ಪಲ್ಲೆಕಿಲೆ: ಸರ್ವಾಂಗೀಣ ನಿರ್ವಹಣೆಯೊಂದಿಗೆ ಸರಣಿ ವಶಪಡಿಸಿಕೊಂಡಿರುವ ಟಿ20 ವಿಶ್ವ ಚಾಂಪಿಯನ್ ಭಾರತ ತಂಡ ಇದೀಗ ಕ್ಲೀನ್‌ಸ್ವೀಪ್ ಸಾಧಿಸುವ ತವಕದಲ್ಲಿದೆ. ಆತಿಥೇಯ ಶ್ರೀಲಂಕಾ ವಿರುದ್ಧ ಮಂಗಳವಾರ ಮೂರನೇ ಹಾಗೂ ಅಂತಿಮ ಟಿ20 ಪಂದ್ಯ ನಡೆಯಲಿದೆ. ಭರ್ಜರಿ ಆರಂಭ ಕಂಡಿರುವ ನಾಯಕ ಸೂರ್ಯಕುಮಾರ್ ಹಾಗೂ ಕೋಚ್ ಗೌತಮ್ ಗಂಭೀರ್ ಜೋಡಿ ಲಯ ಕಾಯ್ದುಕೊಳ್ಳುವ ನಿರೀಕ್ಷೆಯಿದ್ದು, ಪಂದ್ಯಕ್ಕೆ ಮಳೆ ಭೀತಿ ಎದುರಾಗಿದೆ.
ಭಾನುವಾರ ನಡೆದ ಮಳೆಬಾಧಿತ ಪಂದ್ಯದಲ್ಲಿ 7 ವಿಕೆಟ್‌ಗಳ ಗೆಲುವಿನೊಂದಿಗೆ ಸರಣಿ ವಶಪಡಿಸಿಕೊಂಡಿರುವ ಟೀಮ್ ಇಂಡಿಯಾ ಭರ್ಜರಿ ಲಯದಲ್ಲಿದೆ. ರೋಹಿತ್ ಶರ್ಮ, ವಿರಾಟ್ ಕೊಹ್ಲಿ ಹಾಗೂ ಆಲ್ರೌಂಡರ್ ರವೀಂದ್ರ ಜಡೇಜಾ ಸ್ಥಾನ ತುಂಬಬಲ್ಲ ಆಟಗಾರರ ಪ್ರಯೋಗ ಲ ನೀಡಿದೆ. ಯುವ ವೇಗದ ಬೌಲಿಂಗ್ ಬಳಗ ಮತ್ತು ಅನನುಭವಿ ಅಗ್ರ ಕ್ರಮಾಂಕದ ನಡುವೆಯೂ ಭಾರತ ತಂಡ ಕೊನೇ ಪಂದ್ಯಕ್ಕೆ ಮುನ್ನವೇ ಸರಣಿ ವಶಪಡಿಸಿಕೊಂಡಿದೆ. ಇದೀಗ ಔಪಚಾರಿಕ ಪಂದ್ಯದಲ್ಲಿ ಬೆಂಚ್ ಸಾಮರ್ಥ್ಯ ಪರೀಕ್ಷಿಸುವ ಸವಾಲು ಭಾರತ ತಂಡದ ಮುಂದಿದೆ.
ಮೊದಲ ಪಂದ್ಯದಲ್ಲಿ ಬ್ಯಾಟರ್‌ಗಳು ಅಬ್ಬರಿಸಿದರೆ, 2ನೇ ಪಂದ್ಯದಲ್ಲಿ ಸಂಘಟಿತ ದಾಳಿಯೊಂದಿಗೆ ಬೌಲರ್‌ಗಳು ಮಿಂಚಿದರು. ಯಶಸ್ವಿ ಜೈಸ್ವಾಲ್ ಬಿರುಸಿನ ಆರಂಭ ಒದಗಿಸುವ ಮೂಲಕ ರೋಹಿತ್ ಶರ್ಮ ಸ್ಥಾನ ತುಂಬಲು ಸಿದ್ಧ ಎಂಬುದನ್ನು ತೋರಿಸಿದರೆ, ಶುಭಮಾನ್ ಗಿಲ್ ಸಹ ಗಂಭೀರ್ ಅಡಿಯಲ್ಲಿ ಹೊಸ ರೀತಿಯಲ್ಲಿ ಕಾಣಿಸಿಕೊಂಡಿದ್ದಾರೆ. ಸೂರ್ಯಕುಮಾರ್ ಯಾದವ್ ನಾಯಕನ ಜವಾಬ್ದಾರಿಯುತ ಆಟದ ಮೂಲಕ ಗಮನ ಸೆಳೆದಿದ್ದಾರೆ. ಜತೆಗೆ ಬೌಲರ್‌ಗಳ ಬದಲಾವಣೆಯಲ್ಲೂ ಯಶಸ್ಸು ಸಾಧಿಸಿದ್ದಾರೆ. ಭಾರತದ ಮಧ್ಯಮ ಕ್ರಮಾಂಕ ಬ್ಯಾಟರ್‌ಗಳಿಗೆ ನೈಜ ಸವಾಲು ಸರಣಿಯಲ್ಲಿ ಎದುರಾಗಿಲ್ಲ. ರಿಯಾನ್ ಪರಾಗ್ ತಂಡದ ಎಕ್ಸ್ ್ಯಾಕ್ಟರ್ ಎಂದಿರುವ ಸೂರ್ಯ, ಅವರನ್ನು ಸರಣಿಯಲ್ಲಿ ಆಲ್ರೌಂಡರ್ ಆಗಿ ಬಳಸಿಕೊಂಡು, 5ನೇ ಬೌಲರ್ ಹಾರ್ದಿಕ್ ಪಾಂಡ್ಯ ಒತ್ತಡವನ್ನು ಕೊಂಚ ತಗ್ಗಿಸಿದ್ದಾರೆ. ಇದರೊಂದಿಗೆ ಯುವ ಆಟಗಾರರಿಗೆ ಅವಕಾಶ ನೀಡಲು ಗಂಭೀರ್ ಒತ್ತು ನೀಡಿದ್ದಾರೆ. ಅಕ್ಷರ್ ಪಟೇಲ್ ಹಾಗೂ ಸ್ಪಿನ್ನರ್ ರವಿ ಬಿಷ್ಣೋಯಿ ಸ್ಪಿನ್ನರ್‌ಗಳ ಸ್ಥಾನವನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ. ಬೌಲಿಂಗ್‌ನಲ್ಲಿ ಮೊಹಮದ್ ಸಿರಾಜ್ ನೀರಸ ನಿರ್ವಹಣೆ ತಂಡಕ್ಕೆ ಹಿನ್ನಡೆ ಎನಿಸಿದೆ.
ಇನ್ನು ಕ್ಲೀನ್‌ಸ್ವೀಪ್ ಭೀತಿ ಎದುರಿಸುತ್ತಿರುವ ಶ್ರೀಲಂಕಾ ಗೆಲುವಿನೊಂದಿಗೆ ಏಕದಿನ ಸರಣಿಗೆ ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳುವ ತವಕದಲ್ಲಿದೆ. ಎರಡು ಪಂದ್ಯಗಳಲ್ಲಿ ಮಧ್ಯಮ ಕ್ರಮಾಂಕ ಬ್ಯಾಟರ್‌ಗಳ ವೈಲ್ಯ ಸೋಲಿಗೆ ಪ್ರಮುಖ ಕಾರಣ ಎನಿಸಿದೆ.
ಆರಂಭ: ರಾತ್ರಿ 7.00
ನೇರಪ್ರಸಾರ: ಸೋನಿ ಸ್ಪೋರ್ಟ್ಸ್
ಮಳೆ ಭೀತಿ
ಪಲ್ಲೆಕಿಲೆಯ ಹೊಸ ಪಿಚ್‌ನಲ್ಲಿ ಮೂರನೇ ಪಂದ್ಯ ನಡೆಯಲಿದ್ದು, ಹಿಂದಿನ ಎರಡು ಪಂದ್ಯಗಳಿಗಿಂತ ವಿಭಿನ್ನ ಎನ್ನಲಾಗಿದೆ. ಜತೆಗೆ ಎರಡನೇ ಪಂದ್ಯಕ್ಕೆ ಅಡ್ಡಿಪಡಿಸಿದ್ದ ತುಂತುರು ಮಳೆ ಮೂರನೇ ಪಂದ್ಯಕ್ಕೂ ಅಡಚಣೆಯಾಗುವ ಸಾಧ್ಯತೆಗಳಿವೆ.