ಕ್ರೀಡೆ

ಹ್ಯಾಟ್ರಿಕ್​ ಸಹಿತ ಇನಿಂಗ್ಸ್​ನ ಎಲ್ಲ 10 ವಿಕೆಟ್​ ಕಬಳಿಸಿದ ಬಿಹಾರ ಸ್ಪಿನ್ನರ್​ ಸುಮನ್​!

ಪಟನಾ: ಬಿಹಾರದ ಎಡಗೈ ಸ್ಪಿನ್ನರ್​ ಸುಮನ್​ ಕುಮಾರ್​ 19 ವಯೋಮಿತಿಯ ಕೂಚ್​ ಬೆಹಾರ್​ ಟ್ರೋಫಿ ಕ್ರಿಕೆಟ್​ ಟೂರ್ನಿಯ ಪಂದ್ಯದಲ್ಲಿ ರಾಜಸ್ಥಾನ ವಿರುದ್ಧ ಹ್ಯಾಟ್ರಿಕ್​ನೊಂದಿಗೆ ಇನಿಂಗ್ಸ್​ನ ಎಲ್ಲ 10 ವಿಕೆಟ್​ ಕಬಳಿಸಿದ ಅಪರೂಪದ ಸಾಧನೆ ಮಾಡಿದ್ದಾರೆ.

ಸುಮನ್​ ಮೊದಲ ಇನಿಂಗ್ಸ್​ನಲ್ಲಿ 33.5 ಓವರ್​ಗಳ ಸುದೀರ್ ಸ್ಪೆಲ್​ನಲ್ಲಿ 20 ಮೇಡನ್​ ಸಹಿತ 53 ರನ್​ಗಳಿಗೆ 10 ವಿಕೆಟ್​ ಕಬಳಿಸಿದರು. ಇದರೊಂದಿಗೆ ಬಿಹಾರದ 467 ರನ್​ಗಳಿಗೆ ಪ್ರತಿಯಾಗಿ ರಾಜಸ್ಥಾನ 182 ರನ್​ಗಳಿಗೆ ಸರ್ವಪತನ ಕಂಡು ಫಾಲೋಆನ್​ಗೆ ಸಿಲುಕಿತು.

2ನೇ ಇನಿಂಗ್ಸ್​ನಲ್ಲಿ 5 ವಿಕೆಟ್​ಗೆ 410 ರನ್​ ಗಳಿಸುವ ಮೂಲಕ ರಾಜಸ್ಥಾನ ಡ್ರಾ ಸಾಧಿಸಿತು. 2ನೇ ಇನಿಂಗ್ಸ್​ನಲ್ಲಿ ಸುಮನ್​ 49 ಓವರ್​ ಎಸೆದು 88 ರನ್​ಗಳಿಗೆ 1 ವಿಕೆಟ್​ ಗಳಿಸಲಷ್ಟೇ ಶಕ್ತರಾದರು.