇಷನ್, 15 ವರ್ಷದ ವೈಭವ್ ಸೂರ್ಯವಂಶಿಯನ್ನು ಐರ್ಲೆಂಡ್ ಮತ್ತು ಇಂಗ್ಲೆಂಡ್ ಪ್ರವಾಸಕ್ಕೆ ಕರೆದುಕೊಂಡರೂ ತಂಡದಲ್ಲಿ ಆಡಿಸದೆ ಕೇವಲ ಬೆಂಚ್ನಲ್ಲಿ ಕೂರಿಸಿರುವುದು ಸದ್ಯ ಕ್ರಿಕೆಟ್ ಪ್ರೇಮಿಗಳು ಮತ್ತು ಮಾಜಿ ಕ್ರಿಕೆಟಿಗರ ಅಸಮಾಧಾನವನ್ನು ಸ್ಫೋಟಿಸಿದೆ.
ವಿಶ್ವ ಕ್ರಿಕೆಟ್ನಲ್ಲಿ ವೈಭವ್ ಹೆಸರು ಭಾರಿ ಸದ್ದು ಮಾಡುತ್ತಿದ್ದು, ಐರ್ಲೆಂಡ್ ವಿರುದ್ಧದ 2 ಪಂದ್ಯಗಳ ಟಿ20 ಸರಣಿಯಲ್ಲಿ ಕ್ಲೀನ್ಸ್ವೀಪ್ ಆದ ಟೀಮ್ ಇಂಡಿಯಾ ಪರ ಸೂರ್ಯವಂಶಿ ಆಡಲಿಲ್ಲ. ಕಾರಣ, ಮ್ಯಾನೇಜ್ಮೆಂಟ್ ಅವರಿಗೆ ಕೊಡದ ಅವಕಾಶ. ಹೀನಾಯ ಸೋಲು, ಭಾರಿ ಮುಖಭಂಗದ ಬಳಿಕವಾದರೂ ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಟಿ20 ಸರಣಿಗೆ ತಂಡಕ್ಕೆ ವೈಭವ್ರನ್ನು ಸೇರಿಸಿಕೊಳ್ಳುತ್ತಾರೆ ಎಂದೇ ಎಲ್ಲರೂ ನಿರೀಕ್ಷಿಸಿದ್ದರು. ಆದರೆ, ಅದಕ್ಕೂ ತಣ್ಣೀರೆರಚಲಾಯಿತು.
ಕೇವಲ ಭಾರತೀಯರು ಮಾತ್ರವಲ್ಲ, ಐರ್ಲೆಂಡ್ ಮತ್ತು ಇಂಗ್ಲೆಂಡ್ ಕ್ರಿಕೆಟ್ ಅಭಿಮಾನಿಗಳು ಸಹ ವೈಭವ್ರನ್ನು ಮೈದಾನದಲ್ಲಿ ನೋಡಲು ಹೆಚ್ಚಿನ ಸಂಖ್ಯೆಯಲ್ಲಿ ಟಿಕೆಟ್ ಖರೀದಿಸಿ ಬರುತ್ತಿದ್ದಾರೆ. ಆದರೆ, ಬೆಂಚ್ಗೆಷ್ಟೇ ಸೀಮಿತವಾಗಿರುವ ಯುವ ಬ್ಯಾಟರ್ನನ್ನು ನೋಡಿ ಬೇಸರಗೊಂಡಿದ್ದಾರೆ. ಅತ್ತ ಇಂಗ್ಲೆಂಡ್ ಎದುರು ಮೊದಲ ಪಂದ್ಯವು ವೈಟ್ ವಾಶ್ ಆದರೂ ಟೀಮ್ ಇಂಡಿಯಾ ಬ್ಯಾಟಿಂಗ್ ಎಂದಿನಂತೆ ಕಳಪೆಯಾಗಿತ್ತು. ಸತತ ಮೂರು ಟಿ20 ಪಂದ್ಯಗಳಲ್ಲಿ ಕಳಪೆ ಪ್ರದರ್ಶನ ತೋರಿರುವ ಸಂಜು ಸ್ಯಾಮ್ಸನ್, ಪರೋಕ್ಷವಾಗಿ ವೈಭವ್ ಆಟಕ್ಕೆ ದಾರಿ ಮಾಡಿಕೊಟ್ಟಿದ್ದಾರೆ. ಇಷ್ಟಾದರೂ ಗಂಭೀರ್ ಪಡೆ ಅವರಿಗೆ ಅವಕಾಶ ಕೊಡಲು ಹಿಂದೇಟು ಹಾಕುತ್ತಿರುವುದು ದಕ್ಷಿಣ ಆಫ್ರಿಕಾದ ಮಾಜಿ ಕ್ಯಾಪ್ಟನ್, ಆರ್ಸಿಬಿ ಆಟಗಾರ ಎಬಿ ಡಿವಿಲಿಯರ್ಸ್ರನ್ನು ಕೆರಳಿಸಿದೆ.
ಸಂಜು ಸ್ಯಾಮ್ಸನ್ ಕಳಪೆ ಫಾರ್ಮ್ ಬೆನ್ನಲ್ಲೇ ವೈಭವ್ರನ್ನು ಆಡಿಸಬೇಕು ಎಂದು ಫ್ಯಾನ್ಸ್ ಒತ್ತಾಯಗಳ ಬೆನ್ನಲ್ಲೇ ಡಿವಿಲಿಯರ್ಸ್ ಟೀಮ್ ಇಂಡಿಯಾಗೆ ಕಣ್ತೆರೆಯುವಂತೆ ಹೇಳಿದ್ದಾರೆ. ವೈಭವ್ ಅವರನ್ನು ಇನ್ನೂ ಅಂತಿಮ ತಂಡದಲ್ಲಿ ಸೇರಿಸದಿರುವುದು ದುರದೃಷ್ಟಕರ. ಐರ್ಲೆಂಡ್ ಸರಣಿಯಲ್ಲಿ ಅವರಿಗೆ ಉತ್ತಮ ಅವಕಾಶವಿತ್ತು. ಆದರೆ, ಇನ್ನೂ ಅವರನ್ನು ಆಡಿಸಿಲ್ಲ. ಈಗ ಅಲ್ಲವೆಂದರೆ ಅವರನ್ನು ಇನ್ಯಾವಾಗ ಆಡಿಸುತ್ತೀರಿ? ಐಪಿಎಲ್‌ನಲ್ಲಿ ಅಬ್ಬರದ ಪ್ರದರ್ಶನ ತೋರಿದಾಗಲೇ ಐರ್ಲೆಂಡ್ನಂತ ಕ್ರಿಕೆಟ್ ಶಿಶು ಎದುರು ಆಡಲು ಬಿಡಬೇಕಿತ್ತು ಎಂದರು.
"ಇಂಗ್ಲೆಂಡ್ ವಿರುದ್ಧದ ಮೊದಲ ಟಿ20 ರದ್ದಾಯಿತು. ಈಗ ಭಾರತೀಯ ತಂಡವು ಬಲಿಷ್ಠವಾಗಿ ವಾಪಾಸ್ ಆಗಬೇಕಿದೆ. ಯುಕೆಯಲ್ಲಿನ ಪರಿಸ್ಥಿತಿಗಳು ಉಳಿದ ಮೈದಾನಗಳಿಗಿಂತ ಭಿನ್ನ. ಐಪಿಎಲ್ನಂತೆ ನೀವು 250, 260 ರನ್ ಗಳಿಸಲು ಸಾಧ್ಯವಿಲ್ಲ. ಕೆಲವೊಮ್ಮೆ ಅಲ್ಲಿನ ಪಿಚ್ಗಳಲ್ಲಿ 140 ಅಥವಾ 160 ಉತ್ತಮ ಸ್ಕೋರ್ ಆಗಿರುತ್ತದೆ" ಎಂದು ಡಿವಿಲಿಯರ್ಸ್ ಹೇಳಿದ್ದಾರೆ,(ಏಜೆನ್ಸೀಸ್).