ಹೈದರಾಬಾದ್: ಆರಂಭಿಕರಾದ ಟ್ರಾವಿಸ್ ಹೆಡ್ (89* ರನ್, 30 ಎಸೆತ, 8 ಬೌಂಡರಿ, 8 ಸಿಕ್ಸರ್) ಹಾಗೂ ಅಭಿಷೇಕ್ ಶರ್ಮ (75* ರನ್, 28 ಎಸೆತ, 8 ಬೌಂಡರಿ, 6 ಸಿಕ್ಸರ್) ಸ್ಫೋಟಕ ಬ್ಯಾಟಿಂಗ್ ಬಲದಿಂದ ಆತಿಥೇಯ ಸನ್‌ರೈಸರ್ಸ್ ಹೈದರಾಬಾದ್ ತಂಡ ಐಪಿಎಲ್-17ರಲ್ಲಿ ತನ್ನ 12ನೇ ಲೀಗ್ ಪಂದ್ಯದಲ್ಲಿ ಲಖನೌ ಸೂಪರ್‌ಜೈಂಟ್ಸ್ ಎದುರು 10 ವಿಕೆಟ್‌ಗಳಿಂದ ಭರ್ಜರಿ ಗೆಲುವು ದಾಖಲಿಸಿದೆ. ಇದರೊಂದಿಗೆ ಅಂಕಪಟ್ಟಿಯಲ್ಲಿ 3ನೇ ಸ್ಥಾನಕ್ಕೇರಿರುವ ಪ್ಯಾಟ್ ಕಮ್ಮಿನ್ಸ್ ಪಡೆ ಪ್ಲೇಆ್ ರೇಸ್‌ನಲ್ಲಿ ಬಲ ಹೆಚ್ಚಿಸಿಕೊಂಡಿದೆ. ಕೆಎಲ್ ರಾಹುಲ್ ಬಳಗದ ಮುಂದಿನ ಹಾದಿ ಕಠಿಣವೆನಿಸಿದೆ. ಈ ಲಿತಾಂಶದೊಂದಿಗೆ 5 ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ ಮೊದಲ ತಂಡವಾಗಿ ಟೂರ್ನಿಯ ಪ್ಲೇಆ್ ರೇಸ್‌ನಿಂದ ಅಧಿಕೃತವಾಗಿ ಹೊರಬಿದ್ದಿದೆ.
ಆರ್‌ಜಿಐ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್‌ಗೆ ಇಳಿದ ಲಖನೌ, ಯುವ ಬ್ಯಾಟರ್ ಆಯುಷ್ ಬಡೋನಿ (55 * ರನ್, 30 ರನ್, 9 ಎಸೆತ) ಹಾಗೂ ನಿಕೋಲಸ್ ಪೂರನ್ (48* ರನ್, 26 ಎಸೆತ, 6 ಬೌಂಡರಿ, 1 ಸಿಕ್ಸರ್) ದಿಟ್ಟ ಜತೆಯಾಟದ ನೆರವಿನಿಂದ 4 ವಿಕೆಟ್‌ಗೆ 165 ರನ್ ಪೇರಿಸಿತು. ಪ್ರತಿಯಾಗಿ ಟ್ರಾವಿಸ್ ಹೆಡ್- ಅಭಿಷೇಕ್ ಶರ್ಮ ಮೊದಲ ವಿಕೆಟ್‌ಗೆ ನಡೆಸಿದ ಭರ್ಜರಿ ಜತೆಯಾಟದ ನೆರವಿನಿಂದ ಸನ್‌ರೈಸರ್ಸ್ ಕೇವಲ 9.4 ಓವರ್‌ಗಳಲ್ಲೇ ವಿಕೆಟ್ ನಷ್ಟವಿಲ್ಲದೆ 167 ರನ್‌ಗಳಿಸಿ ಇನ್ನೂ 10.2 ಓವರ್ ಬಾಕಿ ಇರುವಂತೆಯೇ ಗೆಲುವಿನ ಕೇಕೆ ಹಾಕಿತು.
ಟ್ರಾವಿಸ್ ಹೆಡ್ ಹಾಗೂ ಅಭಿಷೇಕ್ ಆರಂಭದಿಂದಲೇ ಬಿರುಸಿನಾಟಕ್ಕಿಳಿದರು. ಪವರ್ ಪ್ಲೇನಲ್ಲಿ ಲಖನೌ ಬೌಲರ್‌ಗಳ ಪವರ್ ಕಸಿದ ಇವರಿಬ್ಬರು ಚೇಸಿಂಗ್‌ಗೆ ಸುಲಭಗೊಳಿಸಿದರು. ಲಖನೌ ಬ್ಯಾಟರ್‌ಗಳು ಪರದಾಡಿದ ಅಂಗಣದಲ್ಲಿ ಹೆಡ್-ಅಭಿಷೇಕ್ ಬೌಂಡರಿ-ಸಿಕ್ಸರ್‌ಗಳ ಮಳೆ ಹರಿಸಿದರು. ಲಖನೌ ಬೌಲರ್‌ಗಳಿಗೆ ಸವಾಲಾದ ಇವರಿಬ್ಬರು ಪವರ್ ಪ್ಲೇನಲ್ಲಿ 100 ರನ್ ಕಸಿದರು. ಟ್ರಾವಿಸ್ 16, ಅಭಿಷೇಕ್ 19 ಎಸೆತಗಳಲ್ಲಿ ವೈಯಕ್ತಿಕ ಅರ್ಧಶತಕ ಪೂರೈಸಿದರು. 5 ರನ್ ಬೇಕಿದ್ದಾಗ ಸಿಕ್ಸರ್ ಸಿಡಿಸಿದ ಅಭಿಷೇಕ್ ಸನ್‌ರೈಸರ್ಸ್ ಗೆಲುವು ಸಾರಿದರು.