ಕ್ರೀಡೆ

ಮದ್ವೆಯಾಗಿ 19 ತಿಂಗಳಿಗೆ ದೂರ ಆಗಿದ್ದರು ಚಹಲ್, ಧನಶ್ರೀ! ವಿಚ್ಛೇದನ ಅರ್ಜಿಯಲ್ಲಿದೆ ಶಾಕಿಂಗ್ ವಿಷಯ Chahal and Dhanashree Verma divorce

Chahal and Dhanashree Verma divorce:   ಭಾರತದ ಸ್ಟಾರ್ ಸ್ಪಿನ್ನರ್ ಯುಜ್ವೇಂದ್ರ ಚಾಹಲ್ ಮತ್ತು ಅವರ ಪತ್ನಿ ಧನಶ್ರೀ ವರ್ಮಾ  ದೂರವಾಗಿದ್ದಾರೆ ಎನ್ನುವ ಸುದ್ದಿ  ಇತ್ತು. ಈ ಜೋಡಿ ಮಾರ್ಚ್ 20 ರೊಳಗೆ ಅವರ ವಿಚ್ಛೇದನವನ್ನು ಪಡೆದುಕೊಂಡು ದೂರವಾಗಿದ್ದಾರೆ. ಆದರೆ ಕೋರ್ಟ್​ಗೆ ಸಲ್ಲಿಸಲಾದ  ವಿಚ್ಛೇದನ ಅರ್ಜಿಯಲ್ಲಿ ಈ ಜೋಡಿಯ ಕುರಿತಾಗಿ ಶಾಕಿಂಗ್​​ ಸಂಗತಿಯೊಂದು ಬಯಲಾಗಿದೆ.

ಚಾಹಲ್ ಮತ್ತು ಧನಶ್ರೀ ಫೆಬ್ರವರಿ 5 ರಂದು ಪರಸ್ಪರ ಒಪ್ಪಿಗೆಯೊಂದಿಗೆ ಕೌಟುಂಬಿಕ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದರು.  ಕುಟುಂಬ ನ್ಯಾಯಾಲಯವು ಆರು ತಿಂಗಳ ಕೂಲಿಂಗ್-ಆಫ್ ಅವಧಿಯನ್ನು ಮನ್ನಾ ಮಾಡಲು ನಿರಾಕರಿಸಿತು. ಅದಾದ ನಂತರ, ಇಬ್ಬರೂ ಕುಟುಂಬ ನ್ಯಾಯಾಲಯದ ತೀರ್ಪನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸಿದರು.  ಹಿಂದೂ ವಿವಾಹ ಕಾಯ್ದೆಯ ಸೆಕ್ಷನ್ 13B ವಿಚ್ಛೇದನಕ್ಕೆ ಆರು ತಿಂಗಳ ಕೂಲಿಂಗ್-ಆಫ್ ಅವಧಿಯನ್ನು ಬಯಸುತ್ತದೆ, ಇದು ದಂಪತಿ ಒಟ್ಟಿಗೆ ವಾಸಿಸುವ ಸಾಧ್ಯತೆಗಳನ್ನು ಅನ್ವೇಷಿಸಲು ಅನುವು ಮಾಡಿಕೊಡುತ್ತದೆ. ವಿವಾದವನ್ನು ಪರಿಹರಿಸಲು ಯಾವುದೇ ಸಾಧ್ಯತೆ ಇಲ್ಲದಿದ್ದರೆ, ಕೂಲಿಂಗ್ ಆಫ್ ಅವಧಿಯನ್ನು ಮನ್ನಾ ಮಾಡಬಹುದು.ನ್ಯಾಯಮೂರ್ತಿ ಮಾಧವ್ ಅವರು ಕೂಲಿಂಗ್ ಅವಧಿಯನ್ನು ರದ್ದುಗೊಳಿಸಿದರು, ಇಬ್ಬರೂ ಸುಮಾರು ಎರಡೂವರೆ ವರ್ಷಗಳಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ ಮತ್ತು ಜೀವನಾಂಶಕ್ಕೆ ಸಂಬಂಧಿಸಿದಂತೆ ಇಬ್ಬರ ನಡುವೆ ಒಪ್ಪಿಕೊಂಡ ನಿಯಮಗಳು ಮತ್ತು ಷರತ್ತುಗಳಿಗೆ ಬದ್ಧರಾಗಿದ್ದಾರೆ ಎಂದು ಗಮನಿಸಿದರು. ಕುಟುಂಬ ನ್ಯಾಯಾಲಯದ ಪ್ರಕಾರ, ಚಾಹಲ್ ಧನಶ್ರೀಗೆ 4.75 ಕೋಟಿ ರೂ. ನೀಡಿದ್ದಾರೆ ಎನ್ನಲಾಗಿದೆ. ಮಾರ್ಚ್ 20ರಂದು ಅಧಿಕೃತವಾಗಿ ವಿಚ್ಛೇದನ ಪಡೆದರು.

ಅರ್ಜಿಯಲ್ಲಿ ಒಂದು ಶಾಕಿಂಗ್ ವಿಚಾರ ರಿವೀಲ್ ಆಗಿದೆ. ಈ ದಂಪತಿ 2020ರ ಡಿಸೆಂಬರ್​ನಲ್ಲಿ ವಿವಾಹ ಆಯಿತು. ಜೂನ್ 2022ರಂದು ಇವರು ಬೇರೆ ಆದರು! ಹೌದು, ಚಾಹಲ್ ಹಾಗೂ ಧನಶ್ರೀ ಈ ಮದುವೆ ನಡೆದ ಕೇವಲ 19 ತಿಂಗಳಿಗೆ ದೂರ ಆದರು. ಈ ಬಗ್ಗೆ ಅರ್ಜಿಯಲ್ಲಿ ಉಲ್ಲೇಖ ಮಾಡಲಾಗಿದೆ.

 2022ರ ಜೂನ್ ಬಳಿಕ ಅನೇಕ ಬಾರಿ ಧನಶ್ರೀ ಹಾಗೂ ಚಾಹಲ್ ಅವರು ಒಟ್ಟಿಗೆ ಕಾಣಿಸಿಕೊಂಡರು. ಬೇರೆ ಆದ ಬಳಿಕವೂ ಇವರು ಒಟ್ಟಿಗೆ ಕಾಣಿಸಿಕೊಂಡು ಪೋಸ್​ ಕೊಟ್ಟಿದ್ದು ಇದೆ.  ಈ ಮೊದಲು ಧನಶ್ರೀ ಅವರು ತಮ್ಮ ಹೆಸರಿನ ಮುಂದೆ ಚಾಹಲ್ ಎಂದು ಸೇರಿಸಿಕೊಂಡಿದ್ದರು. ಆದರೆ, 2023ರಲ್ಲಿ ಇವರು ಇದನ್ನು ತೆಗೆದೇ ಬಿಟ್ಟರು.

ಯುಜುವೇಂದ್ರ ಚಹಲ್ ಪಂಜಾಬ್ ಕಿಂಗ್ಸ್ ಪರವಾಗಿ ಐಪಿಎಲ್ 2025 ಆಡೋಕೆ ರೆಡಿಯಾಗಿದ್ದಾರೆ. ಧನಶ್ರೀ ತನ್ನ ಕೆಲಸದಲ್ಲಿ ಬ್ಯುಸಿ ಆಗಿದ್ದಾರೆ. ಅವರ ಹೊಸ ಹಾಡು ಮಾರ್ಚ್ 20ಕ್ಕೆ ರಿಲೀಸ್ ಆಗಿದೆ.