ಕ್ರೀಡೆ

ಯುಪಿ ವಾರಿಯರ್ಸ್‌ ಎದುರು ಗೆದ್ದ ಗುಜರಾತ್: ಅಂಕಪಟ್ಟಿಯಲ್ಲಿ ಜಿಗಿತ, ಪ್ಲೇಆಫ್ ಆಸೆ ಜೀವಂತ

ಲಖನೌ: ಆಸೀಸ್ ತಾರೆ ಬೆತ್ ಮೂನಿ (96* ರನ್, 59 ಎಸೆತ, 17 ಬೌಂಡರಿ) ಭರ್ಜರಿ ಬ್ಯಾಟಿಂಗ್ ನೆರವಿನಿಂದ ಗುಜರಾತ್ ಜೈಂಟ್ಸ್ ತಂಡ ಮೂರನೇ ಆವೃತ್ತಿಯ ವುಮೆನ್ಸ್ ಪ್ರೀಮಿಯರ್ ಲೀಗ್‌ನಲ್ಲಿ (ಡಬ್ಲುೃಪಿಎಲ್) ಆತಿಥೇಯ ಯುಪಿ ವಾರಿಯರ್ಸ್‌ ಎದುರು 81 ರನ್‌ಗಳ ಬೃಹತ್ ದಾಖಲಿಸಿದೆ. ಇದರೊಂದಿಗೆ ಆಶ್ಲೇ ಗಾರ್ಡ್‌ನರ್ ಬಳಗ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೇರಿದ್ದು, ಪ್ಲೇಆಫ್ ಆಸೆ ಜೀವಂತವಿರಿಸಿದೆ.

ಏಕನಾ ಕ್ರೀಡಾಂಗಣದಲ್ಲಿ ಸೋಮವಾರ ಆರಂಭಗೊಂಡ ಲಖನೌ ಚರಣದ ಮೊದಲ ಪಂದ್ಯದಲ್ಲಿ ಟಾಸ್ ಸೋತ ಗುಜರಾತ್ ಜೈಂಟ್ಸ್ ಆರಂಭಿಕ ಆಘಾತ ಕಂಡಿತು. ಆಗ ಬೆತ್ ಮೂನಿ ಹಾಗೂ ಹರ್ಲೀನ್ ಡಿಯೋಲ್ (45 ರನ್, 32 ಎಸೆತ, 6 ಬೌಂಡರಿ) ನಡೆಸಿದ ಶತಕದ ಜತೆಯಾಟದ ನೆರವಿನಿಂದ ಗುಜರಾತ್ ಜೈಂಟ್ಸ್ 5 ವಿಕೆಟ್‌ಗೆ 186 ರನ್ ಬೃಹತ್ ಮೊತ್ತ ಪೇರಿಸಿತು. ಪ್ರತಿಯಾಗಿ 36 ರನ್‌ಗಳಿಗೆ ಅಗ್ರ 5 ವಿಕೆಟ್ ಕಳೆದುಕೊಂಡು ಚೇಸಿಂಗ್‌ನಲ್ಲಿ ಲಯ ತಪ್ಪಿದ ಯುಪಿ ವಾರಿಯರ್ಸ್‌ ಅಂತಿಮವಾಗಿ 17.1 ಓವರ್‌ಗಳಲ್ಲಿ 105 ರನ್‌ಗಳಿಗೆ ಸರ್ವಪತನ ಕಂಡಿತು.

ಗುಜರಾತ್ ಜೈಂಟ್ಸ್: 5 ವಿಕೆಟ್‌ಗೆ 186 (ಬೆತ್ ಮೂನಿ 96*, ಡಿ.ಹೇಮಲತಾ 2, ಹರ್ಲೀನ್ ಡಿಯೋಲ್ 45, ಆಶ್ಲೇ ಗಾರ್ಡ್‌ನರ್ 11, ಡಿಯೆಂಡ್ರಾ ಡಾಟಿನ್ 17, ಲಿಚ್ಛಿಫೀಲ್ಡ್ 8, ಭಾರತಿ 2*, ಎಕ್ಲೆಸ್ಟೋನ್ 34ಕ್ಕೆ 2, ಚಿನೆಲ್ಲೆ ಹೆನ್ರಿ 31ಕ್ಕೆ 1). ಯುಪಿ ವಾರಿಯರ್ಸ್‌: 17.1 ಓವರ್‌ಗಳಲ್ಲಿ 105 (ಗ್ರೇಸ್ ಹ್ಯಾರಿಸ್ 25, ಕಿರಣ್ 0, ಜಾರ್ಜಿಹ್ಯಾ ವೋಲ್ 0, ವೃಂದಾ 1, ದೀಪ್ತಿ ಶರ್ಮ 6, ಶ್ವೇತಾ 5, ಉಮಾ 17, ಚಿನೆಲ್ಲೆ 28, ಎಕ್ಲೆಸ್ಟೋನ್ 14*, ಕಾಶ್ವಿ ಗೌತಮ್ 11ಕ್ಕೆ 3, ಡಿಯೆಂಡ್ರಾ 14ಕ್ಕೆ 2, ತನುಜಾ 17ಕ್ಕೆ 3).