ಕ್ರೀಡೆ

ಕ್ಷಮೆಯಾಚಿಸಿದ ಕ್ರಿಸ್ ಗೇಲ್

ಕಿಂಗ್​ಸ್ಟನ್: ಮಾಜಿ ಆಟಗಾರ ರಾಮ್ರೇಶ್ ಸರ್ವಾನ್​ರನ್ನು ಕೋವಿಡ್-19ಕ್ಕೆ ಹೋಲಿಸಿ ವಿವಾದಕ್ಕೀಡಾಗಿದ್ದ ಸ್ಪೋಟಕ ಬ್ಯಾಟ್ಸ್​ಮನ್ ಕ್ರಿಸ್ ಗೇಲ್, ತಮ್ಮ ಹೇಳಿಕೆ ಬದ್ಧವಾಗಿದ್ದರೂ ವಿವಾದ ಮುಂದುವರಿಸಲು ಇಚ್ಛಿಸದೆ ಕ್ಷಮೆ ಕೋರಿದ್ದಾರೆ. ಪ್ರಸಕ್ತ ವರ್ಷ ಕೆರಿಬಿಯನ್ ಕ್ರಿಕೆಟ್ ಲೀಗ್​ನಲ್ಲಿ (ಸಿಪಿಎಲ್) ಆಡಲು ಜಮೈಕಾ ತಲ್ಲಾವಾಸ್ ತಂಡದೊಂದಿಗೆ ಒಪ್ಪಂದ ಮಾಡಿಕೊಂಡಿದ್ದರು. ಆದರೆ, ತಂಡದಿಂದ ಹೊರಬೀಳಲು ಸರ್ವಾನ್ ಕಾರಣ, ಅವರು ಕರೊನಾ ವೈರಸ್​ಗಿಂತ ಸರ್ವಾನ್ ಡೇಂಜರ್ ಎಂದು ಗೇಲ್ ಆರೋಪಿಸಿದ್ದರು.

ಈ ಕುರಿತು ಸಿಪಿಎಲ್ ತಾಂತ್ರಿಕ ಸಮಿತಿ ಮುಖ್ಯಸ್ಥ ಪಿಜೆ ಪ್ಯಾಟರ್​ಸನ್ ನೋಟಿಸ್ ಜಾರಿ ಮಾಡಿದ್ದರು. ನಿಮ್ಮ ಹೇಳಿಕೆಯಿಂದ ವೆಸ್ಟ್ ಇಂಡೀಸ್ ಕ್ರಿಕೆಟ್​ಗೆ ಹಾನಿವುಂಟಾಗಿದೆ ಎಂದು ಹೇಳಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ಗೇಲ್, ನಾನು ಮಾಡಿದ ವಿಡಿಯೋ ಒಂದು ಉದ್ದೇಶವಿದೆ. ನಾನು ಜಮೈಕಾ ತಂಡದಲ್ಲಿ ಮುಂದುವರಿಯಬೇಕು ಎಂಬ ಆಸೆಯಿತ್ತು. ಆದರೆ, ಏಕಾಏಕಿ ಫ್ರಾಂಚೈಸಿ ನನ್ನನ್ನು ತಂಡದಿಂದ ಕೈಬಿಟ್ಟರು. ಅಭಿಮಾನಿಗಳಿಗೆ ನನ್ನ ನೋವನ್ನು ತಿಳಿಸುವುದೇ ಇದರ ಉದ್ದೇಶ. ನನ್ನ ಹೇಳಿಕೆ ನನಗೆ ಅರ್ಥವಾಗಿದ್ದು, ವಿವಾದವನ್ನು ಇಲ್ಲಿಗೆ ಬಿಡಲು ಇಚ್ಛಿಸುತ್ತೇನೆ’ ಎಂದಿದ್ದಾರೆ.