ಕ್ರೀಡೆ

ಸೆಮಿಫೈನಲ್​ಗೂ ಮುನ್ನ ಒಲಿಂಪಿಕ್ಸ್​ನಲ್ಲಿ ಭಾರತ ಹಾಕಿ ತಂಡಕ್ಕೆ ಆಘಾತ; ಪ್ರಮುಖ ಆಟಗಾರನನ್ನು ನಿಷೇಧಿಸಿದ FIH

ಪ್ಯಾರಿಸ್​: ಪ್ರೇಮ ನಗರಿ ಪ್ಯಾರಿಸ್​ ಆತಿಥ್ಯದಲ್ಲಿ ನಡೆಯುತ್ತಿರುವ 33ನೇ ಆವೃತ್ತಿಯ ಒಲಿಂಪಿಕ್​ ಕ್ರೀಡಾಕೂಟದಲ್ಲಿ ಭಾರತ ಹಾಕಿ ತಂಡವು ತನ್ನ ಅಮೋಘ ಪ್ರದರ್ಶನದ ಮೂಲಕ ಸೆಮಿಫೈನಲ್​ ಪ್ರವೇಶಿಸಿದ್ದು, ಕ್ವಾರ್ಟರ್ ಫೈನಲ್‌ನಲ್ಲಿ ಗ್ರೇಟ್ ಬ್ರಿಟನ್ ವಿರುದ್ಧ ಭಾರತ ತಂಡ ಸೆಮಿಫೈನಲ್ ಪ್ರವೇಶಿಸಿದೆ.

ಸೆಮಿಫೈನಲ್​ ಪ್ರವೇಶಿಸಿದ ಖುಷಿಯಲ್ಲಿರುವಾಗಲೇ ಭಾರತ ತಂಡಕ್ಕೆ ಆಘಾತವೊಂದು ಎದುರಾಗಿದ್ದು,  ಅನುಭವಿ ಡಿಫೆಂಡರ್‌ ಅಮಿತ್‌ ರೋಹಿದಾಸ್‌ ಬ್ರಿಟನ್​ ಆಟಗಾರ ವಿಲಿಯಂ ಕಲ್ನಾನ್ ಅವರತ್ತ ಅಜಾಗೂಕತೆಯಿಂದ ಸ್ಟಿಕ್ ಎತ್ತಿದ್ದಕ್ಕೆ ರೆಡ್‌ಕಾರ್ಡ್‌ ಪಡೆದು ಹೊರ ನಡೆಯಬೇಕಾದ ಪರಿಸ್ಥಿತಿ ಬಂತು. ಎರಡನೇ ಕ್ವಾರ್ಟರ್‌ ಮಧ್ಯದಲ್ಲಿ ಇರುವಾಗ ಈ ಘಟನೆ ನಡೆಯಿತು.

ಅಜಾಗರೂಕತೆಯಿಂದ ನಡೆದುಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ FIH (International Hockey Federation) ಆಟದ ನೀತಿ ಸಂಹಿತೆ ಉಲ್ಲಂಘನೆ ಆರೋಪದ ಮೇಲೆ ಅಮಿತ್‌ ರೋಹಿದಾಸ್‌ ಅವರನ್ನು ಒಂದು ಪಂದ್ಯವಾಡದಂತೆ ನಿಷೇಧ ಹೇರಿದೆ. ಇದರಿಂದ ಜರ್ಮನಿ ವಿರುದ್ಧದ ಸೆಮಿಫೈನಲ್‌ನಲ್ಲಿ ಅಮಿತ್‌ ರೋಹಿದಾಸ್‌ ಆಡುವುದು ಅನುಮಾನ ಎಂದು ಹೇಳಲಾಗಿದೆ. ಅಮಿತ್‌ ರೋಹಿದಾಸ್‌ ಮೇಲೆ ನಿಷೇಧ ಹೇರಿರುವುದನ್ನು ಪ್ರಶ್ನಿಸಿ ಹಾಕಿ ಇಂಡಿಯಾ FIHಗೆ ಮೇಲ್ಮನವಿ ಸಲ್ಲಿಸಿದೆ.