ಕ್ರೀಡೆ

VIDEO: ಸಿಪಿಎಲ್​: ಸೇಂಟ್​ ಕಿಟ್ಸ್​ ಹಾಗೂ ನೆವಿಸ್​ ಪೇಟ್ರಿಯಾಟ್ಸ್​ ತಂಡಕ್ಕೆ ಮೊದಲ ಜಯ

ಫೋರ್ಟ್ ಆಫ್ ಸ್ಪೇನ್: ಹ್ಯಾಟ್ರಿಕ್​ ಸೋಲಿನಿಂದ ಕಂಗೆಟ್ಟಿದ್ದ ಸೇಂಟ್​ ಕಿಟ್ಸ್​ ಹಾಗೂ ನೆವಿಸ್​ ಪೇಟ್ರಿಯಾಟ್ಸ್​ ತಂಡ ಕೆರಿಬಿಯನ್​ ಪ್ರೀಮಿಯರ್​ ಲೀಗ್​ (ಸಿಪಿಎಲ್​) ಟಿ20 ಕ್ರಿಕೆಟ್​ ಟೂರ್ನಿಯಲ್ಲಿ ಮೊದಲ ಗೆಲುವು ದಾಖಲಿಸಿತು. ಕ್ವೀನ್ಸ್​ ಪಾರ್ಕ್​ ಮೈದಾನದಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ಎವಿನ್​ ಲೇವಿಸ್​ (89ರನ್​, 60 ಎಸೆತ, 2 ಬೌಂಡರಿ, 9 ಸಿಕ್ಸರ್​) ಸ್ಫೋಟಕ ಬ್ಯಾಟಿಂಗ್​ ನೆರವಿನಿಂದ ಪೇಟ್ರಿಯಾಟ್ಸ್​ ತಂಡ 6 ವಿಕೆಟ್​ಗಳಿಂದ ಬಾರ್ಬಡೊಸ್​ ಟ್ರಿಡೆಂಟ್ಸ್​ ತಂಡವನ್ನು ಮಣಿಸಿತು.

ಮೊದಲು ಬ್ಯಾಟಿಂಗ್​ ಮಾಡಿದ ಬಾರ್ಬಡೊಸ್​ 7 ವಿಕೆಟ್​ಗೆ 151 ರನ್​ಗಳಿಸಿದರೆ, ಪೇಟ್ರಿಯಾಟ್ಸ್​ ತಂಡ 19.3 ಓವರ್​ಗಳಲ್ಲಿ 4 ವಿಕೆಟ್​ಗೆ 152 ರನ್​ಗಳಿಸಿ ಜಯದ ನಗೆ ಬೀರಿತು. ದಿನದ ಮತ್ತೊಂದು ಪಂದ್ಯದಲ್ಲಿ ಜಮೈಕಾ ತಲ್ಲಾವಾಹ್ಸ ತಂಡ 5 ವಿಕೆಟ್​ಗಳಿಂದ ಗಯಾನ ಅಮೆಜಾನ್​ ವಾರಿಯರ್ಸ್​ ತಂಡವನ್ನು ಸೋಲಿಸಿತು.

ಬಾರ್ಬಡೊಸ್​ ಟ್ರಿಡೆಂಟ್ಸ್​: 7 ವಿಕೆಟ್​ಗೆ 151 (ಶೈ ಹೋಪ್​ 29, ಚಾರ್ಲ್ಸ್​ 24, ಕೋರಿ ಆಂಡರ್​ಸನ್​ 31, ಜಾನ್​ ಜಗ್ಗೆಸರ್​ 17ಕ್ಕೆ 2), ಸೇಂಟ್​ ಕಿಟ್ಸ್​ ಹಾಗೂ ನೆವಿಸ್​ ಪೇಟ್ರಿಯಾಟ್ಸ್​ : 19.3 ಓವರ್​ಗಳಲ್ಲಿ 4 ವಿಕೆಟ್​ಗೆ 152 (ಲೆವಿಸ್​ 89, ಡಂಕ್​ 22 ಅಜೇಯ, ಕೈಲೆ ಮೇಯೆರ್ಸ್​ 14ಕ್ಕೆ 2).