ಲಾಹೋರ್: ಆಲ್ರೌಂಡರ್ ಸಲ್ಮಾನ್ ಅಲಿ ಅಘಾ ಪಾಕಿಸ್ತಾನ ಟಿ20 ತಂಡದ ನೂತನ ನಾಯಕನಾಗಿ ನೇಮಕಗೊಂಡಿದ್ದಾರೆ. ಮಾರ್ಚ್16ರಂದು ಆರಂಭವಾಗಲಿರುವ ನ್ಯೂಜಿಲೆಂಡ್ ವಿರುದ್ಧದ ಸೀಮಿತ ಓವರ್‌ಗಳ ಸರಣಿಗೆ ಮಂಗಳವಾರ ಪ್ರವಾಸಿ ಪಾಕಿಸ್ತಾನ ತಂಡ ಪ್ರಕಟಿಸಲಾಗಿದ್ದು, ಶಾದಾಬ್ ಖಾನ್ ಟಿ20 ತಂಡದ ಉಪನಾಯಕನಾಗಿ ನೇಮಕಗೊಂಡಿದ್ದಾರೆ. ವಿಕೆಟ್ ಕೀಪರ್-ಬ್ಯಾಟರ್ ಮೊಹಮದ್ ರಿಜ್ವಾನ್ ಹಾಗೂ ಬಾಬರ್ ಅಜಮ್ ಅವರನ್ನು ಟಿ20 ತಂಡದಿಂದ ಕೈಬಿಡಲಾಗಿದೆ.
ಟ್ರೋಫಿಯ ವೈಲ್ಯದ ನಡುವೆಯೂ ಹಲವು ಆಟಗಾರರು ಏಕದಿನ ತಂಡದಲ್ಲಿ ಸ್ಥಾನ ಉಳಿಸಿಕೊಂಡಿದ್ದು, ರಿಜ್ವಾನ್ ಸಾರಥ್ಯ ವಹಿಸಿದ್ದಾರೆ. ಶಹೀನ್ ಷಾ ಅಫ್ರಿದಿ ಹಾಗೂ ಹ್ಯಾರಿಸ್ ರ್ೌ ಸ್ಥಾನ ಉಳಿಸಿಕೊಳ್ಳುವಲ್ಲಿ ವಿಲರಾಗಿದ್ದಾರೆ. ಮುಂದಿನ ವರ್ಷದ ಟಿ20 ವಿಶ್ವಕಪ್ ದೃಷ್ಟಿಯಿಂದ ಹೊಸ ಆಟಗಾರರಿಗೆ ಚುಟುಕು ಕ್ರಿಕೆಟ್ ತಂಡದಲ್ಲಿ ಅವಕಾಶ ಕಲ್ಪಿಸಲಾಗಿದೆ.
ಅಕೀಬ್ ಹಂಗಾಮಿ ಕೋಚ್: ಮಾಜಿ ವೇಗಿ ಅಕೀಬ್ ಜಾವೇದ್ ಪಾಕಿಸ್ತಾನ ವೈಟ್‌ಬಾಲ್ ತಂಡದ ಹಂಗಾಮಿ ಕೋಚ್ ಆಗಿ ಮುಂದುವರಿಯಲಿದ್ದು, ಮಾಜಿ ನಾಯಕ ಮೊಹಮದ್ ಯೂಸ್ು ಬ್ಯಾಟಿಂಗ್ ಕೋಚ್ ಆಗಿ ಕಾರ್ಯನಿರ್ವಹಿಸಲಿದ್ದಾರೆ.
ಅನುಭವಿ ಶಾದಾಬ್ ಖಾನ್ ಉಪನಾಯಕನಾಗಿ ತಂಡಕ್ಕೆ ಪುನರಾಗಮನ ಕಂಡಿದ್ದಾರೆ. ಚಾಂಪಿಯನ್ಸ್ ಟ್ರೋಫಿ ಬಳಿಕ ಪಾಕಿಸ್ತಾನ ಹಾಗೂ ನ್ಯೂಜಿಲೆಂಡ್ ತಂಡಗಳು ಐದು ಟಿ20, ಮೂರು ಏಕದಿನ ಪಂದ್ಯಗಳ ಸರಣಿ ಆಡಲಿವೆ. ಈಗಾಗಲೆ ಪಿಸಿಬಿ ಹೊಸ ಕೋಚ್‌ನ ಹುಡುಕಾಟದಲ್ಲಿದ್ದು, ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ ಮೂರನೇ ಆವೃತ್ತಿಯಿಂದ ನೂತನ ಕೋಚ್ ಕಾರ್ಯನಿರ್ವಹಿಸಲಿದ್ದಾರೆ ಎನ್ನಲಾಗಿದೆ.
ಟಿ20 ತಂಡ: ಸಲ್ಮಾನ್ ಆಘಾ (ನಾಯಕ), ಶಾದಬ್ ಖಾನ್ (ಉಪನಾಯಕ), ಅಬ್ದುಲ್ ಸಮದ್, ಅಬ್ರಾರ್ ಅಹ್ಮದ್, ಹ್ಯಾರಿಸ್ ರ್ೌ, ಹಸನ್ ನವಾಜ್, ಜಹನ್‌ದಾದ್ ಖಾನ್, ಖುಷ್‌ದಿಲ್ ಷಾ, ಮುಹಮದ್ ಅಬ್ಬಾಸ್ ಅಫ್ರಿದಿ, ಮುಹಮದ್ ಅಲಿ, ಮುಹಮದ್ ಹ್ಯಾರಿಸ್, ಮುಹಮದ್ ರ್ಇಾನ್ ಖಾನ್, ಒಮೈರ್ ಬಿನ್ ಯೂಸ್ು, ಶಹೀನ್ ಷಾ ಅಫ್ರಿದಿ, ಸುಫಿಯಾನ್,ಉಸ್ಮಾನ್ ಖಾನ್.