ಕ್ರೀಡೆ

ಬೆಂಗಳೂರಿನಲ್ಲಿ ದೇಶದ ಮೊದಲ 100ಕಿಮೀ ವಿಶ್ವ ಚಾಂಪಿಯನ್‌ಷಿಪ್

ಬೆಂಗಳೂರು: ಜಿಕೆವಿಕೆ ಕ್ಯಾಂಪಸ್‌ನಲ್ಲಿ ಇತ್ತೀಚೆಗೆ ದೇಶದ ಮೊದಲ 100 ಕಿ.ಮೀ. ವಿಶ್ವ ಚಾಂಪಿಯನ್‌ಷಿಪ್ ನಡೆಯಿತು. ಅಂತಾರಾಷ್ಟಿಥಯ ಅಲ್ಟಾರನ್ನರ್ಸ್ ಅಸೋಸಿಯೇಷನ್ (ಐಎಯು) ಮತ್ತು ವರ್ಲ್ಡ್ ಮಾಸ್ಟರ್ಸ್‌ ಅಥ್ಲೆಟಿಕ್ಸೃ್ (ಡಬ್ಲ್ಯೂಎಂಎ) ಸಹಯೋಗದಲ್ಲಿ ಎನ್‌ಇಬಿ ಸ್ಪೋರ್ಟ್ಸ್ ಈ ಚಾಂಪಿಯನ್‌ಷಿಪ್ ಅನ್ನು ದೇಶದಲ್ಲೇ ಮೊದಲ ಬಾರಿ ಆಯೋಜಿಸಿತ್ತು. ಜಗತ್ತಿನ 40 ದೇಶಗಳಿಂದ 250ಕ್ಕೂ ಹೆಚ್ಚು ಅಥ್ಲೀಟ್‌ಗಳು ಭಾಗವಹಿಸಿದ್ದರು.

100 ಕಿಮೀ ಓಟದ ಸ್ಪರ್ಧೆಯ ಫಲಿತಾಂಶ ಇಂತಿದೆ:

ಪುರುಷರ ವೈಯಕ್ತಿಕ ವಿಭಾಗ

ಪ್ರಥಮ: ಜಪಾನ್ನ ಜುಂಪೇ ಯಮಾಗುಚಿ: 6:12:17 ಗಂಟೆ

ದ್ವಿತೀಯ: ಸ್ಪೇನ್ನ ಅಂಟೋನಿಯೋ ಜೀಸಸ್ ಅಗುಯ್‌ಲರ್: 6:25:54

ತೃತೀಯ: ಜಪಾನ್ನ ಹರುಕಿ ಒಕಾಯಾಮ: 6:37:54

ಮಹಿಳೆಯರ ವೈಯಕ್ತಿಕ ವಿಭಾಗ

ಪ್ರಥಮ: ಫ್ರಾನ್ಸ್ನ ಫ್ರೋರೇನ್ ಹಾಟ್: 7:08:43 ಗಂಟೆ

ದ್ವಿತೀಯ: ಫ್ರಾನ್ಸ್ನ ಮೇರಿ ಆಂಜೆ ಬ್ರೂಮ್‌ಲಾಟ್: 7:12:22

ತೃತೀಯ: ಗ್ರೇಟ್ ಬ್ರಿಟನ್ನ ಸಾರಾ ವೆಬ್‌ಸ್ಟರ್: 7:19:18

ತಂಡ ವಿಭಾಗ (ಪುರುಷರು)

ಪ್ರಥಮ: ಜಪಾನ್ ತಂಡ: 19:30:09 ಗಂಟೆ

ದ್ವಿತೀಯ: ಸ್ಪೇನ್ ತಂಡ: 20:02:32

ತೃತೀಯ: ಗ್ರೇಟ್ ಬ್ರಿಟನ್ ಮತ್ತು ನಾರ್ದರ್ನ್ ಐರ್ಲೆಂಡ್: 20:28:18

ತಂಡ ವಿಭಾಗ (ಮಹಿಳೆಯರು)

ಪ್ರಥಮ: ಫ್ರಾನ್ಸ್ ತಂಡ: 22:27:05 ಗಂಟೆ

ದ್ವಿತೀಯ: ಗ್ರೇಟ್ ಬ್ರಿಟನ್ ಮತ್ತು ನಾರ್ದರ್ನ್ ಐರ್ಲೆಂಡ್: 22:55:50

ತೃತೀಯ: ಅಮೆರಿಕದ ತಂಡ: 23:36:49

ಸ್ಪರ್ಧೆಯಲ್ಲಿ ವೈಯಕ್ತಿಕ ಹಾಗೂ ತಂಡ ವಿಭಾಗವೆರಡರಲ್ಲೂ ಸ್ಪರ್ಧಿಗಳು ತಮ್ಮ ಸಾಮರ್ಥ್ಯ ಪ್ರದರ್ಶಿಸಲು ಅವಕಾಶವಿತ್ತು. ಚಾಂಪಿಯನ್‌ಶಿಪ್‌ನಲ್ಲಿ ಭಾರತದ ಓಟಗಾರರು ಕೂಡ ಅದ್ಭುತ ಪ್ರದರ್ಶನ ನೀಡಿದರು:

1. ಅಮರ್ ದೇವಾನಂದ: 7:13:00 ಗಂಟೆ

2. ವಿಪುಲ್ ಕುಮಾರ್: 7:43:51

ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಐಎಯು ಅಧ್ಯಕ್ಷ ಡಾ.ನದೀಮ್ ಖಾನ್, ಐಎಯು ಏಷ್ಯಾ ಮತ್ತು ಓಷಿಯಾನಾ ರೇಸ್ ಡೈರೆಕ್ಟರ್ ನಾಗರಾಜ್ ಅಡಿಗ, ಸ್ಥಳೀಯ ಆಯೋಜನಾ ಸಮಿತಿಯ ಅಧ್ಯಕ್ಷ ರಾಜೇಂದರ್ ಕಟಾರಿಯಾ (ಐಎಎಸ್), ಅಥ್ಲೆಟಿಕ್ಸೃ್ ಫೆಡರೇಶನ್ ಆ್ ಇಂಡಿಯಾ ಅಧ್ಯಕ್ಷ ಅಡಿಲೆ ಸುಮಾರಿವಾಲಾ ಭಾಗವಹಿಸಿದ್ದರು.