IPL 2025; ಇದೇ ಮಾರ್ಚ್ 23ರಿಂದ ಈ ಬಾರಿಯ ಇಂಡಿಯನ್ ಪ್ರಿಮಿಯರ್ ಲೀಗ್(IPL) ಆರಂಭವಾಗಲಿದೆ ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(BCCI)ಯ ಉಪಾಧ್ಯಕ್ಷ ರಾಜೀವ್ ಶುಕ್ಲಾ ಭಾನುವಾರ ಖಚಿತ ಪಡಿಸಿದ್ದಾರೆ.
ಭಾನುವಾರ ಮುಂಬೈನಲ್ಲಿ ನಡೆದ ವಿಶೇಷ ಸಾಮಾನ್ಯ ಸಭೆಯಲ್ಲಿ ಭಾಗವಹಿಸಿದ್ದ ರಾಜೀವ್ ಶುಕ್ಲಾ ಬಳಿಕ ಸುದ್ದಿಗಾರೊಂದಿಗೆ ಮಾತನಾಡಿ ದಿನಾಂಕ ಬಹಿರಂಗಪಡಿಸಿದರು.
ಇದನ್ನೂ ಓದಿ: ಪ್ಯಾರಿಸ್ ಪ್ರವಾಸಕ್ಕಾಗಿ ಪಾಕಿಸ್ತಾನಿ ಏರ್ಲೈನ್ಸ್ನಿಂದ ಜಾಹೀರಾತು; Viral Post ನೋಡಿ ಇದು ಬೆದರಿಕೆಯೇ ಎಂದ ನೆಟ್ಟಿಗರು
ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2024 ರ ಸೀಸನ್ ಮಾರ್ಚ್ 22 ರಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವಿನ ಪಂದ್ಯದೊಂದಿಗೆ ಆರಂಭಗೊಂಡಿತ್ತು. ಇದೀಗ ಯಾವ ಪಂದ್ಯಗಳ ನಡುವೆ ಆರಂಭವಾಗಲಿದೆ ಎಂದು ಅಭಿಮಾನಿಗಳು ಕಾಯುತ್ತಿದ್ದಾರೆ.
ಮೇ26 ರವರೆಗೆ ಎಲ್ಲ ಪಂದ್ಯಗಳ ನಡೆಯಲಿದ್ದು ಫೈನಲ್ ಪಂದ್ಯ(ಮೇ.26)ಎಂದು ವರದಿಗಳು ಉಲ್ಲೇಖಿಸಿವೆ.
ಇದನ್ನೂ ಓದಿ: ಪ್ಯಾರಿಸ್ ಪ್ರವಾಸಕ್ಕಾಗಿ ಪಾಕಿಸ್ತಾನಿ ಏರ್ಲೈನ್ಸ್ನಿಂದ ಜಾಹೀರಾತು; Viral Post ನೋಡಿ ಇದು ಬೆದರಿಕೆಯೇ ಎಂದ ನೆಟ್ಟಿಗರು
ಐಪಿಎಲ್ ಕ್ರಿಕೆಟ್ ಜಗತ್ತಿನ ಅತ್ಯಂತ ನಿರೀಕ್ಷಿತ ಕ್ರೀಡೆಗಳಲ್ಲಿ ಒಂದಾಗಿದೆ. ಇನ್ನು ಐಪಿಎಲ್ ಹೊಸ ದಿನಾಂಕ ಘೋಷಣೆಯಾಗಿದ್ದು, ಅಭಿಮಾನಿಗಳು ಮತ್ತು ಫ್ರಾಂಚೈಸಿಗಳಲ್ಲಿ ಉತ್ಸಾಹವು ಅಧಿಕವಾಗಿದೆ. ಮಾರ್ಚ್ 23 ಕ್ಕೆ ಕ್ಷಣಗಣನೆ ಪ್ರಾರಂಭವಾಗಿದೆ, ಈಗ ಎಲ್ಲಾ ಕಣ್ಣುಗಳು ಆರಂಭಿಕ ಸಮಾರಂಭ ಮತ್ತು ಸೀಸನ್ ಮೊದಲ ಪಂದ್ಯದ ಮೇಲೆ ಇದೆ. ಐಪಿಎಲ್‌ನ ಮತ್ತೊಂದು ಅವಿಸ್ಮರಣೀಯ ಆವೃತ್ತಿಯ ಭರವಸೆಗಾಗಿ ತಂಡಗಳು ಮತ್ತು ಅಭಿಮಾನಿಗಳು ಸಜ್ಜಾಗುತ್ತಿದ್ದಾರೆ.(ಏಜೆನ್ಸೀಸ್)