ಕ್ರೀಡೆ

ಟೀಮ್ ಇಂಡಿಯಾಗೆ ಬಿಗ್ ಶಾಕ್​! ಏಷ್ಯಾ ಕಪ್​ಗೆ ಸ್ಟಾರ್ ವೇಗಿ ಅಲಭ್ಯ: ವರದಿ | Asia Cup 2025

Asia Cup 2025: ಪ್ರಸಕ್ತ ನಡೆಯುತ್ತಿರುವ ಇಂಗ್ಲೆಂಡ್​ ವಿರುದ್ಧದ ಐದು ಪಂದ್ಯಗಳ ಟೆಸ್ಟ್​ ಸರಣಿಯಲ್ಲಿ ಒಂದೆರೆಡು ಪಂದ್ಯಗಳನ್ನು ಆಡಿರುವ ಟೀಮ್ ಇಂಡಿಯಾ ಸ್ಟಾರ್ ವೇಗಿ ಜಸ್ಪ್ರೀತ್ ಬುಮ್ರಾ, ಇದೀಗ ಮುಂಬರುವ ಏಷ್ಯಾ ಕಪ್​ನಿಂದ ಹೊರಗುಳಿಯಲಿದ್ದಾರೆ ಎಂದು ಕ್ರಿಕೆಟ್ ವರದಿಗಳು ಉಲ್ಲೇಖಿಸಿವೆ.

ಕೆಲಸದ ಹೊರೆಯಿಂದಾಗಿ ಇಂಗ್ಲೆಂಡ್ ವಿರುದ್ಧದ ಅಂತಿಮ ಟೆಸ್ಟ್ ಪಂದ್ಯದಿಂದ ಹೊರಬಂದಿರುವ ಬುಮ್ರಾ, ಬಿಸಿಸಿಐ ಆದೇಶದ ಮೇರೆಗೆ ಬುಮ್ರಾ ಸುಮಾರು ಒಂದು ತಿಂಗಳ ವಿಶ್ರಾಂತಿ ಪಡೆಯಲಿದ್ದಾರೆ. ನಂತರ, ಸೆಪ್ಟೆಂಬರ್‌ನಲ್ಲಿ ಅಖಾಡಕ್ಕಿಳಿಯುವ ಸಾಧ್ಯತೆಯಿದೆ. ಆದಾಗ್ಯೂ, ಬಿಸಿಸಿಐ ಆಯ್ಕೆಗಾರರು ಮತ್ತು ತಂಡದ ಆಡಳಿತ ಮಂಡಳಿ ಬುಮ್ರಾ ಕುರಿತು ಮತ್ತೊಂದು ಶಾಕಿಂಗ್ ನಿರ್ಧಾರವನ್ನು ಕೈಗೊಂಡಿದೆ.

ಏಷ್ಯಾ ಕಪ್ 2025ರಲ್ಲಿ (ಟಿ20 ಫಾರ್ಮೆಟ್​) ಟೀಮ್ ಇಂಡಿಯಾ ಪರ ಜಸ್ಪ್ರಿತ್​ ಬುಮ್ರಾರನ್ನು ಆಡಿಸಬೇಕೇ ಅಥವಾ ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಸರಣಿಗೆ ಆಯ್ಕೆ ಮಾಡಬೇಕೇ ಎಂಬ ಗೊಂದಲ ಆಯ್ಕೆಗಾರರಿಗೆ ಕಾಡುತ್ತಿದೆ. ಹೀಗಾಗಿ ಈ ಬಗ್ಗೆ ಇನ್ನೂ ಖಚಿತವಾಗಿಲ್ಲ. ಸೆಪ್ಟೆಂಬರ್ 9ರಿಂದ ಏಷ್ಯಾ ಕಪ್ ಪ್ರಾರಂಭವಾಗಿ ಸೆಪ್ಟೆಂಬರ್ 29ರಂದು ಕೊನೆಗೊಳ್ಳಲಿದೆ. ಅದಾದ ನಾಲ್ಕು ದಿನಗಳಲ್ಲೇ, ಭಾರತ ತಂಡ ಅಕ್ಟೋಬರ್ 2ರಿಂದ 6 ರವರೆಗೆ ಅಹಮದಾಬಾದ್‌ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಟೆಸ್ಟ್ ಆಡಲಿದೆ.

ಪ್ರಸ್ತುತ, ಬುಮ್ರಾ ಸಂಪೂರ್ಣವಾಗಿ ಫಿಟ್ ಆಗಿಲ್ಲ. ಅವರು ಇಂಗ್ಲೆಂಡ್ ಪ್ರವಾಸದಲ್ಲಿ ಕೇವಲ ಮೂರು ಟೆಸ್ಟ್ ಪಂದ್ಯಗಳನ್ನು ಮಾತ್ರ ಆಡಿದ್ದಾರೆ. ಈಗ ಇದು ಆಯ್ಕೆಗಾರರು ಮತ್ತು ಟೀಮ್ ಮ್ಯಾನೇಜ್​ಮೆಂಟ್​ಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಇತ್ತೀಚೆಗೆ, ಬಿಸಿಸಿಐನ ಹಿರಿಯ ಅಧಿಕಾರಿಯೊಬ್ಬರು ಇದೇ ವಿಷಯಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ್ದು, ಕೆಲವು ಪ್ರಮುಖ ವಿಚಾರಗಳನ್ನು ಹಂಚಿಕೊಂಡಿದ್ದಾರೆ.

"ಬುಮ್ರಾ ಏಷ್ಯಾ ಕಪ್‌ನಲ್ಲಿ ಆಡಲಿದ್ದಾರೆ. ಅದೂ ಭಾರತ ಫೈನಲ್ ತಲುಪಿದರೆ ಮಾತ್ರ. ಇದೇನಾದರೂ ಸಂಭವಿಸಿದರೆ, ಅವರು ಅಹಮದಾಬಾದ್‌ನಲ್ಲಿ ನಡೆಯಲಿರುವ ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಿಂದ ಹೊರಗುಳಿಯುತ್ತಾರೆ. ಏಕೆಂದರೆ, ತಮ್ಮ ಕೆಲಸದ ಹೊರೆಯನ್ನು ನಿರ್ವಹಿಸಲು ಬುಮ್ರಾಗೆ ಕಷ್ಟವಾಗಲಿದೆ. ಈಗ ಅವರನ್ನು ಏಷ್ಯಾ ಕಪ್‌ನಲ್ಲಿ ಆಡಿಸಬೇಕಾ ಅಥವಾ ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಸರಣಿಗೆ ಆಯ್ಕೆ ಮಾಡಬೇಕಾ ಎಂಬುದು ಆಯ್ಕೆಗಾರರ ಕೈಯಲ್ಲಿದೆ ಎಂದು ತಿಳಿಸಿದ್ದಾರೆ,(ಏಜೆನ್ಸೀಸ್).