ಬೆಂಗಳೂರು: ಹಾಲಿ ವರ್ಷಾರಂಭದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ), ಕ್ರಿಕೆಟ್ನ ಕೆಲ ನಿಯಮಗಳನ್ನು ಪರಿಷ್ಕರಣೆಗೊಳಿಸಿ ಬ್ಯಾಟರ್ ಹಾಗೂ ಬೌಲರ್ಗಳ ನಡುವೆ ಸಮಾನ ಸ್ಪರ್ಧೆಗೆ ಅವಕಾಶ ನೀಡಿದೆ. ಇದೇ ರೀತಿ ಪ್ರೊ ಕಬಡ್ಡಿ ಲೀಗ್ನ ಸ್ವರೂಪಕ್ಕೂ ಈ ಬಾರಿ ಹೊಸ ಸ್ಪರ್ಶ ನೀಡಲಾಗಿದ್ದು, ಮುಂದಿನ ಆವೃತ್ತಿಗಳಲ್ಲಿ ಮತ್ತಷ್ಟು ನೂತನ ನಿಯಮಗಳನ್ನು ಪರಿಚಯಿಸುವ ಗುರಿ ಹೊಂದಲಾಗಿದೆ. ಇದರಲ್ಲಿ ಪ್ರಮುಖವಾಗಿ ಇಂಪ್ಯಾಕ್ಟ್ ಪ್ಲೇಯರ್ ರೀತಿಯ ಟ್ರಂಪ್ ಕಾರ್ಡ್ ಪರಿಚಯಿಸುವ ಪ್ರಯತ್ನ ಜಾರಿಯಲ್ಲಿದೆ.
12ನೇ ಆವೃತ್ತಿಯಲ್ಲಿ ಟೈಬ್ರೇಕರ್, ಗೋಲ್ಡನ್ ರೈಡ್, ಪ್ಲೇಇನ್, ಪ್ಲೇ ಆಫ್ ನಿಯಮಗಳ ಸೇರ್ಪಡೆಯಿಂದ ಪಂದ್ಯಗಳು ರೋಚಕತೆ ಹೆಚ್ಚಿಸಿಕೊಂಡಿವೆ. ಈ ಹೊಸ ನಿಯಮ ಪ್ರಯೋಗಗಳ ರೂವಾರಿ ಪೊ ಕಬಡ್ಡಿ ಲೀಗ್ನ (ಪಿಕೆಎಲ್) ತಾಂತ್ರಿಕ ನಿರ್ದೇಶಕರಾಗಿರುವ ಇ. ಪ್ರಸಾದ್ ರಾವ್. ಕಳೆದ 4 ದಶಕಗಳಿಂದಲೂಅಂತಾರಾಷ್ಟ್ರೀಯ ಕಬಡ್ಡಿ ಫೆಡರೇಷನ್ ಜತೆಗೂಡಿ ಕಬಡ್ಡಿ ಕ್ರೀಡೆಯ ಜನಪ್ರಿಯತೆ ಶ್ರಮಿಸುತ್ತಿರುವ ಕಬಡ್ಡಿ ರಾವ್ ಖ್ಯಾತಿಯ ಅವರು, ಜೈಪುರದಲ್ಲಿ ನಡೆದ rivalryweekನಲ್ಲಿ ಜಿಯೋ ಸ್ಟಾರ್ ಆಯೋಜಿಸಿದ್ದ ಸಂವಾದದಲ್ಲಿ ಮಾತನಾಡಿದರು. ಕಬಡ್ಡಿ ಕೆಲ ವರ್ಷಗಳ ಹಿಂದೆ ಕೇವಲ ದೈಹಿಕ ಬಲ ಹೊಂದಿರುವ ಕ್ರೀಡೆ ಆಗಿತ್ತು. ಆದರೆ ಇಂದು ಕ್ರೀಡೆಯೊಳಗೆ ತಂತ್ರಜ್ಞಾನ ಹಾಗೂ ವಿಜ್ಞಾನದ ಪ್ರವೇಶದಿಂದ ಮೌಲ್ಯ ಹೆಚ್ಚಿದೆ. ಪ್ರೇಕರಿಗೆ ಮನರಂಜನೆಯ ಜತೆಗೆ ಸ್ಪರ್ಧಾತ್ಮಕತೆ ಉಳಿಸಿಕೊಳ್ಳುವ ದೃಷ್ಟಿಯಿಂದ ಲೀಗ್ನ ಸ್ವರೂಪದಲ್ಲಿ ಬದಲಾವಣೆ ಮಾಡಲಾಗಿದೆ. ಪ್ಲೇಆಫ್ಗೆ ಸೀಮಿತವಾಗಿದ್ದ ಟೈಬ್ರೇಕರ್, ಗೋಲ್ಡನ್ ರೈಡ್ ನಿಯಮಗಳು ಲೀಗ್ ಹಂತಕ್ಕೆ ಪರಿಚಯಿಸಿದ್ದರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಜತೆಗೆ ಐದಕ್ಕೂ ಹೆಚ್ಚು ಪಂದ್ಯಗಳ ಫಲಿತಾಂಶ ಟೈಬ್ರೇಕರ್ನಲ್ಲಿ ನಿರ್ಧಾರವಾಗಿದೆ ಎಂದು ಮಾಹಿತಿ ನೀಡಿದರು.
ಎಲ್ಲ ತಂಡಗಳ ನಡುವೆ ಆರೋಗ್ಯಕರ ಪೈಪೋಟಿ ಹೆಚ್ಚಿಸುವ ಉದ್ದೇಶದಿಂದ ಈ ಬಾರಿ ಪ್ಲೇಆಫ್ನ ಸ್ವರೂಪ ಬದಲಾವಣೆ ನಡೆಸಲಾಗಿದೆ. ಈಗಾಗಲೇ ರಾಜ್ಯದ ಕೆಲ ಟೂರ್ನಿಗಳಲ್ಲಿ ಈ ನಿಯಮ ಬಳಕೆಯಲ್ಲಿದೆ. ಮುಂದಿನ ದಿನಗಳಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಈ ನಿಯಮ ಸೇರ್ಪಡೆ ಆಗಬಹುದು. ಕಬಡ್ಡಿಯಲ್ಲಿ ಮಾತ್ರ ಎರಡೂ ತಂಡಗಳಿಗೆ ಅಂಕ ಗಳಿಸಲು ಅವಕಾಶವಿದೆ. ಅದು ಈ ಆಟದ ವಿಶೇಷ ಎಂದು ಪ್ರಸಾದ್ರಾವ್ ಆತ್ಮವಿಶ್ವಾಸ ವ್ಯಕ್ತಪಡಿಸಿದರು.
ಎಂಟು ಭಾಷೆಗಳಲ್ಲಿ ಪ್ರಸಾರ : ಐಪಿಎಲ್ ನಂತರ ಅತಿಹೆಚ್ಚು ಭಾರತೀಯ ವೀಕ್ಷಕರನ್ನು ಹೊಂದಿರುವ ಲೀಗ್ ಎಂದರೆ ಪ್ರೊ ಕಬಡ್ಡಿ. ಈ ಬಾರಿ ಒಟ್ಟು 8 ಭಾಷೆಗಳಲ್ಲಿ ಪ್ರಸಾರವಾಗುತ್ತಿದ್ದು, ಲೀಗ್ ಯಶಸ್ಸಿನಲ್ಲಿ ಪ್ರಾದೇಶಿಕ ಭಾಷೆಗಳ ಕೊಡುಗೆ ದೊಡ್ಡದು ಎಂದು JioStar Viewership and Monetisation Initi ative, Head ಸಿದ್ದಾರ್ಥ್ ಶರ್ಮ ತಿಳಿಸಿದರು. ಇಂದಿನ ಎಐ ಯುಗದಲ್ಲಿ ಪ್ರೇಕ್ಷಕರಿಗೆ ಹೊಸ ಅನುಭವವನ್ನು ಕಲ್ಪಿಸುವುದು ಸವಾಲು ಈ ನಿಟ್ಟಿನಲ್ಲಿ ಜಿಯೋ ಸ್ಟಾರ್ ಅತ್ಯಾಧುನಿಕ ತಂತ್ರಾನವನ್ನು ಅಳವಡಿಸಿಕೊಂಡು ಹೊಸ ಪ್ರೇಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ ಎಂದರು. ಇಂಗ್ಲಿಷ್,ಹಿಂದಿ, ಕನ್ನಡ, ತಮಿಳು, ತೆಲುಗು, ಹರಿಯಾಣ, ಬಂಗಾಳ ಭಾಷೆಯಲ್ಲಿ ಪ್ರೊ ಕಬಡ್ಡಿ ನೇರಪ್ರಸಾರ ಕಾಣಲಿದೆ.