ಭುವನೇಶ್ವರ್​ ಕುಮಾರ್​ ಸಂಗ್ರಹ ಚಿತ್ರ
ಕ್ರೀಡೆ

ನಾಲ್ಕು ವರ್ಷಗಳ ಬಳಿಕ ಭಾರತ ಟಿ20 ತಂಡಕ್ಕೆ ಮರಳಿದ ಆರ್​ಸಿಬಿ ಗೆಲುವಿನ ಹೀರೋ!

2022ರ ನಂತರ ಟೀಮ್​ ಇಂಡಿಯಾದಲ್ಲಿ ಸ್ಥಾನ ಪಡೆದ ವೇಗಿ ಭುವನೇಶ್ವರ್​ ಕುಮಾರ್​

ಬೆಂಗಳೂರು: ಆರ್​ಸಿಬಿ ತಂಡ ಸತತ 2 ಬಾರಿ ಐಪಿಎಲ್​ ಟ್ರೋಫಿ ಗೆಲ್ಲಲು ನೆರವಾಗಿದ್ದ ಅನುಭವಿ ವೇಗಿ ಭುವನೇಶ್ವರ್​ ಕುಮಾರ್​ 4 ವರ್ಷಗಳ ಬಳಿಕ ಭಾರತ ತಂಡಕ್ಕೆ ಮರಳಿದ್ದಾರೆ. ಅ.22ರಿಂದ ನ್ಯೂಜಿಲೆಂಡ್​ ಪ್ರವಾಸದಲ್ಲಿ ಆಡಲಿರುವ 5 ಪಂದ್ಯಗಳ ಟಿ20 ಸರಣಿಗೆ 36 ವರ್ಷದ ಭುವಿ ಭಾರತ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಜತೆಗೆ ಮಿಸ್ಟರಿ ಸ್ಪಿನ್ನರ್​ ವರುಣ್​ ಚಕ್ರವರ್ತಿ ಕೂಡ ಗಾಯದಿಂದ ಚೇತರಿಸಿಕೊಂಡು ಮರಳಿದ್ದರೆ, ರವಿ ಬಿಷ್ಣೋಯಿ ಹೊರಬಿದ್ದಿದ್ದಾರೆ. ಭುವಿ 2022ರ ನವೆಂಬರ್​ನಲ್ಲಿ ಕೊನೆಯದಾಗಿ ಟಿ20 ವಿಶ್ವಕಪ್​ನಲ್ಲಿ ಭಾರತ ಪರ ಆಡಿದ್ದರು.

ಟಿ20 ತಂಡ: ಶ್ರೇಯಸ್​ ಅಯ್ಯರ್​ (ನಾಯಕ), ಅಭಿಷೇಕ್​ ಶರ್ಮ, ಸಂಜು ಸ್ಯಾಮ್ಸನ್​ (ವಿ.ಕೀ), ವೈಭವ್​ ಸೂರ್ಯವಂಶಿ, ಇಶಾನ್​ ಕಿಶನ್​ (ವಿ.ಕೀ), ತಿಲಕ್​ ವರ್ಮ (ಉಪನಾಯಕ), ಅಕ್ಷರ್​ ಪಟೇಲ್​, ಶಿವಂ ದುಬೆ, ನಿತೀಶ್​ ರೆಡ್ಡಿ, ನಮನ್​ ಧೀರ್​, ಪ್ರಿನ್ಸ್​ ಯಾದವ್​, ಮಯಾಂಕ್​ ಯಾದವ್​, ಅರ್ಷದೀಪ್​ ಸಿಂಗ್​, ಭುವನೇಶ್ವರ್​ ಕುಮಾರ್​, ವರುಣ್​ ಚಕ್ರವರ್ತಿ, ಕುಲದೀಪ್​ ಯಾದವ್​.

ಭಾರತ ಎ ತಂಡಕ್ಕೆ ತ್ರಿವಳಿ ಕನ್ನಡಿಗರು

ನ್ಯೂಜಿಲೆಂಡ್​ ಪ್ರವಾಸ ಕೈಗೊಳ್ಳಲಿರುವ ಧ್ರುವ ಜುರೆಲ್​ ಸಾರಥ್ಯದ ಭಾರತ ಎ ತಂಡದಲ್ಲಿ ಮೂವರು ಕನ್ನಡಿಗರು ಸ್ಥಾನ ಪಡೆದಿದ್ದಾರೆ. ಅವರೆಂದರೆ ಕೆಎಲ್​ ರಾಹುಲ್​, ದೇವದತ್​ ಪಡಿಕ್ಕಲ್​ ಮತ್ತು ಆರ್​. ಸ್ಮರಣ್​. ಭಾರತ ಎ ತಂಡ ಅಕ್ಟೋಬರ್​ 24ರಿಂದ ನ್ಯೂಜಿಲೆಂಡ್​ ಎ ವಿರುದ್ಧ 3 ಚತುರ್ದಿನ ಪಂದ್ಯಗಳನ್ನು ಆಡಲಿದ್ದು, ಇದು ಟೆಸ್ಟ್​ ಸರಣಿಯ ಪೂರ್ವಸಿದ್ಧತೆಗೆ ನೆರವಾಗಲಿದೆ.

ಭಾರತ ಎ: ಯಶಸ್ವಿ ಜೈಸ್ವಾಲ್​, ಕೆಎಲ್​ ರಾಹುಲ್​, ದೇವದತ್​ ಪಡಿಕ್ಕಲ್​, ರವಿಚಂದ್ರನ್​ ಅಶ್ವಿನ್​, ರಿಷಭ್​ ಪಂತ್​ (ವಿ.ಕೀ), ಧ್ರುವ ಜುರೆಲ್​ (ನಾಯಕ, ವಿ.ಕೀ), ವಾಷಿಂಗ್ಟನ್​ ಸುಂದರ್​, ಅಕಿಬ್​ ನಬಿ, ಆಕಾಶ್​ದೀಪ್​, ಅಂಶುಲ್​ ಕಂಬೋಜ್​, ಮಾನವ್​ ಸುಥಾರ್​, ಮುಕೇಶ್​ ಚೌಧರಿ, ಸಾಯಿ ಸುದರ್ಶನ್​, ಯಶ್​ ರಾಥೋಡ್​, ಮುಕೇಶ್​ ಕುಮಾರ್​.