ಕ್ರೀಡೆ

ಚಾಂಪಿಯನ್ಸ್​​ ಟ್ರೋಫಿ 2025; ಟೀಮ್​ ಇಂಡಿಯಾ ತಂಡ ಶೀಘ್ರ ಪ್ರಕಟ; ಈಗಾಗಲೇ ಪ್ರಕಟಗೊಂಡಿರುವ ತಂಡಗಳಿವು...

ನವದೆಹಲಿ: ಐಸಿಸಿ ಚಾಂಪಿಯನ್​ ಟ್ರೋಫಿ 2025 ಮತ್ತು ಇಂಗ್ಲೆಂಡ್​ ವಿರುದ್ಧ ನಡೆಯುವ ಮೂರು ಏಕದಿನ ಪಂದ್ಯಗಳ 15 ಆಟಗಾರ ಇರುವ ಬಲಿಷ್ಠ ಟೀಮ್​ ಇಂಡಿಯಾದ ಪಟ್ಟಿಯನ್ನು(ತಂಡ)ಶೀಘ್ರವೇ ಬಿಡುಗಡೆಗೊಳ್ಳಲಿದೆ ಎಂದು ವರದಿಯಾಗಿದೆ.

ಈಗಾಗಲೇ ಜ.22ರಂದು ಇಂಗ್ಲೆಂಡ್​ ವಿರುದ್ಧ ನಡೆಯಲಿರುವ ಟಿ-20 ತಂಡವನ್ನು ಜ.11ರಂದು ಬಿಸಿಸಿಐ ಪ್ರಕಟಿಸಿದೆ. ಭಾರತದ 360 ಸೂರ್ಯಕುಮಾರ್ ಯಾದವ್​(ಕ್ಯಾಪ್ಟನ್) ನೇತೃತ್ವದಲ್ಲಿ ನಡೆಯುಲಿರುವ ಟಿ-20 ಪಂದ್ಯಗಳು ಭಾರತದಲ್ಲಿ ನಡೆಯಲಿದೆ. ಅಲ್ಲದೆ, ಏಕದಿನ ಪಂದ್ಯಗಳು ಕೂಡ ಫೆ.2ರಿಂದ ಪ್ರಾರಂಭವಾಗಲಿದೆ.

ಇದೀಗ ಎಲ್ಲರ ಕಣ್ಣು ಚಾಂಪಿಯನ್​ ಟ್ರೋಫಿ ಮೇಲೆ ಬಿದ್ದಿದೆ. ಮುಂದಿನ ಫೆ.19ರಂದು ಚಾಂಪಿಯನ್​​ ಟ್ರೋಫಿ ಆರಂಭಗೊಳ್ಳಲಿದ್ದು, ಅದಾಗಲೇ ವಿವಿಧ ತಂಡಗಳ ಪಟ್ಟಿ ಪ್ರಕಟಗೊಂಡಿದೆ.ಇನ್ನೂ ಕೆಲ ತಂಡಗಳ ಕೂಡ ಶೀಘದ್ರದಲ್ಲಿ ತಂಡಗಳ ಆಯ್ಕೆ ಪಟ್ಟಿ ಬಿಡುಗಡೆಗೊಳ್ಳುವ ನೀರಿಕ್ಷೆ ಇದೆ.

ತಂಡ ಪ್ರಕಟಕ್ಕೆ ತಡ ಏಕೆ?

ಜನವರಿ 05ರಂದು ಮುಕ್ತಾಯಗೊಂಡ ಬಾರ್ಡರ್​-ಗವಾಸ್ಕರ್ ಟ್ರೋಫಿ ಟೆಸ್ಟ್​​ ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡುವ ಮೂಲಕ ಎಲ್ಲರ ಗಮನ ಸೆಳೆದಿದ್ದ ಟೀಮ್​ ಇಂಡಿಯಾದ ಸ್ಟಾರ್​ವೇಗಿ ಜಸ್ಪ್ರೀತ್​ ಬುಮ್ರಾ (Jasprit Bumrah) ಬೆನ್ನು ನೋವಿನ ಕಾರಣ ಪಂದ್ಯದ ಮಧ್ಯದಲ್ಲೇ ಮೈದಾನದಿಂದ ಹೊರ ನಡೆದಿದ್ದರು. ಸರಣಿ ಮುಗಿದ ಬೆನ್ನಲ್ಲೇ ಜಸ್ಪ್ರೀತ್​ ಬುಮ್ರಾ ಆರೋಗ್ಯದ ಕುರಿತಂತೆ ಒಂದೊಂದೆ ಮಾಹಿತಿ ಹೊರಬೀಳುತ್ತಿದ್ದು, ಚಾಂಪಿಯನ್ಸ್​ ಟ್ರೋಫಿಯಲ್ಲಿ ಇದು ತಂಡದ ಮೇಲೆ ಪರಿಣಾಮ ಬೀಳಬಹುದು ಎಂದು ಹೇಳಲಾಗಿದೆ.  ಹೀಗಾಗಿ, ತಂಡ ಪ್ರಕಟಣೆಗೆ ತಡವಾಗಿದೆ ಎಂದು ಮೂಲಗಳು ತಿಳಿಸಿವೆ.

ಚಾಂಪಿಯನ್​  ಟ್ರೋಫಿಗೆ ಈಗಾಗಲೇ ಪ್ರಕಟಗೊಂಡ ತಂಡಗಳು

ಗ್ರೂಪ್​ 'ಎ' ತಂಡಗಳುನ್ಯೂಜಿಲ್ಯಾಂಡ್​: ಮಿಚೆಲ್ ಸ್ಯಾಂಟ್ನರ್ (ನಾಯಕ), ಮೈಕೆಲ್ ಬ್ರೇಸ್‌ವೆಲ್, ಮಾರ್ಕ್ ಚಾಪ್‌ಮನ್, ಡೆವೊನ್ ಕಾನ್ವೇ, ಲಾಕಿ ಫರ್ಗುಸನ್, ಮ್ಯಾಟ್ ಹೆನ್ರಿ, ಟಾಮ್ ಲ್ಯಾಥಮ್, ಡ್ಯಾರಿಲ್ ಮಿಚೆಲ್, ವಿಲ್ ಒ'ರೂರ್ಕ್, ಗ್ಲೆನ್ ಫಿಲಿಪ್ಸ್, ರಾಚಿನ್ ರವೀಂದ್ರ, ಬೆನ್ ಸಿಯರ್ಸ್, ನಾಥನ್ ಸ್ಮಿತ್, ಕೇನ್ ವಿಲಿಯಮ್ಸನ್, ವಿಲ್ ಯಂಗ್.

ಬಾಂಗ್ಲಾದೇಶ: ನಜ್ಮುಲ್ ಹೊಸೈನ್ (ನಾಯಕ), ತಂಜಿದ್ ಹಸನ್ ತಮೀಮ್, ಸೌಮ್ಯ ಸರ್ಕಾರ್, ಪರ್ವೇಜ್ ಹೊಸೈನ್ ಎಮನ್, ಮುಷ್ಫಿಕರ್ ರಹೀಮ್, ತೌಹಿದ್ ಹೃದಯ್, ಮಹ್ಮದುಲ್ಲಾ, ಮೆಹಿದಿ ಹಸನ್, ಜಾಕರ್ ಅಲಿ ಅನಿಕ್, ರಿಷದ್ ಹೊಸೈನ್, ನಸುಮ್ ಅಹ್ಮದ್, ತಂಜಿಮ್ ಹಸನ್ ಸಕಿಬ್, ನಹಿದ್ ರಾಣಾ, ತಸ್ಕಿನ್ ಅಹ್ಮದ್, ಮುಸ್ತಾಫಿಜುರ್ ರೆಹಮಾನ್

ಗುಂಪು ಎ ನಲ್ಲಿರುವ ಭಾರತ ಮತ್ತು ಪಾಕಿಸ್ತಾನ ತಂಡಗಳ ಘೋಷಣೆ ಬಾಕಿ ಇದೆ.

ಇದನ್ನೂ ಓದಿ: ಹಸುಗಳ ಕೆಚ್ಚಲು ಕೊಯ್ದು, ಮಚ್ಚಿನಿಂದ ಹೊಡೆದು ಹಲ್ಲೆ; ಮೂಕಪ್ರಾಣಿಗಳ ರೋಧನೆ, ಚಾಮರಾಜಪೇಟೆಯಲ್ಲಿ ಬಿಗುವಿನ ವಾತಾವರಣಗುಂಪು 'ಬಿ' ತಂಡಗಳುಇಂಗ್ಲೆಂಡ್: ಜೋಸ್ ಬಟ್ಲರ್ (ನಾಯಕ), ಜೋಫ್ರಾ ಆರ್ಚರ್, ಗಸ್ ಅಟ್ಕಿನ್ಸನ್, ಜಾಕೋಬ್ ಬೆಥೆಲ್, ಹ್ಯಾರಿ ಬ್ರೂಕ್, ಬ್ರೈಡನ್ ಕಾರ್ಸೆ, ಬೆನ್ ಡಕೆಟ್, ಜೇಮೀ ಓವರ್ಟನ್, ಜೇಮೀ ಸ್ಮಿತ್, ಲಿಯಾಮ್ ಲಿವಿಂಗ್ಸ್ಟೋನ್, ಆದಿಲ್ ರಶೀದ್, ಜೋ ರೂಟ್, ಸಕಿಬ್ ಮಹಮೂದ್, ಫಿಲ್ ಸಾಲ್ಟ್, ಮಾರ್ಕ್ ವುಡ್

ಗುಂಪು ಬಿ ನಲ್ಲಿರುವ ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ, ಅಫ್ಘಾನಿಸ್ತಾನ ತಂಡಗಳ ಘೋಷಣೆ ಬಾಕಿ ಇದೆ.(ಏಜೆನ್ಸೀಸ್​)