ಕ್ರೀಡೆ

Champions Tropy 2025: ವಿರಾಟ್​ ಕೊಹ್ಲಿ-ಬಾಬರ್​ ಅಜಮ್ ನಡುವಿನ​ ಹೃದಯಸ್ಪರ್ಶಿ ಕ್ಷಣ ವೈರಲ್​

Champions Tropy 2025: ಕ್ರಿಕೆಟ್​ ಜಗತ್ತಿನಲ್ಲಿ ಭಾರತ-ಪಾಕಿಸ್ತಾನ ನಡುವಿನ ಪಂದ್ಯವನ್ನು ಅತ್ಯಂತ ನಿರೀಕ್ಷಿತ ಪಂದ್ಯಗಳಲ್ಲೊಂದು ಪರಿಗಣಿಸಲಾಗಿದೆ. ಇದೀಗ ಐಸಿಸಿ ಚಾಂಪಿಯನ್ಸ್​ ಟ್ರೋಫಿ 2025ರ ಅಂಥತ್ತೊಂದು ರೋಚಕ ಪಂದ್ಯ ಆರಂಭವಾಗಿದೆ. ಈ ಪಂದ್ಯದಲ್ಲಿ ಟೀಮ್​ ಇಂಡಿಯಾ ಸ್ಟಾರ್​ ಬ್ಯಾಟರ್​ ವಿರಾಟ್​ ಕೊಹ್ಲಿ ಮತ್ತು ಪಾಕಿಸ್ತಾನ ಆಟಗಾರ ಬಾಬರ್​ ಅಜಮ್​ ನಡುವೆ ಹೃದಯಸ್ಪರ್ಶಿ ಕ್ಷಣವೊಂದಕ್ಕ ಸಾಕ್ಷಿಯಾಗಿತು.

ಹೌದು, 10 ವರ್ಷಗಳ ಅಧಿಕ ಕಾಲ ದ್ವಿಪಕ್ಷೀಯ ಸರಣಿಯ ಎರಡೂ ತಂಡಗಳು ನಡುವೆ ನಡೆದೆಯಿಲ್ಲ. ಇನ್ನು ಎರಡು ತಂಡಗಳು ಎದುರಿಸುತ್ತಿರುವ ಸಮಯ ಎಂದರೆ ಅದು, ಅಂತರಾಷ್ಟ್ರೀಯ ಪಂದ್ಯದ ವೇಳೆ ಮಾತ್ರ. ಈಗ ಎರಡು ತಂಡಗಳಿಗೆ ಕಾಲ ಕೂಡಿಬಂದಿದ್ದು, ಅದು ಚಾಂಪಿಯನ್ಸ್​ ಟ್ರೋಫಿ 2025ರ ಪಂದ್ಯ. ಟಾಸ್​ ಗೆದ್ದ ಪಾಕಿಸ್ತಾನ ಬ್ಯಾಟಿಂಗ್​ ಆಯ್ಕೆ ಮಾಡಿಕೊಂಡಿದೆ.

ಕೊಹ್ಲಿ- ಬಾಬರ್​ ಹೃದಯಸ್ಪರ್ಶಿ ಕ್ಷಣ

ಇನ್ನು ಭಾನುವಾರ ನಡೆದ ಚಾಂಪಿಯನ್ಸ್​ ಟ್ರೋಫಿ ಪಂದ್ಯದಲ್ಲಿ ಭಾರತ ವಿರುದ್ಧ ಟಾಸ್​ ಗೆದ್ದ ಪಾಕಿಸ್ತಾನ ನಾಯಕ ಮೊಹಮ್ಮದ್​ ರಿಜ್ವಾನ್​ ಬ್ಯಾಟಿಂಗ್​ ಆಯ್ಕೆ ಮಾಡಿಕೊಂಡರು. ಬ್ಯಾಟಿಂಗ್​ ವೇಳೆ ಕಣಕ್ಕಿಳಿದಿದ್ದ ಸಂದರ್ಭದಲ್ಲಿ ಹೃದಯಸ್ಪರ್ಶಿ ಕ್ಷಣವನ್ನು ಹಂಚಿಕೊಂಡರು. ಪಾಕಿಸ್ತಾನ ಬ್ಯಾಟಿಂಗ್ ಮಾಡಲು ಬಂದಾಗ, ವಿರಾಟ್ ಮತ್ತು ಬಾಬರ್ ಪಂದ್ಯ ಪ್ರಾರಂಭವಾಗುವ ಮೊದಲು ಭಾರತದ ಸ್ಟಾರ್ ಬ್ಯಾಟರ್ ಬಾಬರ್ ಅವರ ಬೆನ್ನು ತಟ್ಟುವುದರೊಂದಿಗೆ ಸಣ್ಣ ಮಾತುಕತೆ ನಡೆಸಿದರು. ಇದರಿಂದ ಎರಡು ತಂಡಗಳ ಅಭಿಮಾನಿಗಳಲ್ಲಿ ಸಾಕಷ್ಟು ಪೈಪೋಟಿ ಇದ್ದರೂ ಈ ಕ್ಷಣಕ್ಕೆ ಸಂತೋಷಗೊಂಡಿದ್ದಾರೆ.

ಇನ್ನು ಹಾಲಿ ಚಾಂಪಿಯನ್ಸ್​ ಪಾಕಿಸ್ತಾನ ತಂಡವು ಉದ್ಘಾಟನಾ ಪಂದ್ಯದಲ್ಲಿ ನ್ಯೂಜಿಲ್ಯಾಂಡ್​ ವಿರುದ್ಧ ಸೋತ್ತಿದ್ದು, ಟೀಮ್​ ಇಂಡಿಯಾದ ವಿರುದ್ಧ ಪಂದ್ಯದ ಮಾಡು ಇಲ್ಲವೆ ಮಡಿ ಪಂದ್ಯವಾಗಿದೆ. ಈ ಮ್ಯಾಚ್​ ಸೋತರೆ ಟ್ರೋಫಿಯ ಸರಣಿಯಿಂದ ಹೊರ ಬಿಳಲಿದೆ. (ಏಜೆನ್ಸೀಸ್​)