IndVsPak  
ಕ್ರಿಕೆಟ್

ಜವಾಬ್ದಾರಿ ತಂದ ಗೆಲುವು: ಇಶಾನ್ ಬ್ಯಾಟಿಂಗ್ ಪರಾಕ್ರಮಕ್ಕೆ ಕ್ಯಾಪ್ಟನ್ ಸೂರ್ಯ ಸಲಾಂ!| IndVsPak

ಕೊಲೊಂಬೊ:ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ(IndVsPak) ವಿರುದ್ಧದ ಹೈವೋಲ್ಟೇಜ್ ಪಂದ್ಯದಲ್ಲಿ ಭಾರತ ಭರ್ಜರಿ ಜಯಭೇರಿಬಾರಿಸಿದೆ. ಇಶಾನ್ ಕಿಶನ್ ಅವರ ಸ್ಫೋಟಕ ಬ್ಯಾಟಿಂಗ್ಹಾಗೂ ಬೌಲರ್ಗಳ ಕರಾರುವಾಕ್ ದಾಳಿಯನೆರವಿನಿಂದ ಟೀಮ್ ಇಂಡಿಯಾ ಪಾಕಿಸ್ತಾನವನ್ನು61 ರನ್ಗಳ ಅಂತರದಿಂದ ಮಣಿಸಿ,ಸೂಪರ್-8 ಹಂತಕ್ಕೆ ಅಧಿಕೃತವಾಗಿ ಪ್ರವೇಶ ಪಡೆದಿದೆ.

ಸಂಕಷ್ಟದಲ್ಲಿಆಸರೆಯಾದ ಕಿಶನ್

ಟಾಸ್ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಭಾರತಕ್ಕೆ ಆರಂಭದಲ್ಲೇ ಆಘಾತ ಎದುರಾಯಿತು. ಮೊದಲಓವರ್ನಲ್ಲೇ ಅಬಿಷೇಕ್ ಶರ್ಮಾ ಶೂನ್ಯಕ್ಕೆ ಔಟಾದಾಗ ಕ್ರೀಸ್ಗೆ ಬಂದ ಇಶಾನ್ಕಿಶನ್, ಪಾಕ್ ಬೌಲರ್ಗಳಮೇಲೆ ಸವಾರಿ ಮಾಡಿದರು. ಕೇವಲ 40 ಎಸೆತಗಳಲ್ಲಿ 77 ರನ್ ಸಿಡಿಸಿದ ಕಿಶನ್,ಭಾರತದ ಮೊತ್ತವನ್ನು 175ಕ್ಕೆ ಕೊಂಡೊಯ್ಯುವಲ್ಲಿ ಪ್ರಮುಖಪಾತ್ರ ವಹಿಸಿದರು. ವಿಶೇಷವೆಂದರೆ, ಕೇವಲ 8 ಓವರ್ಮುಕ್ತಾಯದ ವೇಳೆಗೆ ಭಾರತ 82 ರನ್ ಗಳಿಸಿತ್ತು, ಇದರಲ್ಲಿಕಿಶನ್ ಪಾಲು ಬರೋಬ್ಬರಿ 72 ರನ್!

ಆಫ್-ಸೈಡ್ ಆಟದಲ್ಲಿ ಸುಧಾರಣೆ

ಸಾಮಾನ್ಯವಾಗಿಲೆಗ್-ಸೈಡ್ನಲ್ಲಿ ಬಲಿಷ್ಠರಾಗಿರುವಕಿಶನ್, ಪಂದ್ಯದಲ್ಲಿ ತಮ್ಮಆಫ್-ಸೈಡ್ ಆಟದ ಮೂಲಕಎಲ್ಲರ ಗಮನ ಸೆಳೆದರು. ತಮ್ಮ77 ರನ್ಗಳ ಇನ್ನಿಂಗ್ಸ್ನಲ್ಲಿ25 ರನ್ಗಳನ್ನು ಆಫ್-ಸೈಡ್ನಲ್ಲೇಕೇವಲ 9 ಎಸೆತಗಳಲ್ಲಿ ಗಳಿಸಿದರು.

"ನಾನುಆಫ್-ಸೈಡ್ ಆಟದ ಬಗ್ಗೆಸಾಕಷ್ಟು ಅಭ್ಯಾಸ ಮಾಡಿದ್ದೇನೆ. ದೊಡ್ಡ ಮೈದಾನಗಳಲ್ಲಿ ಗ್ಯಾಪ್ಗಳನ್ನು ಹುಡುಕುವುದು ಮುಖ್ಯ. ಬೌಲರ್ಗಳು ನನಗೆ ಬೇಕಾದಕಡೆ ಬೌಲಿಂಗ್ ಮಾಡುವಂತೆ ಒತ್ತಡ ಹೇರಲು ಇದು ಸಹಕಾರಿ," ಎಂದುಪಂದ್ಯಶ್ರೇಷ್ಠ ಪ್ರಶಸ್ತಿ ಗೆದ್ದ ನಂತರ ಇಶಾನ್ ಕಿಶನ್ತಿಳಿಸಿದರು.

ಸೂರ್ಯಕುಮಾರ್ಮೆಚ್ಚುಗೆ

ಭಾರತದನಾಯಕ ಸೂರ್ಯಕುಮಾರ್ ಯಾದವ್ ಕಿಶನ್ ಅವರ ಆಟವನ್ನು ಮುಕ್ತಕಂಠದಿಂದಶ್ಲಾಘಿಸಿದರು. "ಸಂಕಷ್ಟದ ಸಮಯದಲ್ಲಿ ಇಶಾನ್ ಜವಾಬ್ದಾರಿ ತೆಗೆದುಕೊಂಡು ಆಡಿದ್ದು ಅದ್ಭುತವಾಗಿತ್ತು. ಪವರ್ಪ್ಲೇನಲ್ಲಿ ಅವರುನೀಡಿದ ಆರಂಭವೇ ನಮಗೆ ದೊಡ್ಡ ಮೊತ್ತತಲುಪಲು ನೆರವಾಯಿತು," ಎಂದರು.

ಪಾಕ್ಬ್ಯಾಟರ್ಗಳ ಪತರುಗುಟ್ಟಿಸಿದ ಬುಮ್ರಾ-ಹಾರ್ದಿಕ್

176 ರನ್ಗಳ ಗುರಿ ಬೆನ್ನಟ್ಟಿದಪಾಕಿಸ್ತಾನಕ್ಕೆ ಭಾರತದ ವೇಗಿಗಳು ಆರಂಭದಲ್ಲೇ ಸಿಂಹಸ್ವಪ್ನವಾದರು. ಜಸ್ಪ್ರೀತ್ ಬುಮ್ರಾ ಮತ್ತು ಹಾರ್ದಿಕ್ ಪಾಂಡ್ಯ ಕೇವಲ ಎರಡು ಓವರ್ಗಳಲ್ಲಿ ಸಾಹಿಬ್ಜಾದಾ ಫರ್ಹಾನ್, ಸೈಮ್ ಅಯೂಬ್ ಮತ್ತುನಾಯಕ ಸಲ್ಮಾನ್ ಆಗಾ ಅವರ ವಿಕೆಟ್ಪಡೆದು ಪಾಕ್ ಪಡೆಯನ್ನು 13 ರನ್ಗಳಿಗೆ 3 ವಿಕೆಟ್ ಕಳೆದುಕೊಳ್ಳುವಂತೆ ಮಾಡಿದರು. ಅಲ್ಲಿಂದ ಚೇತರಿಸಿಕೊಳ್ಳಲು ಸಾಧ್ಯವಾಗದ ಪಾಕಿಸ್ತಾನ ಸೋಲೊಪ್ಪಿಕೊಂಡಿತು.

ಪಿಚ್ರಿಪೋರ್ಟ್ ಮತ್ತು ತಂತ್ರಗಾರಿಕೆ

ಕೊಲೊಂಬೊದಪ್ರೇಮದಾಸ ಕ್ರೀಡಾಂಗಣದ ಪಿಚ್ ಸ್ಪಿನ್ನರ್ಗಳಿಗೆಹೆಚ್ಚು ಸಹಕಾರಿಯಾಗಿತ್ತು. ಪಾಕಿಸ್ತಾನ ಬರೋಬ್ಬರಿ 18 ಓವರ್ಗಳ ಸ್ಪಿನ್ದಾಳಿ ನಡೆಸಿದರೂ, ಭಾರತದ ಬ್ಯಾಟರ್ಗಳು ರನ್ ಗಳಿಸುವಲ್ಲಿಯಶಸ್ವಿಯಾದರು. ಶಾಹೀನ್ ಅಫ್ರಿದಿ ಎಸೆದ ಕೇವಲ 2 ಓವರ್ಗಳಲ್ಲಿ ಭಾರತ 31 ರನ್ ಚಚ್ಚಿದ್ದು ಪಂದ್ಯದತಿರುವಾಗಿತ್ತು,(ಏಜೆನ್ಸೀಸ್‌).