ಮುಂಬೈ: ವಿಶ್ವದ ಶ್ರೀಮಂತ ಲೀಗ್ಗಳಲ್ಲಿ ಒಂದಾಗಿರುವ ಐಪಿಎಲ್ ಕ್ರೀಡಾಕೂಟದ ಕೋಲ್ಕತ ನೈಟ್ ರೈಡರ್ಸ್ ತಂಡದ ಮಾಲೀಕನಾಗಿರುವ ಬಾಲಿವುಡ್ ನಟ ಶಾರೂಖ್ ಖಾನ್ ಇದೀಗ ಕೆರಿಬಿಯನ್ ಲೀಗ್ನ ಮಹಿಳಾ ತಂಡವನ್ನೂ ಖರೀದಿ ಮಾಡಿದ್ದಾರೆ.
ಈ ಬಗ್ಗೆ ಶಾರೂಖ್ ಟ್ವೀಟ್ ಮಾಡಿದ್ದು, ತಮ್ಮ ನೈಟ್ ರೈಡರ್ಸ್ ಫ್ರಾಂಚೈಸಿ ಇದೀಗ ಮೊದಲ ಬಾರಿಗೆ ಮಹಿಳಾ ತಂಡದ ಮಾಲೀಕತ್ವವನ್ನು ಪಡೆದುಕೊಂಡಿದೆ ಎಂದು ಬರೆದುಕೊಂಡಿದ್ದಾರೆ.
ಕೆರಿಬಿಯನ್ ಮಹಿಳಾ ತಂಡಕ್ಕೆ 'ಟ್ರಿನ್‌ಬಾಗೊ ನೈಟ್ ರೈಡರ್ಸ್' ಎಂದು ಹೆಸರಿಸಲಾಗಿದೆ. ಆಗಸ್ಟ್ 30 ರಿಂದ ಆರಂಭವಾಗಲಿರುವ ಮಹಿಳಾ ಕೆರಿಬಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಈ ತಂಡ ಕಣಕ್ಕಿಳಿಯಲಿದೆ.
ಶಾರುಖ್ ಖಾನ್, ನಟಿ ಜೂಹಿ ಚಾವ್ಲಾ ಅವರೊಂದಿಗೆ ನೈಟ್ ರೈಡರ್ಸ್ ಗ್ರೂಪ್ ಸಹ ಮಾಲೀಕರಾಗಿದ್ದಾರೆ. ಟ್ರಿನ್‌ಬಾಗೊ ನೈಟ್ ರೈಡರ್ಸ್ ಹೊರತಾಗಿ ಅವರು, ಕೋಲ್ಕತ್ತಾ ನೈಟ್ ರೈಡರ್ಸ್, ಲಾಸ್ ಏಂಜಲೀಸ್ ನೈಟ್ ರೈಡರ್ಸ್ ಮತ್ತು ಅಬುಧಾಬಿ ನೈಟ್ ರೈಡರ್ಸ್ ಮೂರು ಕ್ರಿಕೆಟ್ ತಂಡಗಳ ಮಾಲೀಕತ್ವವನ್ನು ಹೊಂದಿದ್ದಾರೆ.