| ರಘುನಾಥ್ ಡಿ.ಪಿ. ಬೆಂಗಳೂರು
ಕರೊನಾ ವೈರಸ್ ಭೀತಿಯಿಂದ ಇಡೀ ವಿಶ್ವವೇ ನಲುಗುತ್ತಿದೆ. ಅದರಲ್ಲೂ ಇಡೀ ಭಾರತವೇ ಕಳೆದ ಒಂದು ತಿಂಗಳಿಂದ ಲಾಕ್‌ಡೌನ್‌ನಲ್ಲಿ ಸಿಲುಕಿದೆ. ಇಷ್ಟು ವರ್ಷ ಈ ವೇಳೆಗೆ ಬೇಸಿಗೆ ಶಿಬಿರ ಸೇರಿದಂತೆ ಇನ್ನಿತರ ಕ್ರೀಡಾ-ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತೊಡಗುತ್ತಿದ್ದ ಮಕ್ಕಳ ಮನರಂಜನಾ ಕಾರ್ಯಕ್ರಮಕ್ಕೆ ಈ ಬಾರಿ ಸಂಪೂರ್ಣ ಬ್ರೇಕ್ ಬಿದ್ದಿದೆ. ಇದರ ನಡುವೆ ಬೆಂಗಳೂರಿನ 10 ವರ್ಷದ ಪೋರನೊಬ್ಬ ಕರೊನಾ ವೈರಸ್ ಹಾಗೂ ಅದರ ಮುನ್ನೆಚ್ಚರಿಕೆ ಒಳಗೊಂಡ ‘ಕರೊನಾ ಯುಗ’ ಎಂಬ ಹೆಸರಿನ ಬೋರ್ಡ್ ಗೇಮ್ ಸಿದ್ಧಪಡಿಸುವ ಮೂಲಕ ಮಾದರಿಯಾಗಿದ್ದಾನೆ. ಹಾವು-ಏಣಿ ಆಟದ ಮಾದರಿಯಲ್ಲಿ ಕರೊನಾ ಬೋರ್ಡ್ ಗೇಮ್‌ಅನ್ನು ವೀರ್ ಕಶ್ಯಪ್ ರೂಪಿಸಿದ್ದಾನೆ.
ಲಾಕ್‌ಡೌನ್‌ನಲ್ಲಿ ಹೊಳೆದ ಐಡಿಯಾ: ನವದೆಹಲಿಯ ಆರ್ಮಿ ಪಬ್ಲಿಕ್ ಶಾಲೆಯಲ್ಲಿ ಓದುತ್ತಿರುವ ವೀರ್ ಕಶ್ಯಪ್ ಬೆಂಗಳೂರಿಗೆ ಅಜ್ಜ-ಅಜ್ಜಿಯ ಮನೆಗೆ ಬಂದ ಬೆನ್ನಲ್ಲೇ ಇಡೀ ದೇಶವೇ ಲಾಕ್‌ಡೌನ್‌ನಲ್ಲಿ ಸಿಲುಕಿದ. ಅತ್ತ ಪಾರ್ಕ್‌ಗೂ ಹೋಗುವಂತಿಲ್ಲ, ಇತ್ತ ನೆರೆಹೊರೆಯವರೊಂದಿಗೂ ಬೆರೆಯದ ಪರಿಸ್ಥಿತಿಗೆ ಸಿಲುಕಿದ ವೀರ್ ಕಶ್ಯಪ್, ತಾನೇ ಸ್ವತಃ ಬೋರ್ಡ್ ಗೇಮ್ ಕಂಡು ಹಿಡಿದಿದ್ದಾನೆ. ಇಡೀ ವಿಶ್ವವನ್ನೇ ನಡುಗಿಸುತ್ತಿರುವ ಕರೊನಾ ವೈರಸ್ ಮೇಲೆಯೇ ಗೇಮ್ ಕಂಡುಹಿಡಿದು ಎಲ್ಲರ ಗಮನಸೆಳೆದಿದ್ದಾನೆ. ಹಾವು-ಏಣಿ ಆಟದ ಮಾದರಿ ಹೊಂದಿದ್ದರೂ, ಕರೊನಾ ವೈರಸ್ ವೇಳೆ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳಾದ ಸಾಮಾಜಿಕ ಅಂತರ, ಹ್ಯಾಂಡ್‌ವಾಷ್ ಮತ್ತು ಮಾಸ್ಕ್ ಬಗ್ಗೆ ಜಾಗೃತಿ ಮೂಡಿಸುತ್ತದೆ. ಜತೆಗೆ ಲಾಕ್‌ಡೌನ್ ವೇಳೆ ಕೇಳಿ ಬರುತ್ತಿರುವ ಕ್ವಾರಂಟೈನ್, ಸೀಲ್‌ಡೌನ್, ವೈರಸ್ ಲಕ್ಷಣಗಳನ್ನು ಈ ಬೋರ್ಡ್ ಆಟ ಒಳಗೊಂಡಿದೆ.
ಕರೊನಾ ಬೋರ್ಡ್‌ನಲ್ಲಿ ಏನೇನಿದೆ?
ಮಾಸ್ಕ್ (ಕವಡೆ ಮೂಲಕ 2 ಬಿದ್ದರಷ್ಟೇ ಮಾಸ್ಕ್ ಮೂಲಕ ಬೋರ್ಡ್‌ಗೆ ಎಂಟ್ರಿ), ಶೀತದ ಮಣೆ, ಸ್ಯಾನಿಟೈಸ್ ಮಣೆ, ಜನರಲ್ ಸ್ಟೋರ್(ದಿನಸಿ ಅಂಗಡಿ), ಸೀಲ್‌ಡೌನ್ ಮಣೆ, ರೈಲು, ವಿಮಾನದ ಮಣೆ, ಯೋಗಾ ಮಣೆ, ಕರೊನಾ ವೈರಸ್ ಮಣೆ, ಚಪ್ಪಾಳೆ ಮಣೆ, ಪ್ಲೇಯಿಂಗ್ ಬೋರ್ಡ್‌ಗಳಿವೆ. ಮಣೆ ಒಳಗಡೆ ದಿನಸಿ ಅಂಗಡಿ, ಪೊಲೀಸ್ ಠಾಣೆ, ಆಸ್ಪತ್ರೆ ಹಾಗೂ ಕ್ವಾರಂಟೈನ್ ಪ್ರದೇಶಗಳಿರುತ್ತವೆ. ಬೋರ್ಡ್ ಜತೆಗೆ ಪೆಗ್ಸ್ ಹಾಗೂ ಡೈಸ್ ಆಟಕ್ಕೆ ಅಗತ್ಯವಾಗಿವೆ.
ಆಟದ ನಿಯಮಗಳು ಹೀಗಿವೆ
ಏಕಕಾಲದಲ್ಲಿ ಕನಿಷ್ಠ 2ರಿಂದ ಹಲವು ಮಂದಿ ಆಡಬಹುದು. ಡೈಸ್‌ನಲ್ಲಿ (ಕವಡೆ ಕೂಡ ಬಳಸಬಹುದು) ಆರಂಭದಲ್ಲಿ ಎರಡು ಬಿದ್ದರಷ್ಟೇ ಬೋರ್ಡ್‌ಗೆ ಎಂಟ್ರಿ. 2 ಬಿದ್ದು ಬೋರ್ಡ್‌ಗೆ ಎಂಟ್ರಿ ಕೊಟ್ಟರೆ ಮೊದಲಿಗೆ ಮಾಸ್ಕ್ ಇರುವ ಮಣೆ ಮೂಲಕ ಆಟ ಆರಂಭಿಸಬೇಕು. ಕರೊನಾ ವೈರಸ್‌ನಿಂದ ಸುರಕ್ಷಿತವಾಗಿರಲು ಮಾಸ್ಕ್ ಧರಿಸಬೇಕು ಎಂಬುದು ಇದರ ಉದ್ದೇಶ. ಬಳಿಕ ಡೈಸ್‌ನಲ್ಲಿ ಅಂಕ ಬಿದ್ದಂತೆ ಮುಂದೆ ಸಾಗಬೇಕು. ಸಾಮಾಜಿಕ ಅಂತರ ಕಾಯ್ದುಕೊಳ್ಳುವ ದೃಷ್ಟಿಯಿಂದ ಒಂದೇ ಮಣೆಯಲ್ಲಿ ಇಬ್ಬರು (ಪೆಗ್ಸ್, ಕಾಯಿನ್) ಇರುವಂತಿಲ್ಲ.

ಈ ವೇಳೆ ದಿನಸಿ ಅಂಗಡಿ ಮಣೆಗೆ (ಅಗತ್ಯ ವಸ್ತು ಆಗಿರುವುದರಿಂದ) ಕಡ್ಡಾಯವಾಗಿ ಹೋಗಬೇಕು. ಬಳಿಕ ಸೀಲ್‌ಡೌನ್ ಮಣೆ ಸಿಕ್ಕರೆ ಪೊಲೀಸ್ ಠಾಣೆಗೆ ಕಡ್ಡಾಯವಾಗಿ ಹೋಗಬೇಕು. ಶೀತ-ಕೆಮ್ಮು ಮಣೆಗೆ ಪ್ರವೇಶ ಪಡೆದರೆ, ಮತ್ತೆ ಹಿಂದಕ್ಕೆ ಬಂದು ಹ್ಯಾಂಡ್ ಸ್ಯಾನಿಟೈಸರ್ ಮಣೆಯಿಂದ ಮತ್ತೆ ಆಟ ಆರಂಭಿಸಬೇಕಾಗುತ್ತದೆ. ಹೀಗೆ ಯೋಗ ಮಣೆ ಬಂದಾಗ ಯೋಗ ಮಾಡಬೇಕು (ಯಾವುದಾದರೂ ಒಂದು ಆಸನ) ಹಾಗೂ ಚಪ್ಪಾಳೆ ಮಣೆಗೆ ಬಂದರೆ ಎಲ್ಲರೂ ಚಪ್ಪಾಳೆ ಹೊಡೆಯಬೇಕು. ಹೀಗೆ ರೈಲು ನಿಲ್ದಾಣ, ವಿಮಾನ ನಿಲ್ದಾಣದ ಮಣೆಗಳು ಇವೆ. ರೈಲು, ವಿಮಾನ ನಿಲ್ದಾಣಗಳಲ್ಲಿ ಒಂದು ದಿನ (ಅಂದರೆ ಒಮ್ಮೆ ಡೈಸ್ ಬಿಡುವಂತಿಲ್ಲ) ಕ್ವಾರಂಟೈನ್‌ನಲ್ಲಿರಬೇಕು. ಅಂತಿಮ ಹಂತಕ್ಕೆ ತಲುಪಿದರೂ 2 ಪಾಯಿಂಟ್ಸ್ ಬಿದ್ದರಷ್ಟೇ ಮಣೆಯಿಂದ ಹೊರಬರಲು ಸಾಧ್ಯ. ಹೀಗೆ ಹೊರ ಬರುವ ಆಟಗಾರರನ್ನು ವಿನ್ನರ್ ಅಥವಾ ಕರೊನಾ ಸರ್ವೈವರ್ ಎಂದು ಕರೆಯಲಾಗುತ್ತದೆ.
ದೆಹಲಿಯಿಂದ ರಜೆಗೆ ಬಂದು ಬೆಂಗಳೂರಿನಲ್ಲಿ ಲಾಕ್ ಆಗಿದ್ದೇವೆ. ಅಕ್ಕಪಕ್ಕದ ಮನೆಗೆ ಹೋಗುವಂತಿಲ್ಲ. ಪಾರ್ಕ್‌ಗೆ ಹೋಗಿಯೂ ಆಡುವಂತಿಲ್ಲ. ಅವನ ಪರಿಕಲ್ಪನೆಯಲ್ಲಿ ಕರೊನಾ ಬೋರ್ಡ್ ಸೃಷ್ಟಿಯಾಗಿದೆ. ಟೈಮ್ ಪಾಸ್ ಜತೆಗೆ ಕರೊನಾ ವೈರಸ್ ಭೀತಿ ಬಗ್ಗೆಯೂ ಇದರಿಂದ ಜಾಗೃತಿ ಮೂಡುತ್ತದೆ. ಇದನ್ನು ಬೋರ್ಡ್ ಗೇಮ್ ಆಗಿ ರೂಪಿಸುವ ಯೋಜನೆ ಇದೆ. | ಸಂಗೀತಾ, ವೀರ್ ಕಶ್ಯಪ್ ತಾಯಿ ಲಾಕ್‌ಡೌನ್‌ನಿಂದ ಮನೆಯಲ್ಲೇ ಇರುವುದಕ್ಕೆ ತುಂಬ ಬೇಜಾರಾಗಿತ್ತು. ಮನೆಯಲ್ಲಿ ಯಾವುದೇ ಬೋರ್ಡ್ ಗೇಮ್‌ಗಳು ಇರಲಿಲ್ಲ. ಅದರಿಂದಾಗಿ ಮನೆಯಲ್ಲೇ ಇದ್ದ ಸಾಮಾಗ್ರಿಗಳಿಂದ ಈ ಬೋರ್ಡ್ ಗೇಮ್ ಸಿದ್ಧಪಡಿಸಿದೆ. |ವೀರ್ ಕಶ್ಯಪ್, ಕರೊನಾ ಬೋರ್ಡ್ ಸಿದ್ಧಪಡಿಸಿದ ಬಾಲಕ
ಕರೊನಾ ಬೋರ್ಡ್ ಗೇಮ್ ಬಗೆಗಿನ ಹೆಚ್ಚಿನ ಮಾಹಿತಿಗಾಗಿ ಯೂಟೂಬ್ ಲಿಂಕ್ ವೀಕ್ಷಿಸಿ: