ಕ್ರೀಡೆ

'ಪುರುಷ' ಎಂದೇ ಟೀಕಿಸುತ್ತಿದ್ದವರಿಗೆ ತಿರುಗೇಟು! ಒಲಿಂಪಿಕ್​ ಚಿನ್ನ ಗೆದ್ದ ಬೆನ್ನಲ್ಲೇ ಬದಲಾಯ್ತು ಬಾಕ್ಸರ್​ ಖೇಲಿಫ್​ ಲುಕ್​

ಪ್ಯಾರಿಸ್​: ಆ.01ರಂದು ನಡೆದ ಪ್ಯಾರಿಸ್​ ಒಲಿಂಪಿಕ್ಸ್​ 2024ರ ಪದಕದಾಟದಲ್ಲಿ ನಡೆದ ಮಹಿಳೆಯರ ಬಾಕ್ಸಿಂಗ್​ ಸ್ಪರ್ಧೆಯಲ್ಲಿ ದೊಡ್ಡ ವಿವಾದವೊಂದು ಭುಗಿಲೆದ್ದಿತ್ತು. ವುಮೆನ್ಸ್​​ ಬಾಕ್ಸಿಂಗ್​ ಸ್ಪರ್ಧೆಯಲ್ಲಿ ಇಟಾಲಿ ಮೂಲದ ಬಾಕ್ಸರ್ ಏಂಜಲೀನಾ ಕ್ಯಾರಿನಿ ತಮ್ಮ ಎದುರಾಳಿ ಅಲ್ಜೀರಿಯಾದ ಇಮಾನೆ ಖೆಲಿಫ್ ವಿರುದ್ಧದ ಕಾಳಗದಲ್ಲಿ 46 ಸೆಕೆಂಡ್​ಗೆ ಮ್ಯಾಚ್​ ತ್ಯಜಿಸಿ, ಹೊರಬಂದಿದ್ದರು. ನಾಲ್ಕು ರೌಂಡ್​ವರೆಗೂ ಹೋಗಬೇಕಿದ್ದ ಪಂದ್ಯವನ್ನು ಕೇವಲ 2ನೇ ಸುತ್ತಿಗೆ ಅಂತ್ಯಗೊಳಿಸಿದ ಏಂಜೆಲಾ, ಇಂತಹ ಸೋಲನ್ನು ನನ್ನಿಂದ ಒಪ್ಪಿಕೊಳ್ಳಲು ಅಸಾಧ್ಯ ಎಂದು ಆಟ ಅರ್ಧಕ್ಕೆ ಕೈಬಿಡುವ ಮೂಲಕ ದೊಡ್ಡ ವಿವಾದವನ್ನೇ ಹುಟ್ಟುಹಾಕಿದರು. ಈ ವಿಷಯ ಜಾಗತಿಕ ಮಟ್ಟದಲ್ಲಿಯೂ ಭಾರೀ ಚರ್ಚೆಗೆ ಗ್ರಾಸವಾಗಿತ್ತು.

ಅಸಲಿಗೆ ಅಲ್ಜೀರಿಯಾದ ಇಮಾನೆ ಖೇಲಿಫ್ ಮಹಿಳೆಯಲ್ಲ, ಪುರುಷ. 2023ರ ಒಲಿಂಪಿಕ್ಸ್​ನಲ್ಲಿ ಆಕೆ ಲಿಂಗ ಅರ್ಹತಾ ಪರೀಕ್ಷೆಯಲ್ಲಿ ವಿಫಲವಾಗಿದ್ದರು. ಹೀಗಿದ್ದಮೇಲೆ ಏಕೆ ಅವರನ್ನು ಮಹಿಳೆಯರ ಬಾಕ್ಸಿಂಗ್ ಸ್ಪರ್ಧೆಯಲ್ಲಿ ಆಡಲು ಅವಕಾಶ ಕೊಡಬೇಕಿತ್ತು? ಎಂದು ಅನೇಕ ಕ್ರೀಡಾಪಟುಗಳು ಖೇಲಿಫ್​ ವಿರುದ್ಧ ಕಿಡಿಕಾರಿದ್ದರು. ಇದಕ್ಕೆಲ್ಲಾ ಒಲಿಂಪಿಕ್ಸ್​ನಲ್ಲಿ ಅವಕಾಶ ಕೊಡಬಾರದು ಎಂಬ ಕೂಗುಗಳು ವ್ಯಾಪಕವಾಗಿ ಕೇಳಿಬಂದಿತ್ತು. ಇದಾದ ಬಳಿಕವೂ ಇಮಾನೆ ವಿರುದ್ಧ ಟೀಕೆಗಳು ಮುಂದುವರೆದಿತ್ತು. ಭಾರೀ ವಿವಾದಗಳ ನಡುವೆಯೂ ಬಾಕ್ಸಿಂಗ್​ ಫೈನಲ್​ ತಲುಪಿದ ಖೇಲಿಫ್ ಅಂತಿಮ ಕಾಳಗದಲ್ಲಿ ಚಿನ್ನ ಗೆದ್ದು, ಚಾಂಪಿಯನ್​​ ಆಗಿ ಮಿಂಚಿದ್ದಾರೆ.

ಒಲಿಂಪಿಕ್​ ಫೈನಲ್​ವರೆಗೂ ವಿವಾದ ಅಲೆಯಲ್ಲಿಯೇ ಸಿಲುಕಿದ್ದ ಇಮಾನೆ ಖೇಲಿಫ್​, ವ್ಯಾಪಕ ಟೀಕೆಗಳಿಂದ ತಮ್ಮ ಗುರಿಯನ್ನು ಕಳೆದುಕೊಳ್ಳದೆ ಮಹಿಳೆಯರ ವೆಲ್ಟರ್‌ವೇಟ್ ಫೈನಲ್​ ಪಂದ್ಯದಲ್ಲಿ ತಮ್ಮ ಎದುರಾಳಿ ಚೀನಾದ ಯಾಂಗ್ ಲಿಯು ಅವರನ್ನು ಮಣಿಸಿ, ಚಿನ್ನದ ಪದಕಕ್ಕೆ ಮುತ್ತಿಟ್ಟರು. ಚಿನ್ನದ ಪದಕ ಗೆದ್ದ ನಂತರ ಅಷ್ಟಾಗಿ ಎಲ್ಲಿಯೂ ಕಾಣಿಸಿಕೊಳ್ಳದ ಇಮಾನೆ, ಇದೀಗ ಹೊಸ ಪೋಸ್ಟ್​ವೊಂದನ್ನು ಹಂಚಿಕೊಂಡಿದ್ದು, ನೆಟ್ಟಿಗರು ಭಾರೀ ಅಚ್ಚರಿಗೆ ಒಳಗಾಗಿದ್ದಾರೆ. ಖೇಲಿಫ್​ ಅವರ ಈ ಹೊಸ ಲುಕ್​, ತಮ್ಮನ್ನು ಪುರುಷ ಎಂದು ಟೀಕಿಸುತ್ತಿದ್ದವರಿಗೆ ಖಡಕ್ ತಿರುಗೇಟು ಕೊಡಲೆಂದೇ ಹಾಕಿರುವುದು ಎಂಬುದು ಸ್ಪಷ್ಟವಾಗಿದೆ.

ಹೂವಿನ ವಸ್ತ್ರ ಮತ್ತು ಕಿವಿಯೋಲೆಗಳಿಂದ ಕಂಗೊಳಿಸುತ್ತಿರುವ ಇಮಾನೆ ಖೇಲಿಫ್​, ಮ್ಯಾಗಜೀನ್​ವೊಂದರ ಫೋಟೋಶೂಟ್​ಗಾಗಿ ಇಷ್ಟು ಚೆಂದವಾಗಿ ರೆಡಿಯಾಗಿರಬಹುದು ಎಂದು ಕೆಲವರು ಊಹಿಸಿದ್ದಾರೆ,(ಏಜೆನ್ಸೀಸ್).