CSK vs GT ಪಂದ್ಯ, ಮಹೇಂದ್ರ ಸಿಂಗ್ ಧೋನಿ 
ಕ್ರಿಕೆಟ್

ಇನ್ಯಾವಾಗ ಬರೋದು!? ಫಿಟ್​ ಆಗಿದ್ರೂ ಕಣಕ್ಕಿಳಿಯದ ಧೋನಿ ವಿರುದ್ಧ ಸಿಎಸ್​ಕೆ ಫ್ಯಾನ್ಸ್​ ಕೆಂಡ | CSK vs GT

CSK vs GT: ಇಂದು (ಏ.26) ಚೆನ್ನೈನ ಎಂ.ಎ ಚಿದಂಬರಂ ಕ್ರೀಡಾಂಗಣದಲ್ಲಿ ನಡೆಯುತ್ತಿರುವ 19ನೇ ಆವೃತ್ತಿಯ ಐಪಿಎಲ್​ ಪಂದ್ಯದಲ್ಲಿ ಸಿಎಸ್​ಕೆ ಎಂದಿನಂತೆ ತನ್ನ ಕಳಪೆ ಪ್ರದರ್ಶನ ಮುಂದುವರಿಸಿದೆ.
ಟಾಸ್​ ಗೆದ್ದು ಮೊದಲು ಬೌಲಿಂಗ್ ಆಯ್ದುಕೊಂಡ ಗುಜರಾತ್ ಟೈಟನ್ಸ್ ನಾಯಕ ಶುಭಮನ್ ಗಿಲ್​, ಚೆನ್ನೈ ಪಡೆಗೆ ಬ್ಯಾಟ್ ಮಾಡುವಂತೆ ಆಹ್ವಾನಿಸಿದರು. ಅಂತೆಯೇ, ಬ್ಯಾಟಿಂಗ್​ಗಿಳಿದ ಚೆನ್ನೈ ಸೂಪರ್ ಕಿಂಗ್ಸ್​ ಎಂದಿನಂತೆ ಆರಂಭಿಕ ಹಂತದಲ್ಲೇ ವಿಕೆಟ್​ ಕಳೆದುಕೊಳ್ಳುವ ಚಾಳಿಯನ್ನು ಮುಂದುವರಿಸಿದೆ. ಪವರ್​ಪ್ಲೇ ಹಂತದಲ್ಲೇ 4 ವಿಕೆಟ್​ ಕಳೆದುಕೊಂಡು ರನ್​​ಗಳನ್ನು ಕಲೆಹಾಕಲು ತೀರ ಪರದಾಡುತ್ತಿದೆ.
ಸತತವಾಗಿ ಕಳಪೆ ಪ್ರದರ್ಶನ ನೀಡುತ್ತಿರುವ ಕ್ಯಾಪ್ಟನ್ ರುತುರಾಜ್ ಗಾಯಕ್ವಾಡ್​, ಫಾರ್ಮ್​ನಲ್ಲಿರುವ ಸಂಜು ಸ್ಯಾಮ್ಸನ್​ ಜೊತೆ ಓಪನಿಂಗ್ ಬರುತ್ತಲೇ ಇರುವುದು ಸಿಎಸ್​ಕೆ ಅಭಿಮಾನಿಗಳಿಗೆ ಕಿಂಚಿತ್ತು ಇಷ್ಟವಿಲ್ಲ. ಇಷ್ಟಾದರೂ ಬಂದ ರುತುರಾಜ್​, ಒಂದು ಹಂತಕ್ಕೆ ಕ್ರೀಸ್​ಗೆ ಅಂಟಿ ನಿಂತರೆ, ಅತ್ತ ಫ್ಯಾನ್ಸ್​ಗಳ ಅಪಾರ ನಿರೀಕ್ಷೆಯನ್ನು ಸ್ಯಾಮ್ಸನ್​ ಹುಸಿ ಮಾಡಿದರು. 11 ರನ್​ಗೆ ಔಟ್​ ಆಗಿ ಪೆವಿಲಿಯನ್​ಗೆ ಹೋದರು. ಅವರ ಬೆನ್ನಲ್ಲೇ ಉರ್ವಿಲ್​ ಪಟೇಲ್​ (4), ಸರ್ಫರಾಜ್​ ಖಾನ್​ (0) ಮತ್ತು ಡೇವಾಲ್ಡ್​ ಬ್ರೆವಿಸ್​ (2) ವಿಕೆಟ್​ ಕಳೆದುಕೊಂಡರು.

ಫಿಟ್​ ಆಗಿದ್ರೂ ಧೋನಿ ಏಕಿಲ್ಲ?

ಮತ್ತೊಂದೆಡೆ, ಮಾಜಿ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ ಅವರಿಗಾಗಿಯೇ ಪ್ರತಿ ಪಂದ್ಯಕ್ಕೂ ಭರವಸೆ, ನಿರೀಕ್ಷೆಯಿಂದ ಆಗಮಿಸುತ್ತಿರುವ ಸಿಎಸ್​ಕೆ ಅಭಿಮಾನಿಗಳಿಗೆ ಪದೇ ಪದೇ ಬೇಸರ ಉಂಟಾಗುತ್ತಿದೆ. ಪ್ರ್ಯಾಕ್ಟಿಸ್​ನಲ್ಲಿ ಮೈದಾನದಲ್ಲಿ ಕಾಣಿಸಿಕೊಳ್ಳುವ ಧೋನಿ, ಅದೇ ಲೈವ್​ ಪಂದ್ಯಗಳಲ್ಲಿ ಏಕೆ ಬರುತ್ತಿಲ್ಲ. ಫಿಟ್​ ಆಗಿದ್ದರೂ ಸಹ ತಂಡದ ಪರ ಆಡದಿರಲು ಏನು ಕಾರಣ? ಎಂದು ಅಭಿಮಾನಿಗಳು ಸೋಷಿಯಲ್ ಮೀಡಿಯಾದಲ್ಲಿ ತೀವ್ರ ಬೇಸರ ಹೊರಹಾಕಿದ್ದಾರೆ.