ನವದೆಹಲಿ: ನಿನ್ನೆ (ನ.02) ಮುಂಬೈನ ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ನಡೆದ ಭಾರತ (Team India) ಮತ್ತು ದಕ್ಷಿಣ ಆಫ್ರಿಕಾ ನಡುವಿನ ಮಹಿಳಾ ಏಕದಿನ ವಿಶ್ವಕಪ್ ಫೈನಲ್ ಪಂದ್ಯದಲ್ಲಿ 52 ರನ್ಗಳಿಂದ ಗೆದ್ದ(Captain) ಹರ್ಮನ್‌ಪ್ರೀತ್ ಕೌರ್ ಪಡೆ, ಚೊಚ್ಚಲ ವಿಶ್ವಕಪ್ ಟ್ರೋಫಿಗೆ ಮುತ್ತಿಡುವ ಮೂಲಕ ಹೊಸ ಇತಿಹಾಸಕ್ಕೆ ಸಾಕ್ಷಿಯಾಯಿತು.
ಜಗತ್ತಿನಾದ್ಯಂತ ಜಯದ ಶುಭಾಷಗಳು ಹರಿದು ಬರಿತ್ತಿದ್ದು, ದೇಶಾದ್ಯಂತ ಸಂಭ್ರಮ ಮನೆ ಮಾಡಿದೆ. ಆದರೆ, ಮ ಇದೀಗ ನಾಯಕಿ ಹರ್ಮನ್‌ಪ್ರೀತ್ ಕೌರ್ ಅವರನ್ನು ನಾಯಕತ್ವ ಸ್ಥಾನದಿಂದ ಕೆಳಗಿಳಿಸುವಂತೆ ಬಿಸಿಸಿಐಗೆ ಭಾರತೀಯ ಮಹಿಳಾ ತಂಡದ ಮಾಜಿ ನಾಯಕಿ ಶಾಂತಾ ರಂಗಸ್ವಾಮಿ ಒತ್ತಾಯಿಸಿದ್ದಾರೆ. ಅಲ್ಲದೆ, 29ರ ಯುವತಿ ಸ್ಟಾರ್ ಬ್ಯಾಟರ್ ಸ್ಮೃತಿ ಮಂಧಾನ ಅವರನ್ನು ಹೊಸ ನಾಯಕಿಯಾಗಿ ನೇಮಿಸಿಕೊಳ್ಳುವಂತೆ ಬಿಸಿಸಿಐಗೆ ಒತ್ತಾಯಿಸಿದ್ದಾರೆ ಎಂದು ಸೋಮವಾರ ವರದಿ ಆಗಿದೆ.
ಹರ್ಮನ್ ಒಬ್ಬ ಬ್ಯಾಟ್ಸ್‌ಮನ್ ಮತ್ತು ಫೀಲ್ಡರ್ ಆಗಿ ಅದ್ಭುತ. ಹೌದು. ಆದರೆ, ಯುದ್ಧತಂತ್ರದ ದೃಷ್ಟಿಯಿಂದ, ಅವರು ಕೆಲವೊಮ್ಮೆ ಎಡವಬಹುದು. ನಾಯಕತ್ವದ ಹೊರೆ ಇಲ್ಲದೆ ಇದ್ದರೆ ಅವರು ಹೆಚ್ಚಿನ ಕೊಡುಗೆ ನೀಡಬಹುದು ಎಂದು ನಾನು ಭಾವಿಸುತ್ತೇನೆ" ಎಂದು ರಂಗಸ್ವಾಮಿ ಸುದ್ದಿ ಸಂಸ್ಥೆ ಪಿಟಿಐಗೆ ಹೇಳಿದರು.
ಭಾರತೀಯ ಕ್ರಿಕೆಟ್‌ನ ಹಿತದೃಷ್ಟಿಯಿಂದ ಮತ್ತು ಹರ್ಮನ್ ಅವರ ಸ್ವಂತ ಹಿತದೃಷ್ಟಿಯಿಂದ ನಾಯಕತ್ವದ ಹೊರೆಯಿಲ್ಲದೆ ಅವರು ಬ್ಯಾಟ್ಸ್‌ಮನ್ ಆಗಿ ಹೆಚ್ಚಿನ ಕೊಡುಗೆ ನೀಡಬಹುದು ಎಂದು ನಾನು ಭಾವಿಸುತ್ತೇನೆ" ಎಂದು ರಂಗಸ್ವಾಮಿ ಹೇಳಿದರು.
ತಂಡದ ದೀರ್ಘಾವಧಿಯ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಏನೆಲ್ಲಾ ಬದಲಾವಣೆ ಮಾಡಬೇಕು ಎಂದು ತಿಳಿಸಿದ ಅವರು. ಮುಂದಿನ ಏಕದಿನ ವಿಶ್ವಕಪ್ 2029 ಕ್ಕೆ ನಿಗದಿಯಾಗಿದ್ದು, ಟಿ20 ವಿಶ್ವಕಪ್ 2026 ರಲ್ಲಿ ಯುನೈಟೆಡ್ ಕಿಂಗ್‌ಡಮ್‌ನಲ್ಲಿ ನಡೆಯಲಿದೆ. 29 ವರ್ಷದ ಸ್ಟಾರ್ ಓಪನರ್ ಮಂಧಾನ ಹೊಸ ನಾಯಕಿಗೆ ಸ್ಪಷ್ಟ ಆಯ್ಕೆ ಎಂದು ರಂಗಸ್ವಾಮಿ ಹೇಳಿದರು.(ಏಜೆನ್ಸೀಸ್)