Champions Trophy: ಪ್ರಸಕ್ತ ದುಬೈ ಮತ್ತು ಪಾಕಿಸ್ತಾನ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಿಂದ ಆತಿಥೇಯರು ಹೊರಬಿದ್ದಿದ್ದೇ ತಡ ತಂಡದಲ್ಲಿ ಎಲ್ಲವೂ ಬದಲಾಗಿ ಹೋಗಿದೆ.
ಇದನ್ನೂ ಓದಿ: ಈ 3 ರಾಶಿಯವರು ತಮಗೆ ದ್ರೋಹ ಮಾಡಿದವರನ್ನು ಎಂದಿಗೂ ಕ್ಷಮಿಸುವುದಿಲ್ಲ! ನಿಮ್ಮ ರಾಶಿ ಯಾವುದು? Zodiac Signs
ಆತಿಥೇಯರಾಗಿ ಚಾಂಪಿಯನ್ಸ್ ಟ್ರೋಫಿಗೆ ಲಗ್ಗೆಯಿಟ್ಟ ಪಾಕಿಸ್ತಾನ, ಆಡಿದ ಎರಡೇ ಪಂದ್ಯಗಳಲ್ಲಿ ಅತಿಥಿಯಾಗಿ ಟೂರ್ನಿಯಿಂದ ಅಧಿಕೃತವಾಗಿ ಹೊರಬಿದ್ದಿತು. ಟೀಮ್ ಇಂಡಿಯಾ ವಿರುದ್ಧ 6 ವಿಕೆಟ್ಗಳ ಅಂತರದಿಂದ ಹೀನಾಯ ಸೋಲು ಅನುಭವಿಸಿದ ಪಾಕ್, ತಮ್ಮ ಅಭಿಮಾನಿಗಳಿಂದಲೇ ವ್ಯಾಪಕ ಛೀಮಾರಿ, ವ್ಯಂಗ್ಯಗಳಿಗೆ ಗುರಿಯಾಯಿತು. ತವರಿನಲ್ಲೇ ಭಾರೀ ಮುಖಭಂಗ ಉಂಟಾದರೂ ಬುದ್ದಿ ಕಲಿಯದ ಪಾಕಿಸ್ತಾನ, ಭಾರತವನ್ನು ದೂಷಿಸಿ, ದೂರುವ ಮೂಲಕ ತನ್ನ ನರಿಬುದ್ಧಿ, ನಾಲಿಗೆ ಹರಿಬಿಡುವ ಚಾಳಿಯನ್ನು ಎಂದಿನಂತೆ ಮುಂದುವರಿಸಿದೆ.
ಮೊನ್ನೆಯಷ್ಟೇ ಪಾಕಿಸ್ತಾನ ಹಿರಿಯ ಕ್ರಿಕೆಟಿಗರಾದ ಇಂಜಮಾಮ್ ಉಲ್-ಹಕ್, ಸಕ್ಲೈನ್ ಮುಸ್ತಾಕ್ ಟೀಮ್ ಇಂಡಿಯಾ ವಿರುದ್ಧ ತೀವ್ರ ಕಿಡಿಕಾರಿದ್ದಲ್ಲದೇ ತಮ್ಮ ತಂಡದ ವಿರುದ್ಧ 10 ಟಿ20. 10 ಏಕದಿನ ಮತ್ತು 10 ಟೆಸ್ಟ್ ಪಂದ್ಯಗಳನ್ನಾಡಿ ಗೆದ್ದು ತೋರಿಸಿ ಎಂಬ ಸವಾಲು ಹಾಕಿದ್ದಾರೆ. ಇದರ ಬೆನ್ನಲ್ಲೇ ಪಾಕಿಸ್ತಾನ ಮಾಜಿ ಹಿರಿಯ ಕ್ರಿಕೆಟಿಗರು ಮತ್ತು ಕೋಚ್ಗಳು ಸಹ ನಾಲಿಗೆ ಹರಿಬಿಟ್ಟಿದ್ದಾರೆ. ಟೀಮ್ ಇಂಡಿಯಾವನ್ನು ಟೀಕಿಸುವ ಭರದಲ್ಲಿ ತಮ್ಮದೇ ತಂಡವನ್ನು ಕೆಳಗೆ ಹಾಕಿ ಮಾತನಾಡುತ್ತಿದ್ದಾರೆ.
ಇದನ್ನೂ ಓದಿ: ಆಕೆ ನನ್ನಿಂದ ಅದನ್ನು ಮುಚ್ಚಿಟ್ಟಳು… ಚೆನ್ನೈನಿಂದ ಮಂಗಳೂರಿಗೆ ಬಂದು ಸಾವಿಗೆ ಶರಣಾದ ಯುಪಿ ವ್ಯಕ್ತಿ! UP Man
ಭಾರತ ಎದುರು ಹೀನಾಯವಾಗಿ ಸೋತ ನಂತರ ಪಾಕಿಸ್ತಾನ ತಂಡದಲ್ಲಿ ಸದ್ಯ ಯಾವುದೂ ಸರಿಯಿಲ್ಲ ಎನ್ನುವುದು ಒಬ್ಬೊಬ್ಬರ ಮಾತುಗಳಿಂದಲೇ ಸ್ಪಷ್ಟವಾಗುತ್ತಿದೆ. ತಮ್ಮದೇ ಕ್ರಿಕೆಟ್ ತಂಡ ಮತ್ತು ಆಟಗಾರರನ್ನು ಟೀಕಿಸಿ, ಅಸಮಾಧಾನ ಹೊರಹಾಕುವ ಮೂಲಕ ತಮ್ಮ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಈ ಸಾಲಿನಲ್ಲಿ ಪಾಕ್ನ ಮಾಜಿ ಕೋಚ್ ಇಂತಿಕಾಬ್ ಅಲಾಂ ಮಾತನಾಡಿ, "ಬಾಬರ್ ಅಜಮ್ರನ್ನು ಬೇಕಂತಲೇ ಆರಂಭಿಕ ಬ್ಯಾಟರ್ ಆಗಿ ಟೀಮ್ ಮ್ಯಾನೇಜ್ಮೆಂಟ್ ಕಳುಹಿಸಿತು" ಎಂದು ಆರೋಪಿಸಿದ್ದಾರೆ.
"ಬಾಬರ್ನ ಏಕೆ ಓಪನರ್ ಆಗಿ ಕಳಿಸುತ್ತೀರಿ? ಅದು ಅವರ ಸ್ಥಾನವೇ ಅಲ್ಲ. ಯಾವುದೇ ಬ್ಯಾಟಿಂಗ್ ತಂಡಕ್ಕೆ 3ನೇ ಸ್ಥಾನ ಬೆನ್ನೆಲುಬಾಗಿದೆ ಮತ್ತು ನಿಮ್ಮ ಅತ್ಯುತ್ತಮ ಆಟಗಾರ ಆ ಸ್ಥಾನವನ್ನು ಪಡೆದುಕೊಳ್ಳಬೇಕು. ಮ್ಯಾನೇಜ್ಮೆಂಟ್ ಈ ವಿಷಯದಲ್ಲಿ ಎಡವಿದೆ. ಬಾಬರ್ಗೆ ಮೂರನೇ ಕ್ರಮಾಂಕದಲ್ಲಿ ಆಡಲು ಬಿಡಬೇಕಿತ್ತು. ಘನ ಇನ್ನಿಂಗ್ಸ್ ಆಡಲು ಮತ್ತು ಶತಕದ ಗುರಿಯನ್ನು ಹೊಂದಲು ಸೂಚಿಸಬೇಕಾಗಿತ್ತು. ಅಸಲಿಗೆ ಅವರು ಶತಕ ಗಳಿಸಿದ್ದರೆ, ಇನ್ನೊಬ್ಬ ಬ್ಯಾಟ್ಸ್‌ಮನ್ 50ರಿಂದ 60 ರನ್‌ಗಳನ್ನು ನೀಡಿದ್ದರೆ, ಭಾರತ ಎದುರು ತಂಡವು ಸುಮಾರು 300 ರನ್‌ಗಳ ಸ್ಪರ್ಧಾತ್ಮಕ ಮೊತ್ತವನ್ನು ಸುಲಭವಾಗಿ ಗಳಿಸಬಹುದಿತ್ತು" ಅಲಂ ಹೇಳಿದ್ದಾರೆ,(ಏಜೆನ್ಸೀಸ್).