ಕ್ರೀಡೆ

ಗೌಫ್ ನಿರ್ಗಮನ, ಸಬಲೆಂಕಾ ಮುನ್ನಡೆ: ಡಬಲ್ಸ್‌ನಲ್ಲಿ ಬೋಪಣ್ಣಗೆ ನಿರಾಸೆ

ನ್ಯೂಯಾರ್ಕ್: ಮಹಿಳಾ ಸಿಂಗಲ್ಸ್ ಹಾಲಿ ಚಾಂಪಿಯನ್ ಕೋಕೋ ಗೌಫ್ ಯುಎಸ್ ಓಪನ್ ಟೆನಿಸ್ ಟೂರ್ನಿಯ 16ರ ಘಟ್ಟದಲ್ಲಿ ನಿರ್ಗಮನ ಕಂಡಿದ್ದಾರೆ. ಇದರೊಂದಿಗೆ ಈ ಬಾರಿಯ ಟೂರ್ನಿಯಲ್ಲಿ ಪುರುಷರ ಹಾಗೂ ಮಹಿಳೆಯರ ವಿಭಾಗದಲ್ಲಿ ನೂತನ ಚಾಂಪಿಯನ್ ಉದಯಿಸುವುದು ಖಾತ್ರಿ ಎನಿಸಿದೆ. ವಿಶ್ವ ನಂ.2 ಅರಿನಾ ಸಬಲೆಂಕಾ, ಅಮೆರಿಕದ ಎಮ್ಮಾ ನವೋರಾ, ಸ್ಪೇನ್‌ನ ಪೌಲಾ ಬಡೋಸಾ, ಒಲಿಂಪಿಕ್ಸ್ ಚಿನ್ನದ ಪದಕ ವಿಜೇತೆ ಝೆಂಗ್ ಕ್ವಿನೆನ್ ಕ್ವಾರ್ಟರ್‌ೈನಲ್‌ಗೇರಿದ್ದಾರೆ. ಪುರುಷರ ವಿಭಾಗದಲ್ಲಿ ಅಮೆರಿಕದ ಟೇಲರ್ ಫ್ರಿಟ್ಜ್, ಫ್ರಾನ್ಸಿಸ್ ಟಿಯಾಫೋ, ಜರ್ಮನಿಯ ಅಲೆಕ್ಸಾಂಡರ್ ಜ್ವೆರೇವ್, ಬಲ್ಗೇರಿಯಾದ ಗ್ರಿಗೋರ್ ಡಿಮಿಟ್ರೊವ್ ಎಂಟರ ಘಟ್ಟಕ್ಕೇರಿದ್ದಾರೆ.

ಟೂರ್ನಿಯ 7ನೇ ದಿನವಾದ ಭಾನುವಾರ ರಾತ್ರಿ ನಡೆದ ಮಹಿಳಾ ಸಿಂಗಲ್ಸ್‌ನ 4ನೇ ಸುತ್ತಿನ ಪಂದ್ಯದಲ್ಲಿ 3ನೇ ಶ್ರೇಯಾಂಕಿತೆ ಕೋಕೋ ಗ್ೌ 3-6, 6-4, 3-6ರಿಂದ ದೇಶಬಾಂಧವೆ ಎಮ್ಮಾ ನವೋರಾ ಎದುರು ಪರಾಭವಗೊಂಡರು. ಮೊದಲ ಸೆಟ್ ಹಿನ್ನಡೆಯ ಬಳಿಕ ಎರಡನೇ ಸೆಟ್‌ನಲ್ಲಿ ಮೇಲುಗೈ ಸಾಧಿಸಿದ ಗೌಫ್ ನಿರ್ಣಾಯಕ ಮೂರನೇ ಸೆಟ್‌ನಲ್ಲಿ ಪ್ರಶಸ್ತಿ ಉಳಿಸಿಕೊಳ್ಳುವ ಓಟ ಮುಂದುವರಿಸಲು ವಿಲರಾದರು. 2 ಗಂಟೆ 12 ನಿಮಿಷಗಳ ಹೋರಾಟದಲ್ಲಿ ನವೋರಾ ಗೆಲುವು ಒಲಿಸಿಕೊಂಡು ಮೊದಲ ಬಾರಿಗೆ ಯುಎಸ್ ಕ್ವಾರ್ಟರ್‌ೈನಲ್ ಅರ್ಹತೆ ಪಡೆದರು. ವಿಂಬಲ್ಡನ್ ಟೂರ್ನಿಯ 4ನೇ ಸುತ್ತಿನಲ್ಲೂ ನವೋರಾ, ಗ್ೌರನ್ನು ಮಣಿಸಿದ್ದರು.

ಹಾಲಿ ರನ್ನರ್ ಅಪ್ ಅರಿನಾ ಸಬಲೆಂಕಾ 6-2, 6-4 ನೇರ ಸೆಟ್‌ಗಳಿಂದ ಬೆಲ್ಜಿಯಂನ ಎಲಿಸ್ ಮೆರ್ಟೆನ್ಸ್ ಎದುರು ಸುಲಭ ಗೆಲುವು ದಾಖಲಿಸಿದರು. ಇದರೊಂದಿಗೆ ಸತತ 4ನೇ ವರ್ಷವೂ ಸಬಲೆಂಕಾ ಎಂಟರ ಘಟ್ಟಕ್ಕೇರಿದ ಸಾಧನೆ ಮಾಡಿದರು. 2016ರ ಬಳಿಕ ಈ ಸಾಧನೆ ಮಾಡಿದ ಮೊದಲ ಆಟಾಗರ್ತಿ ಎನಿಸಿದರು. ಸೆರೇನಾ ವಿಲಿಯಮ್ಸನ್ ಹಿಂದಿನ ಸಾಧಕಿ. ಸಬಲೆಂಕಾ ಹಾಲಿ ವರ್ಷ ಆಸ್ಟ್ರೇಲಿಯನ್ ಓಪನ್ ಪ್ರಶಸ್ತಿ ಜಯಿಸಿದ್ದಾರೆ.

ಪ್ಯಾರಿಸ್ ಒಲಿಂಪಿಕ್ಸ್ ೈನಲ್‌ನ ಮರುಪಂದ್ಯ ಎನಿಸಿದ್ದ ಪಂದ್ಯದಲ್ಲಿ 7ನೇ ಶ್ರೇಯಾಂಕಿತೆ ಝೆಂಗ್ ಕ್ವಿನೆನ್ 7-6,4-6, 6-2 ರಿಂದ ರಜತ ವಿಜೇತೆ ಡೊನ್ನಾ ವೆಕಿಕ್ ಅವರನ್ನು ಮಣಿಸಿ ಯಶಸ್ವಿ ಓಟ ಮುಂದುವರಿಸಿದರು.

ಸಬಲೆಂಕಾ-ಕ್ವಿನೆನ್ ನಡುವಿನ ಪಂದ್ಯ ಆಸ್ಟ್ರೇಲಿಯನ್ ಓಪನ್ ೈನಲ್ ಪುನರಾವರ್ತನೆ ಎನಿಸಲಿದೆ. ಸ್ಪೇನ್‌ನ ಪೌಲಾ ಬಡೋಸಾ 6-1, 6-2 ರಿಂದ ಚೀನಾದ ಯಾನ್ ವಾಂಗ್ ಎದುರು ಸುಲಭ ಗೆಲುವು ದಾಖಲಿಸಿದರು. ಬಡೋಸಾ ಪಾಲಿಗೆ ಇದು ಎರಡನೇ ಗ್ರಾಂಡ್ ಸ್ಲಾಂ ಕ್ವಾರ್ಟರ್‌ೈನಲ್ ಆಗಿದೆ.

ಡಬಲ್ಸ್‌ನಲ್ಲಿ ಬೋಪಣ್ಣಗೆ ನಿರಾಸೆ: ಭಾರತದ ರೋಹನ್ ಬೋಪಣ್ಣ ಹಾಗೂ ಆಸ್ಟ್ರೇಲಿಯಾದ ಮ್ಯಾಥ್ಯೂ ಎಬ್ಡೆನ್ ಜೋಡಿ ಪುರುಷರ ಡಬಲ್ಸ್‌ನ ಕ್ವಾರ್ಟರ್‌ೈನಲ್‌ನಲ್ಲಿ ಸೋಲು ಅನುಭವಿಸಿದೆ. 2ನೇ ಶ್ರೇಯಾಂಕಿತ ಬೋಪಣ್ಣ-ಎಬ್ಡೆನ್ 1-6,5-7 ರಿಂದ 16ನೇ ಶ್ರೇಯಾಂಕಿತ ಅರ್ಜೆಂಟೀನಾದ ಮಾಕ್ಸಿಮೊ ಗೊನ್ಜಾಲೊ-ಆಂಡ್ರೆಸ್ ಮೊಲ್ಟಿನಿ ಎದುರು ಮುಗ್ಗರಿಸಿದರು. ಈಗಾಗಲೆ ಡೇವಿಸ್ ಕಪ್‌ನಿಂದ ನಿವೃತ್ತಿ ಹೇಳಿರುವ ಬೋಪಣ್ಣ, 2025ರ ಆಸ್ಟ್ರೇಲಿಯನ್ ಓಪನ್‌ನಲ್ಲಿ ಪ್ರಶಸ್ತಿ ಉಳಿಸಿಕೊಳ್ಳಲು ಕಣಕ್ಕಿಳಿಯಬೇಕಿದೆ. ಆದರೆ ಮಿಶ್ರ ಡಬಲ್ಸ್‌ನಲ್ಲಿ ಹೋರಾಟ ಜೀವಂತವಿರಿಸಿರುವ ಬೋಪಣ್ಣಗೆ ಮುಂದಿನ ಸುತ್ತಿನಲ್ಲಿ ಎಬ್ಡೆನ್ ಜೋಡಿ ಎದುರಾಗಲಿದೆ.

ರುಡ್, ರುಬ್ಲೆವ್ ಔಟ್: ಪುರುಷರ ವಿಭಾಗದಲ್ಲಿ 6ನೇ ಶ್ರೇಯಾಂಕಿತ ರಷ್ಯಾದ ಆಂಡ್ರೆ ರುಬ್ಲೆವ್‌ಗೆ 3-6, 6-7, 6-1,6-3, 3-6 ಐದು ಸೆಟ್‌ಗಳ ಸುದೀರ್ಘ ಹೋರಾಟದಲ್ಲಿ ಗ್ರಿಗೋರ್ ಡಿಮಿಟ್ರೋವ್ ಎದುರು ಆಘಾತ ಕಂಡರು. 4ನೇ ಶ್ರೇಯಾಂಕಿತ ಜ್ವೆರೇವ್ 3-6, 6-1, 6-2, 6-2 ರಿಂದ ಅಮೆರಿಕದ ಬ್ರಾಂಡನ್ ನಕಾಶಿಮಾ ಎದುರು 2 ಗಂಟೆ 36 ನಿಮಿಷಗಳ ಹೋರಾಟದಲ್ಲಿ ಗೆಲುವು ದಕ್ಕಿಸಿಕೊಂಡರು. ಹಾಲಿ ಚಾಂಪಿಯನ್ ನೊವಾಕ್ ಜೋಕೊವಿಕ್‌ಗೆ ಸೋಲುಣಿಸಿದ್ದ ಆಸ್ಟ್ರೇಲಿಯಾದ ಅಲೆಕ್ಸಿ ಪಾಪಿರಿನ್ 4-6, 6-7, 6-2, 3-6 ರಿಂದ ಅಮೆರಿಕದ ್ರಾನ್ಸಿಸ್ ಟಿಯಾಪೋ ಎದುರು ಪರಾಭವಗೊಂಡರೆ, 8ನೇ ಶ್ರೇಯಾಂಕಿತ ನಾರ್ವೆಯ ಕ್ಯಾಸ್ಪರ್ ರುಡ್ 6-3, 4-6, 3-6, 2-6 ರಿಂದ ಅಮೆರಿಕದ ಟೇಲರ್ ಫ್ರಿಟ್ಜ್ ಎದುರು ಮುಗ್ಗರಿಸಿ ಟೂರ್ನಿಯಿಂದ ಹೊರಬಿದ್ದರು.